Advertisement

ಉದಯವಾಣಿ ಫಲಶ್ರುತಿ: ಅಂದು ಹೊರಗೆ..!! ಇಂದು ಒಳಗೆ ಶಾಲಾ ಮಕ್ಕಳಿಗೆ ಪಾಠ

06:23 PM Jan 07, 2022 | Team Udayavani |

ದೋಟಿಹಾಳ: ಸಮೀಪದ ಬಿಜಕಲ್ ಗ್ರಾಮದ ಜನತಾ ಬಡವಾಣಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಅಂದು ಹೊರಗೆ ಕುಳಿತು ಪಾಠ ಕೇಳುವ ಮಕ್ಕಳು ಇಂದು ಒಳಗೆ ಕುಳಿತು ಪಾಠ ಕೇಳುವಂತಾಗಿದೆ.

Advertisement

ಕಳೆದ ಡಿ 17ರಂದು ಉದಯವಾಣಿ ದಿನಪತ್ರಿಕೆಯಲ್ಲಿ “ಆವರಣದಲ್ಲೇ ಪಾಠ ಕೇಳುವ ಅನಿವಾರ್ಯತೆ” ಎಂಬ ಶೀರ್ಷಿಕೆಯಲ್ಲಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಶಿಕ್ಷಣ ಇಲಾಖೆ ಹಾಗೂ ಜನಪ್ರತಿನಿಧಿಗಳು ಸಮಸ್ಯೆ ಪರಿಹಾರಕ್ಕೆ ಮುಂದಾದ ಪರಿಣಾಮ, ಇತ್ತೀಚಿಗೆ ಶಾಲೆಯ ಎರಡು ಕೊಠಡಿಗಳಲ್ಲಿ ಇಟ್ಟಿರುವ ಕಾಮಗಾರಿಗಳ ಸಾಮಗ್ರಿಗಳು ತೆರವು ಮಾಡಿ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ಮಾಡಿದ್ದಾರೆ. ಹೀಗಾಗಿ ಅಂದು ಹೊರಗೆ ಕುಳಿತು ಪಾಠ ಕೇಳುವ ಮಕ್ಕಳು ಇಂದು ಒಳಗೇ ಕುಳಿತು ಪಾಠ ಕೇಳುವಂತಾಗಿದೆ.

ಹಿನ್ನೆಲೆ
ಈ ಶಾಲೆ 1ರಿಂದ 5ನೇ ತರಗತಿಯ ವರಗೆ ಸುಮಾರು 104 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಾರೆ. ಶಾಲೆಯಲ್ಲಿ ಒಟ್ಟು ನಾಲ್ಕು ಕೊಠಡಿಗಳು ಇದ್ದು, ಇದರಲ್ಲಿ ಒಂದು ಕೊಠಡಿಯನ್ನು ಕಾರ್ಯಲಯ ಮಾಡಿಮಾಡಿಕೊಂಡಿದ್ದಾರೆ. ಉಳಿದ ಮೂರು ಕೊಠಡಿಗಳಲ್ಲಿ ಎರಡು ಕೊಠಡಿಗಳು ಶಾಲಾ ಕಾಂಪೌಂಡ್ ಮತ್ತು ಬಿಸಿಯೂಟದ ಕೊಠಡಿಯ ಕಾಮಗಾರಿಗಳ ಸಾಮಗ್ರಿಗಳು ಇಟ್ಟಿರುವುದರಿಂದ ಕೇವಲ ಒಂದು ಕೊಠಡಿಯಲ್ಲಿ ಮಾತ್ರ 1 ಮತ್ತು 2ನೇ ತರಗತಿಯ ಮಕ್ಕಳಿಗೆ ಪಾಠ ಮಾಡುತ್ತಿದರು. ಉಳಿದ 3,4 ಮತ್ತು 5ನೇ ತರಗತಿಯ ಮಕ್ಕಳಿಗೆ ಕೊಠಡಿಯ ಕೊರತೆಯಿಂದ ಮಕ್ಕಳು ಬಿಸಿಲು, ಗಾಳಿ, ಚಳಿಯಲ್ಲಿ ಶಾಲಾ ವರಾಂಡದಲ್ಲಿ ಕೂರಿಸಿ ಶಿಕ್ಷಕರು ಪಾಠ ಹೇಳುತ್ತಿದ್ದರು. ಇದರ ಬಗ್ಗೆ ಪತ್ರಿಕೆಯಲ್ಲಿ, ಮತ್ತು ಆನ್ ಲೈನ್ ವಿಭಾಗದಲ್ಲಿ ಸುದ್ದಿ ಪ್ರಕಟ ಮಾಡಲಾಗಿತ್ತು.

ನಮ್ಮ ಶಾಲಾ ಮಕ್ಕಳಿಗೆ ಕೊಠಡಿಯ ಸಮಸ್ಯೆಯಿಂದ ಮಕ್ಕಳನ್ನು ಹೊರಗಡೆ ಕೂಡಿಸಿ ಪಾಠ ಮಾಡುತ್ತಿದ್ದೆವು.. ಈ ಸುದ್ದಿ ಉದಯವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಮೇಲೆ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಶಾಲಾ ಕೊಠಡಿಗಳಲ್ಲಿ ಇದ ಕಾಮಗಾರಿಗಳ ಸಾಮಗ್ರಿಗಳನ್ನು ಖಾಲಿ ಮಾಡಿ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಹೀಗಾಗಿ ಮಕ್ಕಳು ಇಂದು ಕೊಠಡಿಗಳ ಒಳಗೆ ಕುಳಿತು ಪಾಠ ಕೇಳುತ್ತಿದ್ದಾರೆ.
ರುದ್ರಮ್ಮ ಗುತ್ತೂರು, ಶಾಲಾ ಮುಖ್ಯ ಶಿಕ್ಷಕಿ.

Advertisement

ಬಹುದಿನಗಳ ಮಕ್ಕಳ ಕೊಠಡಿಯ ಸಮಸ್ಯೆಗೆ ಇಂದು ಪರಿಹಾರ ಸಿಕ್ಕಿದ್ದು. ಮಕ್ಕಳು ಶಾಲಾ ಕೊಠಡಿಗಳಲ್ಲಿ ಕುಳಿತು ಪಾಠ ಕೇಳುವಂತಾಗಿದೆ.
ಮಲೇಶ ಕಿರಗಿ, ಸಿಆರ್‌ಪಿ ಬಿಜಕಲ್.

Advertisement

Udayavani is now on Telegram. Click here to join our channel and stay updated with the latest news.

Next