Advertisement
ಕಲಬುರಗಿಯಲ್ಲಿ ಡ್ಯಾಂ ನಿರ್ವಹಣೆ ಎಂಜಿನಿಯರ್‌ಗೆ ಕಚೇರಿಯೇ ಇಲ್ಲ!ಕಲಬುರಗಿ ವಿಭಾಗದಲ್ಲಿ ನೀರಾವರಿ ಯೋಜನೆ ಹಾಗೂ ಜಲಾಶಯಗಳ ನಿರ್ವಹಣೆ ಮಾಡುವ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್‌ಗೆ ಕಚೇರಿಯೇ ಇಲ್ಲ! ರೈತರಿಗೆ ಭೂ ಪರಿಹಾರ ನೀಡುವ ನಿಟ್ಟಿನಲ್ಲಿ ನ್ಯಾಯಾಲಯ ಕೆಎನ್‌ಎಲ್‌ಎಲ್ ಕಚೇರಿ ಜಪ್ತಿಗೆ ಆದೇಶ ನೀಡಿದ್ದರಿಂದ ಕಚೇರಿಯ ಪೀಠೊಪಕರಣ ತೆಗೆದುಕೊಂಡು ಹೋಗಲಾಗಿದೆ. ಹೀಗಾಗಿ ಮುಖ್ಯ ಎಂಜಿನಿಯರ್‌ಗೆ ಕಚೇರಿಯೇ ಇಲ್ಲ. ಕಚೇರಿಯೇ ಇಲ್ಲ ಎಂದಾದ ಮೇಲೆ ಕಾರ್ಯ ಎಲ್ಲಿಂದ ಎನ್ನುವಂತಾಗಿದೆ.
ಮಧ್ಯಕರ್ನಾಟಕದ ಜೀವನಾಡಿ ಯಾಗಿರುವ ಭದ್ರಾ ಜಲಾಶಯದಲ್ಲಿ ಸಾಕಷ್ಟು ಲೋಪಗಳು ಕಂಡು ಬಂದಿವೆ. 60 ವರ್ಷದ ಸನಿಹದಲ್ಲಿರು ಅಣೆಕಟ್ಟೆಯ ನದಿಮಟ್ಟದ ಸ್ಲೈಸ್ ಗೇಟ್ ಕಳೆದ ಜೂನ್‌ನಲ್ಲಿ ಹಾಳಾಗಿ ಹೋಗಿದ್ದರಿಂದ ಅಪಾರ ಪ್ರಮಾಣದಲ್ಲಿ ನೀರು ಪೋಲಾಗಿತ್ತು. 48 ಗಂಟೆಗಳ ಕಾಲ ಸತತ ಯತ್ನದ ಬಳಿಕ ತಾತ್ಕಾಲಿಕ ದುರಸ್ತಿಯನ್ನು ಮಾಡಲಾಗಿದೆ. 2017ರಿಂದ 2019ರವರೆಗೆ ನಿರ್ವಹಣಾ ಕಾಮಗಾರಿ ನಡೆಸಲಾಗಿದ್ದರೂ ರಿವರ್ ಬೆಡ್ ಕಿತ್ತು ಬಂದಿದೆ. ಎಡದಂಡೆ ಕಾಲುವೆಯಲ್ಲಿ ಪ್ರತಿ ದಿನ 150 ಕ್ಯೂಸೆಕ್‌ಗೂ ಅಧಿಕ ನೀರು ಸೋರಿಕೆಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಕಾಲುವೆ ಗೇಟ್‌ಗಳು 60 ಅಡಿ ಆಳದಲ್ಲಿ ಇರುವುದರಿಂದ ಅಲ್ಲಿಗೆ ಹೋಗಿ ನಿರ್ವಹಣೆ ಮಾಡುವುದು ಕಷ್ಟಸಾಧ್ಯ. ನೀರು ಖಾಲಿಯಾದರೆ ಮಾತ್ರ ಸಾಧ್ಯ ಎನ್ನುತ್ತಾರೆ ತಜ್ಞರು. ಕಬಿನಿ ಅಣೆಕಟ್ಟು
Related Articles
ಅನುದಾನ ಕೊರತೆಯಿಂದ ದುರಸ್ತಿ ಕಾಮಗಾರಿಗಳು ಸ್ಥಗಿತವಾಗಿರುವ ಹಿನ್ನೆಲೆ ಕಬಿನಿ ಜಲಾಶಯ ಶಿಥಿಲಾವಸ್ಥೆಗೆ ತಲುಪುವ ಆತಂಕ ಎದುರಾಗಿದೆ. ಕಟ್ಟೆಯ ಕೆಲ ಭಾಗದಲ್ಲಿ ನೀರು ಸೋರಿಕೆಯಾಗುತ್ತಿರುವುದನ್ನು ತಡೆಯಲು, ಬಿರುಕು ಮುಚ್ಚಲು, ಜಲಾಶಯದಲ್ಲಿನ ನೀರಿನೊಳಗೆ ಪಾಂಟಿಂಗ್ ಹಾಕುವುದು ಹಾಗೂ ನಿರ್ವಹಣೆ ಸಂಬಂಧ 2020-21ರಲ್ಲೇ 92 ಕೋಟಿ ರೂ. ಕ್ರಿಯಾ ಯೋಜನೆ ತಯಾರಿಸಿ ಸರ್ಕಾರಕ್ಕೆ ವರದಿ ನೀಡಲಾಗಿದೆ. ಪ್ರಸ್ತಾವನೆ ಸಲ್ಲಿಸಿ ನಾಲ್ಕು ವರ್ಷವಾದರೂ ಈವರೆಗೆ ನಯಾಪೈಸೆ ಬಿಡುಗಡೆಯಾಗಿಲ್ಲ. ದಂಡೆಯ ಸ್ಲೋಯಿಸ್ ವಾಲ್ ಶಿಥಿಲವಾಗಿದ್ದು, ಹೆಚ್ಚು ಪ್ರಮಾಣದಲ್ಲಿ ನೀರು ಸೋರಿಕೆಯಾಗುತ್ತಿದೆ. ಜತೆಗೆ ನದಿಗೆ ನೀರು ಬಿಡಲು ಇರುವ ಸ್ಲೈಸ್ ವಾಲ್ ಕೂಡ ಶಿಥಿಲವಾಗಿದೆ ಎಂಬ ಆರೋಪಗಳು ಕೇಳಿ ಬರುತ್ತವೆ.
Advertisement
ಯಾದಗಿರಿ ಜಿಲ್ಲೆ, ವಯಸ್ಸು: 42 ವರ್ಷ
ಜಿಲ್ಲೆಯ ನಾರಾಯಣಪುರ ಬಸವಸಾಗರ ಜಲಾಶಯದ 5ನೇ ಕ್ರಸ್ಟ್‌ಗೇಟ್ 2005, ಅ.6ರಂದು ಕಿತ್ತು ಹೋಗಿತ್ತು. ಆಗ ಸರ್ಕಾರ ಸಮರೋಪಾದಿಯಲ್ಲಿ ದುರಸ್ತಿ ಕಾರ್ಯ ಮಾಡುವ ಮೂಲಕ ಪುನಃ ಹೊಸ ಗೇಟ್ ಅಳವಡಿಸಲಾಗಿತ್ತು. 30 ಕ್ರಸ್ಟ್‌ಗೇಟ್‌ಗಳಿದ್ದು ಪ್ರತಿವರ್ಷ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಆದರೆ ಕಳೆದ ಒಂದೂವರೆ ವರ್ಷದಿಂದ ಯಾವುದೇ ಕೆಲಸ ಮಾಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕೃಷ್ಣರಾಜಸಾಗರ
ಮಂಡ್ಯ ಜಿಲ್ಲೆ, ವಯಸ್ಸು: 93 ವರ್ಷ ದಕ್ಷಿಣ ಕರ್ನಾಟಕದ ಜೀವನಾಡಿ ಕೃಷ್ಣರಾಜಸಾಗರದ ಸುರಕ್ಷೆ ಬಗ್ಗೆ ಹಲವು ಸಮಯಗಳಿಂದ ಆತಂಕ ವ್ಯಕ್ತವಾಗುತ್ತಲೇ ಇದೆ. ಅಣೆಕಟ್ಟೆ ಸುತ್ತಮುತ್ತ ಗಣಿಗಾರಿಕೆಯಿಂದ ಜಲಾಶಯದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂಬ ವಿಷಯ ಚರ್ಚೆಯಲ್ಲಿದೆ. ಅಲ್ಲದೆ, ಟ್ರಯಲ್ ಬ್ಲಾಸ್ಟ್ ನಡೆಸುವ ಬಗ್ಗೆ ವಿರೋಧಗಳು ವ್ಯಕ್ತವಾಗಿವೆ. ಈಗ ಸರ್ಕಾರ ಕೈಗೆತ್ತಿಕೊಂಡಿರುವ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣದಿಂದ ಜಲಾಶಯಕ್ಕೆ ಧಕ್ಕೆ ತರುವ ಆತಂಕ ವ್ಯಕ್ತವಾಗಿದೆ. ಪ್ರವಾಹ ಎದುರಾದರೆ ತಡೆಯುವ ಸ್ಟಾಪ್‌ಲಾಕ್ ಗೇಟ್ ವ್ಯವಸ್ಥೆ ಇಲ್ಲ. ಸ್ವಯಂ ಚಾಲಿತ ಗೇಟುಗಳನ್ನಾಗಿ ಮಾರ್ಪಾಡು ಕಾಮಗಾರಿ ಪ್ರಗತಿಯಲ್ಲಿದೆ. ಸೊನ್ನ ಬ್ಯಾರೇಜ್
ಕಲಬುರಗಿ ಜಿಲ್ಲೆ, ವಯಸ್ಸು: 14 ವರ್ಷ
ಜಿಲ್ಲೆಯ ಸೊನ್ನ ಬಳಿಯ ಭೀಮಾ ನದಿಗೆ ಅಡ್ಡಲಾಗಿ ಸುಕ್ಷೇತ್ರ ದೇವಲ್ ಗಾಣಗಾಪುರ ಬಳಿ ನಿರ್ಮಿಸಿರುವ ಬ್ರಿಡ್ಜ್ ಕಂ ಬ್ಯಾರೇಜ್‌ಗೆ ಹೈಡ್ರೋಲಿಕ್ ಗೇಟ್‌ಗಳೇ ಇಲ್ಲ. ಮಾನವ ಆಧಾರಿತದಿಂದಲೇ ಗೇಟ್‌ಗಳನ್ನು ನಿರ್ವ ಹಿಸ ಲಾಗು ತ್ತಿದೆ. ಹೀಗಾಗಿ ನೀರು ಯಥೇತ್ಛವಾಗಿ ಪೋಲಾಗುತ್ತಿದೆ. ನದಿ ಯಿಂದ ಮರಳು ಎತ್ತುವಳಿ ಮಾಡಲು ಗೇಟ್‌ಗಳನ್ನೇ ಮೇಲೆತ್ತಿದ ಉದಾ ಹರಣೆಗಳಿವೆ. ಕೆಳದಂಡೆ ಮುಲ್ಲಾ ನೀರಾವರಿ ಯೋಜನೆ ಜಲಾಶಯ ನೀರು ಸೋರಿಕೆ ಹಾಗೂ ಕಳಪೆ ಕಾಮಗಾರಿ ಬಗ್ಗೆ ಇಡೀ ಸುದ್ದಿಯಾಗಿ ಸದನದಲ್ಲಿ ಚರ್ಚೆಯಾಯಿತಾದರೂ ಪರಿಸ್ಥಿತಿ ಸುಧಾರಣೆ ಯಾಗಿಲ್ಲ. ಚಂದ್ರಂಪಳ್ಳಿ ಜಲಾಶಯದಲ್ಲೂ ನೀರು ಸೋರಿಕೆ ತಡೆಗಟ್ಟಲು ಆಗುತ್ತಿಲ್ಲ. ಸಿಂಗಟಾಲೂರು ಬ್ಯಾರೇಜ್
ಗದಗ ಜಿಲ್ಲೆ, ವಯಸ್ಸು: 12 ವರ್ಷ
ಮುಂಡರಗಿ ತಾಲೂಕಿನ ಹಮ್ಮಿಗಿ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಿರುವ ಸಿಂಗಟಾ ಲೂರು ಹುಲಿಗುಡ್ಡ ಏತ ನೀರಾ ವರಿ ಯೋಜನೆ ಬ್ರಿಡ್ಜ್ ಕಮ್ ಬ್ಯಾರೇಜ್ ಕೂಡ ಲೀಕೇಜ್ ಭೀತಿ ಎದುರಿಸುತ್ತಿದೆ. ಕೊಪ್ಪಳ, ವಿಜಯ ನಗರ, ಗದಗ ಜಿಲ್ಲೆಗಳ 1.7 ಲಕ್ಷ ಎಕರೆ ಜಮೀನಿಗೆ ನೀರುಣಿಸುವ ಬ್ಯಾ ರೇಜ್‌ಗೆ ಒಟ್ಟು 26 ಕ್ರಸ್ಟ್‌ಗೇಟ್‌ಗಳಿದ್ದು, 13ರಲ್ಲಿ ಸೋರಿಕೆ ಕಂಡು ಬರುತ್ತಿದೆ. ಸದ್ಯ 5 ಗೇಟ್‌ಗಳ ಮೂಲಕ ನೀರು ಹರಿಬಿಡಲಾಗುತ್ತಿದೆ.
ಚಿತ್ರದುರ್ಗ ಜಿಲ್ಲೆ, ವಯಸ್ಸು: 117 ವರ್ಷ
“ರಾಜ್ಯದ ಮೊದಲ ಜಲಾಶಯ’ ಚಿತ್ರದುರ್ಗ ಜಿಲ್ಲೆ ಯ ವಾಣಿವಿಲಾಸ ಸಾಗರ ನಿರ್ಮಾಣವಾಗಿ ಈಗ 117 ವರ್ಷ. ಕಲ್ಲು ಮತ್ತು ಸುಣ್ಣದ ಗಾರೆ ಬಳಸಿ ನಿರ್ಮಾಣ ಮಾಡಿರುವ ಈ ಡ್ಯಾಮ್‌ನಲ್ಲಿ ಗೇಟ್ ವ್ಯವಸ್ಥೆ ಇಲ್ಲ. ಬದ ಲಾಗಿ ತೂಬಿನ ವ್ಯವಸ್ಥೆ ಇದೆ. ಬೇರೆ ಜಲಾಶಯಗಳು ಭರ್ತಿಯಾದಾಗ ಕ್ರೆಸ್ಟ್ ಗೇಟ್ ಮೂಲಕ ನೀರು ಹೊರಗೆ ಬಿಡಲಾಗುತ್ತದೆ. ಆದರೆ, ಇಲ್ಲಿ ಕೆರೆಗಳ ಮಾದರಿಯಲ್ಲಿ ಕೋಡಿ ವ್ಯವಸ್ಥೆ ಇದೆ. ಇದು ಅಪಾಯಕಾರಿ.