Advertisement

ಹೋಲ್ಡಿಂಗ್ಸ್‌ ದುರವಸ್ಥೆ; ನಿರ್ವಹಣೆಗಿಲ್ಲ ಆಸ್ಥೆ

08:20 PM May 07, 2022 | Team Udayavani |

ಹುಬ್ಬಳ್ಳಿ: ನಿರ್ವಹಣೆ ಕೊರತೆ ಹಾಗೂಮೇಲ್ವಿಚಾರಣೆ ವೈಫಲ್ಯದಿಂದಾಗಿ ನಗರದಲ್ಲಿಬೃಹದಾಕಾರದ ಹೋಲ್ಡಿಂಗ್ಸ್‌ಗಳು ಜನರ ಪ್ರಾಣಕ್ಕೆಸಂಚಕಾರ ತಂದೊಡ್ಡಿವೆ. ಮಳೆ-ಗಾಳಿಗೆಹರಿದು ಜೋತಾಡುತ್ತಿದ್ದರೂತೆರವುಗೊಳಿಸಬೇಕು ಎನ್ನುವಜವಾಬ್ದಾರಿ ಗುತ್ತಿಗೆದಾರರಿಗಿಲ್ಲ.ಇದನ್ನು ಸಮರ್ಪಕವಾಗಿಮೇಲ್ವಿಚಾರಣೆ ಮಾಡಬೇಕುಎನ್ನುವ ಹೊಣೆಗಾರಿಕೆಪಾಲಿಕೆಗೆ ಇಲ್ಲದಂತಾಗಿದೆ.

Advertisement

ಪಾಲಿಕೆಗೆ ಒಂದಿಷ್ಟುಆದಾಯ ನಿರೀಕ್ಷೆಯಿಂದ ಖಾಸಗಿಕಟ್ಟಡ, ಸ್ಥಳಗಳಲ್ಲಿ ಬೃಹದಾಕಾರದಹೋಲ್ಡಿಂಗ್‌ಗಳಿಗೆ ಅನುಮತಿನೀಡಲಾಗಿದೆ. ಪ್ರತಿಯೊಂದು ಹೋಲ್ಡಿಂಗ್‌ಗೆ ಚದರಡಿ ಲೆಕ್ಕದಲ್ಲಿ ಗುತ್ತಿಗೆದಾರರು ಪಾಲಿಕೆಗೆಅನುಮತಿ ಶುಲ್ಕ ಪಾವತಿ ಮಾಡುತ್ತಾರೆ.

ಆದರೆಸದ್ಯದ ಅವ್ಯವಸ್ಥೆಗಳನ್ನು ನೋಡಿದರೆ ಮಹಾನಗರಪಾಲಿಕೆ ಕೇವಲ ಶುಲ್ಕ ಪಡೆಯುವ ಕಾರ್ಯಕ್ಕೆ ಮಾತ್ರಸೀಮಿತವಾದಂತಿದೆ. ಕಳೆದ ಹತ್ತು ಹದಿನೈದುದಿನಗಳಿಂದ ನಗರದಲ್ಲಿ ಗಾಳಿ, ಮಳೆ ಹೆಚ್ಚಾಗಿದ್ದುಜಾಹೀರಾತು ಫ್ಲೆಕ್ಸ್‌ಗಳು ಹರಿದು ತುಂಡಾಗಿಜೋತಾಡುತ್ತಿವೆ. ಅವುಗಳನ್ನು ತೆರವುಗೊಳಿಸುವಕನಿಷ್ಟ ಕಾರ್ಯವಾಗುತ್ತಿಲ್ಲ. ಇದರಿಂದಾಗಿ ತುಂಡಾಗಿರಸ್ತೆ ಮೇಲೆ ಹೋಗುವ ವಾಹನಗಳ ಬೀಳುತ್ತಿದ್ದು,ಜನರ ಪ್ರಾಣಕ್ಕೆ ಕುತ್ತು ಎನ್ನುವಂತಹ ಪರಿಸ್ಥಿತಿನಿರ್ಮಾಣವಾಗಿದೆ.

ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next