ಪಣಜಿ : ಗೋವಾದ ಕಾಣಕೋಣದಲ್ಲಿರುವ ನಿವಾಸಿಗಳು ವೈದ್ಯಕೀಯ ತಪಾಸಣೆಗಾಗಿ ಕಾರವಾರಕ್ಕೆ ತೆರಳಲು ಡಬಲ್ ಡೋಸ್ ವ್ಯಾಕ್ಸಿನ್ ಪಡೆದುಕೊಂಡವರಿಗೂ ಮಾಜಾಳಿ ಚೆಕ್ ಪೋಸ್ಟ್ ನಲ್ಲಿ ತಡೆದಿದ್ದರಿಂದ ಆಕ್ರೋಶಗೊಂಡ ಗೋವಾದ ನಿವಾಸಿಗಳು ಕಾರವಾರ ಭಾಗದಿಂದ ಗೋವಾಕ್ಕೆ ಆಗಮಿಸುವ ಡಬಲ್ ಡೋಸ್ ವ್ಯಾಕ್ಸಿನ್ ಪಡೆದ ಪ್ರಯಾಣಿಕರನ್ನು ಕೂಡ ತಡೆಹಿಡಿದ ಘಟನೆ ನಡೆದಿದೆ.
ಇದನ್ನೂ ಓದಿ : ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚಳ, 648 ಸಾವು
ಕಾಣಕೋಣ ನಗರಸಭಾ ಅಧ್ಯಕ್ಷ ಸೈಮನ್ ರಿಬೆಲೊ ಹಾಗೂ ನಗರಸೇವಕ ರಮಾಕಾಂತ ನಾಯ್ಕ ರವರು ವೈದ್ಯಕೀಯ ತಪಾಸಣೆಗಾಗಿ ಕಾರವಾರಕ್ಕೆ ತೆರಳುತ್ತಿದ್ದರು. ಆದರೆ ಅವರು ಡಬಲ್ ಡೋಸ್ ವ್ಯಾಕ್ಸಿನ್ ಪಡೆದಿದ್ದರೂ ಕೂಡ ಅವರನ್ನು ಮಾಜಾಳಿ ಚೆಕ್ ಪೋಸ್ಟನಲ್ಲಿ ಕರ್ನಾಟಕ ಪೋಲಿಸರು ತಡೆಹಿಡಿದರು. ಇದರಿಂದಾಗಿ ಕಾರವಾರದಿಂದ ಗೋವಾಕ್ಕೆ ಆಗಮಿಸುವವರನ್ನೂ ಕೂಡ ಗೋವಾದ ಜನತೆ ತಡೆದ ಘಟನೆ ನಡೆದಿದೆ.
ಡಬಲ್ ಡೋಸ್ ವ್ಯಾಕ್ಸಿನ್ ಪಡೆದವರಿಗೆ ಕಾರವಾರ ಭಾಗದಿಂದ ನೇರವಾಗಿ ಗೋವಾ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ.
ಇದನ್ನೂ ಓದಿ : ಕೌನ್ ಬನೇಗಾ ಕರೋಡ್ ಪತಿಯಲ್ಲಿ 5 ಕೋಟಿ ಗೆದ್ದ ಸುಶೀಲ್ ಕುಮಾರ್ ದಿವಾಳಿಯಾಗಿದ್ದು ಹೇಗೆ..?