Advertisement

ನಾಳೆ(ಮೇ.27)ಸಂಜೆ 5ಕ್ಕೆ : ‘ವಿದೇಶದಲ್ಲಿ ದುಡಿಮೆ, ಮನಸು ತಾಯ್ನಾಡಿನಲ್ಲಿ..!’

07:55 PM May 26, 2021 | ಶ್ರೀರಾಜ್ ವಕ್ವಾಡಿ |

ಕೋವಿಡ್ ತಂದ ಸಂಕಷ್ಟ ಅಷ್ಟಿಷ್ಟಲ್ಲ. ಕೋವಿಡ್ ಮಹಾಮಾರಿ ಜಗತ್ತಿನ ನಾಗರಿಕ ವ್ಯವಸ್ಥೆಯ ಮೇಲೆ ಅತ್ಯಂತ ದೊಡ್ಡ ಪರಿಣಾಮ ಬೀರಿದೆ ಎನ್ನುವುದರಲ್ಲಿ ಅನುಮಾನ ಬೇಕಾಗಿಲ್ಲ.

Advertisement

ಈ ಕೋವಿಡ್ ಆರ್ಥಿಕ ಸ್ಥಿತಿಯನ್ನು ಮಾತ್ರ ಬುಡಮೇಲು ಮಾಡಿದ್ದಲ್ಲ. ಜಗತ್ತಿನ ಇಡೀ ಮನುಕುಲದ ಮೇಲೆ ಮಾನಸಿಕವಾಗಿ ಅತ್ಯಂತ ದೊಡ್ಡ ಪರಿಣಾಮ ಬೀರಿದೆ ಎನ್ನುವುದು ಅಕ್ಷರಶಃ ಸತ್ಯ. ಸಂಬಂಧಗಳ ಸಂಪರ್ಕವನ್ನೇ ಬಹುತೇಕ ಕಡಿದು ಹಾಕಿ ಸಂಬಂದಗಳು ದೂರ ಇರುವಂತಹ ಸಂಕಷ್ಟದ ಪರಿಸ್ಥಿತಿಯನ್ನು ಕೋವಿಡ್ ಎಂಬ ಮಹಾಮಾರಿ ತಂದೊಡ್ಡಿದೆ.

ಇದನ್ನೂ ಓದಿ : ಬಿಬಿಎಂಪಿ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಹಾಸಿಗೆ ಹಂಚಿಕೆಗೆ ಸರತಿ ವ್ಯವಸ್ಥೆ : ಸಚಿವ ಲಿಂಬಾವಳಿ

ಉದ್ಯೋಗ ನಿಮಿತ್ತವಾಗಿ ಪರ ಊರಿಗೆ, ಪರ ದೇಶಗಳಿಗೆ ಹೋದವರ ಪಾಡು ಅನುಭವಿಸಿದವರಿಗೆ ಗೊತ್ತು. ಕಳೆದ ಬಾರಿ ಕೋವಿಡ್ ನಿಂದ ಆದ ಸ್ಥಿತಿಯನ್ನು ಪ್ರತ್ಯೇಕಿಸಿ ಹೇಳಬೇಕೆಂದಿಲ್ಲ. ಲಾಕ್ಡೌನ್ ತೆರೆವುಗೊಂಡ ಮೇಲೆ ಮೆಟ್ರೋ ಸಿಟಿಗಳಿಂದ, ಹೊರ ದೇಶಗಳಿಂದ ಬಂದವರನ್ನು ನೆರೆಹೊರೆಯವರು ಮಾತ್ರವಲ್ಲದೇ ಸ್ವತಃ ಮನೆಯವರೇ ಭಿನ್ನವಾಗಿ ಕಂಡದ್ದು ಒಂದು ರೀತಿಯ ನೋವಾದರೇ. ಈ ಕೋವಿಡ್ ನ ಎರಡನೇ ಅಲೆ ತಂದಿಟ್ಟ ಪರಿಸ್ಥಿತಿ ಹೇಳತೀರದು.

ಪರದೇಶಗಳಲ್ಲಿ ಇರುವವರಿಗೆ ಈ ಕೋವಿಡ್ ಎರಡನೇ ಅಲೆಯ ಕಾರಣದಿಂದಾಗಿ ಅಸಹನೀಯ ಸ್ಥಿತಿ ಉಂಟಾಗಿದೆ. ಹುಟ್ಟಿ ಬೆಳೆದ ಊರಿನಲ್ಲಿ ಕೋವಿಡ್ ಮಹಾಮಾರಿ ಹಠಾತ್ ಏರಿಕೆಯಾಗಿ.. ಆಡಿ ಬೆಳೆದ ಮನೆ ಬಾಗಿಲಿಗೆ ಬಂದೀತೋ ಎಂಬ ಭಯ. ಇಂದೋ, ನಾಳೆಯೋ ಎಂಬ ಪರಿಸ್ಥಿತಿಯಲ್ಲಿ ಬದುಕು ದೂಡುತ್ತಿರುವ ಹೆತ್ತವರ ಬಗ್ಗೆ ಚಿಂತೆ ಕಾಡದೇ ಇರುವುದೇ..? ಮನುಷ್ಯ ಸಹಜ ಗುಣವದು. ಹತ್ತಿರ ಹತ್ತಿರ ಒಂದುವರೆ, ಎರಡು ವರ್ಷಗಳೇ ಕಳೆಯಿತು ಈ ಭಯದ ವಾತಾವರಣದಲ್ಲಿ ತಮ್ಮದಲ್ಲದ ಊರಿನಲ್ಲಿ ತಾಯ್ನಾಡಿನ ಬಗ್ಗೆ, ಹೆತ್ತವರ ಬಗ್ಗೆ ಭಯ ಎದುರುಸಿರಿನಲ್ಲೇ ಇಟ್ಟುಕೊಂಡು ಬದುಕುತ್ತಾ… ಮನೆಗೆ ಬರಲು ಸಾಧ್ಯವಾಗುತ್ತಿಲ್ಲ. ಕೋವಿಡ್, ಲಾಕ್ಡೌನ್ ತಂದ ಅಸಹಾಯಕತೆ ಇದು.

Advertisement

ಈ ಅಸಹಾಯಕತೆಯಲ್ಲಿ ಕೊರಗುವವರಿಗೆ ಸಾಂತ್ವಾನ ಹೇಳುವುದಕ್ಕೆ ನಿಮ್ಮ ನೆಚ್ಚಿನ ಉದಯವಾಣಿ ಬಳಗ ಮುಂದಾಗಿದೆ. ನಿಮ್ಮ ಊರ ಪ್ರೀತಿ, ಹೆತ್ತವರ, ಮನೆಯವರ ಭಾವನಾತ್ಮಕ ಕಾಳಜಿ ಹಾಗೂ ವೃತ್ತಿ ಬದುಕಿನ ಜಂಜಾಟದ ಒಟ್ಟು ಮಾನಸಿಕ ಒತ್ತಡಗಳನ್ನು ನಿಭಾಯಿಸುವುದಕ್ಕೆ ಸುಲಭ ಮಾರ್ಗ ಒದಗಿಸಲು ನಾವು ನಿಮ್ಮೊಂದಿಗಿದ್ದೇವೆ.

ನಾಳೆ ಅಂದರೇ 27. 05. 2021(ಗುರುವಾರ) ಭಾರತೀಯ ಕಾಲಮಾನದ ಪ್ರಕಾರ ಸಂಜೆ 5 ಗಂಟೆಗೆ ಡಾ. ತನ್ಮಯ್ ಗೋಸ್ವಾಮಿ ನಿಮ್ಮ ಉದಯವಾಣಿ ಫೇಸ್ ಬುಕ್ ಲೈವ್ ಕಾರ್ಯಕ್ರಮದಲ್ಲಿ ಒಂದಿಷ್ಟು ಸಲಹೆ ಸೂಚನೆಗಳನ್ನು ನೀಡಲಿದ್ದಾರೆ.

ನಿಮ್ಮ ಮಾನಸಿಕ ಒತ್ತಡಗಳನ್ನು ಹಾಗೂ ಭಾವನಾತ್ಮಕ ಅಸಹಾಯಕತೆಯನ್ನು ನಿಭಾಯಿಸಿಕೊಳ್ಳಲು ಈ ಕಾರ್ಯಕ್ರಮ ಸಹಾಯವಾಗಲಿದೆ ಎಂಬ ನಂಬಿಕೆ ನಮ್ಮದು. ವಿಶ್ವಾಸ ನಿಮ್ಮದು.

ಅಂದಿಗೂ, ಇಂದಿಗೂ ಎಂದೆಂದಿಗೂ ಉದಯವಾಣಿ ನಿಮ್ಮೊಂದಿಗೆ.

ಇದನ್ನೂ ಓದಿ :  ಮಸೀದಿಗಳ ಇಮಾಮರು ಮತ್ತು ಮೋಜಿನ್ ರಿಗೆ ಕೋವಿಡ್ ಪರಿಹಾರ ನೀಡುವಂತೆ ಮನವಿ

Advertisement

Udayavani is now on Telegram. Click here to join our channel and stay updated with the latest news.

Next