Advertisement
ಸಾರ್ವಜನಿಕರು ಸಹಿತವಾಗಿ ಅಪಾರ್ಟ್‌ಮೆಂಟ್, ಕಟ್ಟಡ ಮಾಲಕರು, ಪ್ಲಂಬರ್, ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಮುಕ್ತವಾಗಿ ಪಾಲ್ಗೊಳ್ಳಬಹುದಾಗಿದೆ. ನಗರ ಸಭೆಯ ಸ್ವತ್ಛತ ರಾಯಭಾರಿ ಆಗಿರುವ, ಮಳೆ ನೀರು ಕೊಯ್ಲು ತಜ್ಞ ಜೋಸೆಫ್ ಜಿ.ಎಂ. ರೆಬೆಲ್ಲೋ ಅವರು ಮಳೆ ನೀರು ಕೊಯ್ಲು ವಿಧಾನದಲ್ಲಿ ವಿಶೇಷ ಅನುಭವ ಹೊಂದಿದ್ದು, ಕಾರ್ಯಾಗಾರದಲ್ಲಿ ಈ ಬಗ್ಗೆ ತಾಂತ್ರಿಕ ತರಬೇತಿ ನೀಡಲಿದ್ದಾರೆ. ಇವರು ಜಿಲ್ಲೆ ಮತ್ತು ರಾಜ್ಯದ ಕುಡಿಯುವ ನೀರಿನ ಸಂಪನ್ಮೂಲ ಮತ್ತು ಸಮಸ್ಯೆ ಬಗ್ಗೆ ಅರಿತು ವಿವಿಧ ಕಡೆಗಳಲ್ಲಿಶಿಬಿರಾರ್ಥಿಗಳ ಮೂಲಕ 2,500ಕ್ಕೂ ಮಿಗಿಲಾಗಿ ಮಳೆ ನೀರು ಕೊಯ್ಲು, ಜಲ ಮರುಪೂರಣ ಘಟಕ ನಿರ್ಮಿಸಿದ್ದಾರೆ.
ಸಕಲ ಜೀವರಾಶಿಗೆ ಅಗತ್ಯ ಇರುವ ನೀರಿನ ಬಗ್ಗೆ ಜಾಗೃತಿ ಅಗತ್ಯ. ಈ ನಿರಾಸಕ್ತಿಯಿಂದಲೇ ಪ್ರತೀ ವರ್ಷ ಜಲಕ್ಷಾಮ ಎದುರಿಸುತ್ತಿದ್ದೇವೆ. ಮಳೆಗಾಲದಲ್ಲಿ ಮನೆ ಮೇಲೆ ಬೀಳುವ ನೀರನ್ನು ತೆರೆದ ಬಾವಿಗೆ ಅಥವಾ ಕೊಳವೆ ಬಾವಿಗೆ ವೈಜ್ಞಾನಿಕ ರೀತಿಯಲ್ಲಿ ಜಲ ಮರುಪೂರಣ ಮಾಡಿದರೆ ಅತೀ ವೇಗದಲ್ಲಿ ಮತ್ತು ಅತೀ ಹೆಚ್ಚಿನ ಪ್ರಮಾಣದಲ್ಲಿ ಮಳೆ ನೀರನ್ನು ಭೂ ಗರ್ಭದಲ್ಲಿ ಸೇರಿಸಿಕೊಳ್ಳಬಹುದು. ಅಪಾರ ಜಲ ಸಂಪತ್ತನ್ನು ಮತ್ತೆ ಮರು ಪಡೆಯಬಹುದಾಗಿದೆ ಎಂಬುದು ರೆಬೆಲ್ಲೊ
ಅವರ ಆಶಯ.
ಅನೇಕರು ಮನೆಯಲ್ಲಿ ಮಳೆಕೊಯ್ಲು ಮಾಡಬೇಕು ಎಂದುಕೊಂಡಿರುತ್ತಾರೆ. ಆದರೆ ಮಾಡುವ ವಿಧಾನದ ಬಗ್ಗೆ ಗೊಂದಲ,
ಮಾಹಿತಿ ಕೊರತೆ ಅವರಲ್ಲಿದೆ. ಉದಯವಾಣಿ-ಜಿಲ್ಲಾಡಳಿತ ಸಹಯೋಗದಲ್ಲಿ ಮಳೆ ನೀರು ಕೊಯ್ಲು ಮಾಹಿತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅಗತ್ಯ ಮಾಹಿತಿ ಪಡೆದು ಮನೆಯಲ್ಲಿ ಸುಲಭವಾಗಿ ಮಳೆಕೊಯ್ಲು ಅಳವಡಿಸಿಕೊಳ್ಳಬಹುದು.*ಜೋಸೆಫ್ ಜಿ. ಎಂ. ರೆಬೆಲ್ಲೋRelated Articles
Advertisement