ಭರಮಸಾಗರ: ಕಳೆದ ಕೆಲ ವರ್ಷಗಳಿಂದ ಮೆಕ್ಕೆಜೋಳಕ್ಕೆ ಪದೇ ಪದೇ ಸೈನಿಕ ಹುಳು ಬಾಧೆ ಸೇರಿದಂತೆ ನಾನಾ ರೋಗಗಳು ಬಾಧಿಸಿ ರೈತರು ಕೈ ಸುಟ್ಟುಕೊಳ್ಳುತ್ತಿದ್ದರು. ಈ ಹಿನ್ನೆಲೆಯಲ್ಲಿ ರೈತರನ್ನು ಪರ್ಯಾಯ ಬೆಳೆಯತ್ತ ಆಕರ್ಷಿಸುವ ನಿಟ್ಟಿನಲ್ಲಿ ಇದೀಗ ಚಿತ್ರದುರ್ಗ ತಾಲೂಕಿನ ಕೆಲವು ರೈತರ ಜಮೀನುಗಳಲ್ಲಿ ಕೃಷಿ ಇಲಾಖೆಯೇ ಹೊಸ ತಳಿಯ ಸೋಯಾಬಿನ್ ಬೆಳೆ ಬಿತ್ತನೆ ಮಾಡಿಸಿ ರೈತರನ್ನು ಸೆಳೆಯುವ ಯತ್ನ ಮಾಡುತ್ತಿದೆ.
ಭರಮಸಾಗರ ಸಮೀಪದ ಎಮ್ಮೆಹಟ್ಟಿ ಗ್ರಾಮದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೃಷ್ಣಮೂರ್ತಿ ಮತ್ತು ಕೊಳಹಾಳು ಗ್ರಾಮದ ಮುಖಂಡ ವೀರ ಭದ್ರಪ್ಪನವರ ಜಮೀನಿನಲ್ಲಿ ಕೃಷಿ ಇಲಾಖೆ ಮಾರ್ಗ ದರ್ಶನದಲ್ಲಿ ಸೋಯಾ ಬಿನ್ ಬಿತ್ತನೆ ಮಾಡಲಾಗಿದೆ. ಈಗಾಗಲೇ ಬೆಳೆ ಸಮೃದ್ಧವಾಗಿ ಬೆಳೆದಿದ್ದು ಕಟಾವು ಹಂತಕ್ಕೆ ಸನಿಹದಲ್ಲಿದೆ. ಬಿತ್ತನೆಯಿಂದ ಪ್ರತಿ 15 ದಿನಗಳಿಗೊಮ್ಮೆ ಕೃಷಿ ಇಲಾಖೆ ಅಧಿಕಾರಿಗಳು ಸೋಯಾಬಿನ್ ಪ್ಲಾಂಟ್‌ಗಳಿಗೆ ಭೇಟಿ ನೀಡಿ ಬೆಳೆಯ ಅಗತ್ಯತೆ ಮತ್ತು ಲಾಭಗಳ ಕುರಿತು ಪ್ರಾತ್ಯಕ್ಷಿಕೆಯನ್ನು ನೀಡಿ ರೈತರಿಗೆ ಮುಂಬ ರುವ ದಿನ ಗಳಲ್ಲಿ ಸೋಯಾ ಬಿನ್ ಬೆಳೆಯಲು ಉತ್ತೇಜನ ನೀಡು ತ್ತಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಇದೇ ಮೊದಲ ಬಾರಿ ಮೆಕ್ಕೆಜೋಳ ಬೆಳೆಯ ಇರುವಿಕೆ ಅಂಶಗಳನ್ನು ಗಮನಿಸಿ ದೂರದೃಷ್ಟಿಯಿಂದ ಸೋಯಾಬಿನ್ ಬೆಳೆಯನ್ನು ಪರಿಚಯಿಸಿ ವ್ಯಾಪಕವಾಗಿ ಬೆಳೆಯಲು ಪ್ರಚುರಪಡಿಸುವ ಕೆಲಸವನ್ನು ಕೃಷಿ ಇಲಾಖೆ ಕೈಗೊಂಡಿದೆ. ಬೀದರ್, ಬೆಳಗಾವಿ, ಬಾಗಲಕೋಟೆ, ಹಾವೇರಿ, ಧಾರವಾಡ ಜಿಲ್ಲೆಗಳಲ್ಲಿ ಸೋಯಾಬಿನ್ ಬೆಳೆಯಲಾಗುತ್ತಿದೆ. ಇದು ವಾತಾವರಣದಲ್ಲಿರುವ ಸಾರಜನಕವನ್ನು ಹೀರಿಕೊಂಡು ಬೆಳೆಯುñದೆ. ¤ ಹೊಲದ ಫಲವತ್ತತೆ ಹೆಚ್ಚುತ್ತದೆ.
ಕಡಿಮೆ ಅವಯ ಬೆಳೆ. ಸ್ಥಳಿಯ ಮಾರುಕಟ್ಟೆ ಲಭ್ಯವಿದೆ. ಸೋಯಾಬಿನ್ ಎಣ್ಣೆ ತಯಾರು ಮಾಡಲಾಗುತ್ತದೆ. ಬೆಳೆಯಲ್ಲಿ ಶೇಕಡಾ. 20 ರಿಂದ 40 ರಷ್ಟು ಸಾರಜನಕ (ಪ್ರೋಟಿನ್) ಅಂಶವಿರುತ್ತದೆ. ಪ್ರಾಣಿಗಳಿಗೆ ಮತ್ತು ಪೌಲ್ಟ್ರಿ ಉದ್ಯಮದಲ್ಲಿ ಸೋಯಾಬಿನ್ ನನ್ನು ಪಶು ಆಹಾರವಾಗಿ ಬಳಕೆ ಮಾಡಲಾಗುತ್ತದೆ. ಅಲ್ಲದೆ ಈ ಬೆಳೆ ದರ ಮಾರುಕಟ್ಟೆಯಲ್ಲಿ ಕುಸಿತಕ್ಕೆ ಒಳಗಾಗುವುದಿಲ್ಲ. ಸೋಯಾಬಿನ್ ಬೆಳೆ ಬೆಳೆಯಲು ಆಸಕ್ತ ರೈತರು ಕೃಷಿ ಅಧಿಕಾರಿಗಳಾದ ಚಂದ್ರಕಾಂತ್ -9448668401, ಶ್ರೀನಿವಾಸ್- 8277928822 ಅವರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು ಇಲವೇ ಹತ್ತಿರದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.