Advertisement
ಸಾಣೇಹಳ್ಳಿಯ ತರಳಬಾಳು ಜಗದ್ಗುರು ಶಾಖಾ ಮಠದಿಂದ ಆಯೋಜಿಸಿರುವ “ಮತ್ತೆ ಕಲ್ಯಾಣ’ ಕಾರ್ಯಕ್ರಮದ 15ನೇ ದಿನದ ಆನ್‌ಲೈನ್ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ಸತ್ಯವನ್ನು ಸುಳ್ಳೆಂದು, ಸುಳ್ಳನ್ನು ಸತ್ಯವೆಂದು ಬಿಂಬಿಸುವ ಹರಸಾಹಸ ಮಾಡುವವರೂ ಇದ್ದಾರೆ. ಹೊನ್ನು, ಹೆಣ್ಣು, ಮಣ್ಣುಗಳನ್ನು ಬಯಸಿ ಏನೆಲ್ಲ ಅನಾಹುತ ಮಾಡಿಕೊಳ್ಳುತ್ತಾರೆ.
Related Articles
Advertisement
ತಳ ಸಮುದಾಯದ ಕಳ್ಳನೊಬ್ಬ ಸಂಸ್ಕಾರದಿಂದ ಬದಲಾಗಿ ಪೀಠಾ ಧಿಪತಿಯಾದುದು ಬೆರಗುಗೊಳಿಸುವ ಸಂಗತಿ ಎಂದು ತಿಳಿಸಿದರು. ಮಹದೇವ ಬಣಕಾರರು “ಉರಿಲಿಂಗ ಪೆದ್ದಿ’ ಎನ್ನುವ ನಾಟಕದಲ್ಲಿ ಉರಿಲಿಂಗ ಪೆದ್ದಿಯ ಬಗ್ಗೆ ಸಮಗ್ರವಾಗಿ ರೋಚಕವಾಗಿ ಚಿತ್ರಿಸಿದ್ದಾರೆ. ಈ ನಾಟಕವನ್ನು ಶಿವಕುಮಾರ ಕಲಾಸಂಘ, ಶಿವಸಂಚಾರ ನೂರಾರು ಯಶಸ್ವಿ ಪ್ರಯೋಗಗಳನ್ನು ಪ್ರದರ್ಶಿಸಿದೆ.
ಅಲ್ಲದೆ ಇದು ವಿಶ್ವವಿದ್ಯಾಲಯದ ಪಠ್ಯಪುಸ್ತಕವಾಗಿಯೂ ಇತ್ತು. ಇಂಥ ಶರಣನ ಬಗ್ಗೆ ಜನ ಹೆಚ್ಚು ಹೆಚ್ಚು ತಿಳಿದುಕೊಂಡು ಅವರ ತತ್ವ ಸಿದ್ಧಾಂತಗಳನ್ನು ಆಚರಣೆಗೆ ತರುವಂತಾಗಲಿ ಎಂದು ಆಶಿಸಿದರು. ಉಪನ್ಯಾಸ ಮಾಲಿಕೆಯಲ್ಲಿ “ಉರಿಲಿಂಗಪೆದ್ದಿ’ ವಿಷಯದ ಕುರಿತಂತೆ ಲೇಖಕಿ ಬೀರೂರಿನ ಗೌರಿ ಪ್ರಸನ್ನ ಮಾತನಾಡಿ, ಮಾನವ ಸಮಾಜ ವೈವಿಧ್ಯತೆಯಿಂದ ಕೂಡಿದೆ.
ಯಾವುದೇ ವ್ಯಕ್ತಿಯನ್ನು ಹುಟ್ಟಿನಿಂದ ಕನಿಷ್ಠ, ಶ್ರೇಷ್ಠ ಎಂದು ಹೇಳಲಾಗದು. ಒಬ್ಬ ಕಳ್ಳ ಮಹಾನ್ ಶಿವಶರಣನೂ ಆಗಬಹುದು ಎನ್ನುವುದಕ್ಕೆ ಉದಾಹರಣೆ 12ನೇ ಶತಮಾನದಲ್ಲಿ ಕಲ್ಯಾಣದಲ್ಲಿದ್ದ ಉರಿಲಿಂಗ ಪೆದ್ದಿಯ ಬದುಕು-ಬರಹಗಳೇ ಸಾಕ್ಷಿ ಎಂದರು.
ಉರಿಲಿಂಗ ಪೆದ್ದಿಯ ಮೂಲ ಹೆಸರು ಪೆದ್ದಣ್ಣ. ಆಂಧ್ರಪ್ರದೇಶದಿಂದ ಬಂದವ. ಕಳ್ಳತನವೇ ಇವನ ಕೆಲಸವಾಗಿತ್ತು. ಇವರ 363 ವಚನಗಳು ಲಭ್ಯವಿವೆ. ಒಬ್ಬ ಕಳ್ಳ ಶರಣನಾಗಿ, ಜ್ಞಾನಿಯಾಗಿ, ವಚನಕಾರನಾಗಿ, ಗುರುವಾದದ್ದು ಜಗತ್ತಿನಲ್ಲಿ ಎಂದೂ ಕೇಳರಿಯದ ಸಂಗತಿ ಎಂದು ಹೇಳಿದರು.
ಬೆಂಗಳೂರಿನ ಮೈಕೋ ಮಂಜು ಸ್ವಾಗತಿಸಿದರು. ಶಿವಸಂಚಾರದ ಕೆ. ಜ್ಯೋತಿ, ಕೆ ದಾûಾಯಣಿ, ಎಚ್.ಎಸ್. ನಾಗರಾಜ್ ವಚನಗೀತೆಗಳನ್ನು ಹಾಡಿದರು. ಶಿವಮೊಗ್ಗದ ಸಹಚೇತನ ನಾಟ್ಯಾಲಯ ಕೇಂದ್ರದ ಕಲಾವಿದರು ಹಾಗೂ ಸಾಣೇಹಳ್ಳಿಯ ಭರತನಾಟ್ಯ ಶಾಲೆಯ ಸುಪ್ರಭೆ ಡಿ.ಎಸ್ ಹಾಗೂ ಮುಕ್ತ ಡಿ.ಜೆ. ವಚನ ನೃತ್ಯ ಪ್ರದರ್ಶಿಸಿದರು.