ಸಬ್‌ಜೂನಿಯರ್, ಜೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಗಳಿಸಿದ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುವರು.
Advertisement
ಮೊದಲ ಭಾಗವಾಗಿ ಉಭಯ ಜಿಲ್ಲೆಯ 16 ತಾಲೂಕುಗಳಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ 20 ಸಾವಿರಕ್ಕೂ ಅಧಿಕ ಸ್ಪರ್ಧಾಳುಗಳು ಉತ್ಸಾಹದಿಂದ ಪಾಲ್ಗೊಂಡಿದ್ದು ಎಲ್ಲರಿಗೂ ಪ್ರಮಾಣ ಪತ್ರ ಮತ್ತು ಗಿಫ್ಟ್ ಹ್ಯಾಂಪರ್‌ಗಳನ್ನು ವಿತರಿಸಲಾಗಿತ್ತು.
ಶನಿವಾರ ಬೆಳಗ್ಗೆ 10ರಿಂದ 12ರ ತನಕ ಮಂಗಳೂರು ಕೊಡಿಯಾಲಬೈಲ್‌ನ ಬೆಸೆಂಟ್ ಸರ್ಕಲ್ ಬಳಿಯ ಭಗವತಿ ಕೂಟಕ್ಕಲ ಆಡಿಟೋರಿಯಂನಲ್ಲಿ ಸ್ಪರ್ಧೆ ನಡೆಯಲಿದೆ. ಎಲ್ಲ ಸ್ಪರ್ಧಾಳುಗಳು 9.30ಕ್ಕೆ ಹಾಜರಿರಬೇಕು.
ಸಬ್ ಜೂನಿಯರ್ ಮತ್ತು ಜೂನಿಯರ್ ವಿಭಾಗದ ಮಕ್ಕಳಿಗೆ ವಿಷಯ ಐಚ್ಛಿಕ. ಆದರೆ ತಾಲೂಕು ಮಟ್ಟದಲ್ಲಿ ಬಿಡಿಸಿದ ಚಿತ್ರವನ್ನು ಮತ್ತೆ ಬಿಡಿಸುವಂತಿಲ್ಲ. ಸೀನಿಯರ್ ವಿಭಾಗದ ಮಕ್ಕಳಿಗೆ ವಿಷಯಗಳನ್ನು ಸ್ಥಳದಲ್ಲಿಯೇ ನೀಡಲಾಗುವುದು. ತರಗತಿಯ ನಿಖರತೆಗಾಗಿ ಬರುವಾಗ ಮಕ್ಕಳ ಶಾಲಾ ಐಡೆಂಟಿಟಿ ಕಾರ್ಡ್ ಅಥವಾ ಶಾಲೆಯ ಮುಖ್ಯಸ್ಥರಿಂದ ಪತ್ರ ತರಬೇಕು.
ತಾಲೂಕು ಮಟ್ಟದ ಹಾಗೂ ಜಿಲ್ಲಾ ಮಟ್ಟದ ಎಲ್ಲ ವಿಭಾಗಗಳ ಪ್ರಥಮ, ದ್ವಿತೀಯ, ತೃತೀಯ ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನಗಳನ್ನು ವಿತರಿಸಲಾಗುವುದು. ಆಯಾ ತಾಲೂಕು ಮಟ್ಟದಲ್ಲಿ ಸಮಧಾನಕರ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿದ್ಯಾರ್ಥಿಗಳ ಶಾಲೆಗಳಿಗೆ ತಲುಪಿಸಲಾಗುವುದು.