Advertisement

ಜೀಪ್, ಲಾರಿ ನಡುವೆ ಭೀಕರ ರಸ್ತೆ ಅಪಘಾತ |ಚಿಂತಾಮಣಿ ಸರಕಾರಿ ಆಸ್ಪತ್ರೆಗೆ ಮುನಿಸ್ವಾಮಿ ಬೇಟಿ

01:22 PM Sep 13, 2021 | Team Udayavani |

ಚಿಂತಾಮಣಿ : ಪ್ಯಾಸೆಂಜರ್ ಜೀಪ್ ಗೆ ಸಿಮೆಂಟ್ ಲಾರಿ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 8 ಮಂದಿ ಸಾವನ್ನಪ್ಪಿ, 10 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಮರಿನಾಯಕನಹಳ್ಳಿ ಬಳಿ ಭಾನುವಾರ  ನಡೆದಿದ್ದು, ಕೋಲಾರ ಸಂಸದ ಎಸ್ ಮುನಿಸ್ವಾಮಿರವರು ಸೋಮವಾರ ಚಿಂತಾಮಣಿ ಸರಕಾರಿ ಆಸ್ಪತ್ರೆಗೆ ಬೇಟಿ ನೀಡಿ ಮೃತರ ಸಂಬಂಧಿಕರಿಗೆ ಸಾಂತ್ವಾನ ಹೇಳಿ ಘಟನೆಗೆ ಕಾರಣರಾದ ಆರ್. ಟಿ ಓ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ  ಘಟನೆ ನಡೆಯಿತು.

Advertisement

ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡುವಿನಿಂದ ಚಿಂತಾಮಣಿ ಕಡೆ ಪ್ರಯಾಣಿಕರನ್ನ ತುಂಬಿಕೊಂಡು ಬರುತ್ತಿದ್ದ ಜೀಪ್ ಗೆ ಬೆಂಗಳೂರು ಕಡೆಯಿಂದ ಮದನಪಲ್ಲಿ ಕಡೆಗೆ ತೇರಳುತ್ತಿದ್ದ ಸಿಮೆಂಟ್ ಲಾರಿ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಸೇರಿ 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ಹಿನ್ನಲೆಯಲ್ಲಿ ಕೋಲಾರ ಸಂಸದ ಎಸ್. ಮುನಿಸ್ವಾಮಿರವರು ಚಿಂತಾಮಣಿ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಬೇಟಿ ನೀಡಿ ಮೃತರ ಶವಗಳನ್ನು ಪರಿಶೀಲನೆ ನಡೆಸಿ, ಮೃತರ ಸಂಬಂಧಿಕರಿಗೆ ಸಾಂತ್ವಾನ ಹೇಳಿ ಎಲ್ಲಾ ಮೃತರ ಅಂತ್ಯಕ್ರಿಯೆಗಳಿಗಾಗಿ ಒಂದು ಲಕ್ಷ ರೂಗಳ ಆರ್ಥಿಕ ಸಹಾಯ ಹಸ್ತವನ್ನು ನೀಡಿ, ನಂತರ ಸ್ಥಳಕ್ಕೆ ಘಟನೆಗೆ ಕಾರಣರಾದ ಆರ್.ಟಿ.ಓ ಅಧಿಕಾರಿಗಳನ್ನು ಕರೆಸಿ ಘಟನೆ ನಡೆದು ಒಂದು ದಿನವಾದರೂ ಕೂಡ ಯಾವುದೇ ರೀತಿಯ ಕ್ರಮಗಳನ್ನು ಕೈಗೊಳ್ಳದಿರುವುದಕ್ಕೆ ಆರ್.ಟಿ.ಓ ಅಧಿಕಾರಿಗಳ ವಿರುದ್ದ  ಕತ್ತೆ ಕಾಯುತ್ತಿದ್ದಿರಾ ಎಂದು ತಮ್ಮ ಆಕ್ರೋಶವ್ಯಕ್ತಪಡಿಸಿ, ಕೂಡಲೇ ಆನಧಿಕೃತವಾಗಿ ಓಡಾಡುತ್ತಿರುವ ಪ್ಯಾಸೆಂಜರ್ ಗಾಡಿಗಳನ್ನು ಸೀಸ್ ಮಾಡುವಂತೆ ಸೂಚನೆ ನೀಡಿದರು.

ಇದನ್ನೂ ಓದಿ : ಡಿಕೆಶಿ ಮೊದಲು ಕಾಂಗ್ರೆಸ್‌ ಪರಿಸ್ಥಿತಿಯನ್ನು ನೋಡಿಕೊಳ್ಳಲಿ : ಜಗದೀಶ ಶೆಟ್ಟರ

ಈ ವೇಳೆ  ಸಂಸದ ಎಸ್ ಮುನಿಸ್ವಾಮಿ ಮಾತನಾಡಿ, ಚಿಂತಾಮಣಿ ತಾಲೂಕು ಮರಿನಾಯಕನಹಳ್ಳಿ ಬಳಿ ಭಾನುವಾರ ಜೀಪ್ ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ೮ ಜನರು ಮೃತ್ತಪಟ್ಟಿರುವುದು ದುರುದುಷ್ಟಕರ ಸಂಗತಿಯಾಗಿದ್ದು, ಆರ್.ಟಿ ಓ ಅಧಿಕಾರಿಗಳ ನಿರ್ಲಕ್ಷ್ಯವೇ ಘಟನೆಗೆ ನೇರ ಕಾರಣವಾಗಿದ್ದು, ಆರ್.ಟಿ.ಓ ಅಧಿಕಾರಿಗಳು ಆಗಾಗ ದಾಖಲಾತಿಗಳು ಇಲ್ಲದೇ ಆನಧಿಕೃತವಾಗಿ ಓಡಾಡುತ್ತಿರುವ ಪ್ಯಾಸೆಂಜರ್ ವಾಹನಗಳನ್ನು ಪರಿಶಿಲಿಸಿ ಸೀಸ್ ಮಾಡದಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾರಣವಾಗಿದ್ದು, ಅಪಘಾತದಲ್ಲಿ ಮೃತಪಟ್ಟ ಎಲ್ಲಾರು ಬಡವರಾಗಿದ್ದು, ಹಾಗೂ ಗಾಯಾಲುಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಪ್ರದಾನ ಮಂತ್ರಿ ಆಯುಷ್ ಮಾನ್ ಭಾರತ್ ಯೋಜನೆಯ ಅಡಿಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡುವಂತೆ ಈಗಾಗಲೇ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಮೃತಪಟ್ಟವರ ಕುಟುಂಬಗಳಿಗೆ ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಒದಿಗಿಸಿಕೊಡುವುದಾಗಿ ತಿಳಿಸಿದ ಅವರು ಅಪಘಾತದಲ್ಲಿ ಮೃತಪಟ್ಟ ಎಲ್ಲಾರ ಅಚಿತ್ಯ ಸಂಸ್ಕಾರಕ್ಕಾಗಿ ಸಂಸದರು ಒಂದು ಲಕ್ಷ ರೂಗಳ ಆರ್ಥಿಕ ಸಹಾಯ ಹಸ್ತವನ್ನು ನೀಡಿ, ಪ್ರಯಾಣಿಕರು ಯಾವುದೇ ಕಾರಣಕ್ಕೆ ಪ್ಯಾಸೆಂಜರ್ ಗೂಡ್ಸ್ ವಾಹನಗಳಲ್ಲಿ ತೇರಳದೇ, ಸ್ವಲ್ಪ ತಡವಾಗಿಯಾದರೂ ಬಸ್ ಗಳಲ್ಲೇ ತೇರಳಬೇಕೆಂದ ಅವರು  ಬಸ್ ಗಳಿಲ್ಲದ ಗ್ರಾಮಗಳ ಜನತೆ ನಮ್ಮ ಗಮನಕ್ಕೆ ತಂದರೆ ಅಂತಹ ಗ್ರಾಮಗಳಿಗೆ  ಅಧಿಕಾರಿಗಳೊಂದಿಗೆ ಮಾತನಾಡಿ ಬಸ್ ಗಳ ವ್ಯವಸ್ಥೆ  ಕಲ್ಪಿಸಿಕೊಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ  ಡಿವೈಎಸ್ ಪಿ ಲಕ್ಷ್ಮಯ್ಯ. ತಹಸಿಲ್ದಾರ್ ಹನುಮಂತರಾಯಪ್ಪ ಸೇರಿದಂತೆ ಎಲ್ಲಾ ಸ್ಥಳಿಯ ಮಾಜಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸದಸ್ಯರು, ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮತಿತ್ತರರು ಉಪಸ್ಥಿತರಿದ್ದರು.

Advertisement

ಇದನ್ನೂ ಓದಿ : ಶುಭಾ ಪೂಂಜಾ ನಟನೆಯ ‘ಅಂಬುಜಾ’ ಫ‌ಸ್ಟ್‌ಲುಕ್‌ ಬಿಡುಗಡೆ: ಲಂಬಾಣಿ ಗೆಟಪ್ ನಲ್ಲಿ ಶುಭಾ ಮಿಂಚು

Advertisement

Udayavani is now on Telegram. Click here to join our channel and stay updated with the latest news.

Next