Advertisement
ಗ್ರಾಮೀಣ ಭಾಗದಲ್ಲಿ ಜಟಿಲ !ಸುಬ್ರಹ್ಮಣ್ಯಕ್ಕೆ ವಿದ್ಯಾಭ್ಯಾಸಕ್ಕೆ ಬರುವ ವಿದ್ಯಾರ್ಥಿಗಳಲ್ಲಿ ಗ್ರಾಮೀಣ ಭಾಗದವರೇ ಅಧಿಕ. ಅವರಿಗೆ ನೇರ ಬಸ್ ಕಡಿಮೆ. ಸುಬ್ರಹ್ಮಣ್ಯದಿಂದ ಒಂದು ಬಸ್ ನಲ್ಲಿ ಹೋಗಿ ಇನ್ನೊಂದು ಬಸ್ ಅಥವಾ ಖಾಸಗಿ ವಾಹನ ಹಿಡಿಯಬೇಕಾದ ಸ್ಥಿತಿ ಇದೆ. ಸಮಯ ಸ್ವಲ್ಪ ತಪ್ಪಿದರೂ ಮನೆ ತಲುವುದೇ ರಾತ್ರಿಯಾಗುತ್ತದೆ. ಕೊಲ್ಲಮೊಗ್ರು, ಮಡಪ್ಪಾಡಿ, ಬಳ್ಪ, ಕೊಂಬಾರು, ಕೊಣಾಜೆ, ಕಲ್ಲುಗುಡ್ಡೆ, ಎಡಮಂಗಲ ಸೇರಿದಂತೆ ವಿವಿಧ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಅಗತ್ಯವಾಗಿ ಆಗಬೇಕಿದೆ.
ಸುಬ್ರಹ್ಮಣ್ಯದಿಂದ ಕಡಬ ಮೂಲಕ ಮಂಗಳೂರಿಗೆ ಬಸ್ ವ್ಯವಸ್ಥೆಯಿದ್ದು, ಈ ಭಾಗದಿಂದ ಆಗಮಿಸುವ ಹಾಗೂ ತೆರಳುವ ವಿದ್ಯಾರ್ಥಿಗಳು ವಿವಿಧ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಬೆಳಗ್ಗೆ ಹಾಗೂ ಸಂಜೆ ಶಾಲಾ ಸಮಯದಲಿ ಬಸ್‌ಗಳು ಪ್ರಯಾಣಿಕರಿಂದ ತುಂಬಿರುವುದರಿಂದ ಪ್ರಮುಖ ಕೇಂದ್ರಗಳನ್ನು ಹೊರತು ಪಡಿಸಿ ಉಳಿದೆಡೆಗಳಲ್ಲಿ ಬಸ್‌ಗಾಗಿ ಕಾಯುವ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ತರಗತಿ ತಲುಪಲು ಸಾಧ್ಯವಾಗುತ್ತಿಲ್ಲ. ಸುಬ್ರಹ್ಮಣ್ಯದಿಂದ ಕಡಬ ಭಾಗಕ್ಕೆ ಸಂಜೆ 6.30ರ ಬಳಿಕ ಯಾವುದೇ ಬಸ್ ವ್ಯವಸ್ಥೆ ಇಲ್ಲದೇ ಇರುವುದರಿಂದ ವಿದ್ಯಾರ್ಥಿಗಳು ತೊಂದರೆಯಲ್ಲಿದ್ದಾರೆ.
Related Articles
ಸುಬ್ರಹ್ಮಣ್ಯದಿಂದ ಪುತ್ತೂರಿಗೆ ಕಾಣಿಯೂರು ಹಾಗೂ ಬೆಳ್ಳಾರೆ ಮಾರ್ಗವಾಗಿ ಬಸ್ ಸಂಚರಿಸುತ್ತದೆ. ಕಾಣಿಯೂರು-ನಿಂತಿಕಲ್ಲು-ಪಂಜ ಭಾಗದಿಂದ ಸುಬ್ರಹ್ಮಣ್ಯಕ್ಕೆ ಹೆಚ್ಚಿನ ವಿದ್ಯಾರ್ಥಿಗಳು ಆಗಮಿಸುತ್ತಿದ್ದು, ಶಾಲಾ ಸಮಯದಲ್ಲಿ ಬಸ್ ರಶ್ ಇರುವುದರಿಂದ ಪ್ರಯಾಣ ಕಷ್ಟ ಸಾಧ್ಯವಾಗುತ್ತಿದ್ದು, ಕೆಲ ವಿದ್ಯಾರ್ಥಿಗಳು ಬಸ್ ನಿಲ್ಲಸದೇ ಅಥವಾ ಬಸ್ ನಲ್ಲಿ ಜಾಗ ಸಿಗದೇ ತರಗತಿಗೆ ತಡವಾಗಿ ತಲುಪುವ ಸ್ಥಿತಿಯೂ ಇಲ್ಲಿದೆ.
Advertisement
ಸುಬ್ರಹ್ಮಣ್ಮ -ಗುತ್ತಿಗಾರು- ಸುಳ್ಯಸುಬ್ರಹ್ಮಣ್ಯ- ಗುತ್ತಿಗಾರು-ಸುಳ್ಯಕ್ಕೆ ಸೀಮಿತ ಬಸ್ ಗಳಿದ್ದು, ವಿದ್ಯಾರ್ಥಿಗಳು ಸಮಸ್ಯೆ ಪಡುವಂತಾಗಿದೆ. ಬೆಳಗ್ಗೆ ಹಾಗೂ ಸಂಜೆ
ಸುಬ್ರಹ್ಮಣ್ಯದಿಂದ ಮತ್ತು ಸುಬ್ರಹ್ಮಣ್ಯಕ್ಕೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೇ ಇರುವುದರಿಂದ ವಿದ್ಯಾರ್ಥಿಗಳು ಸಂಕಷ್ಟ
ಅನುಭವಿಸುತ್ತಿಸುತ್ತಿದ್ದಾರೆ. ಇರುವ ಬಸ್‌ಗಳು ತುಂಬಿರುವುದರಿಂದ ಮಾರ್ಗ ಮಧ್ಯೆ ಬಸ್‌ಗಾಗಿ ಕಾಯುವ ವಿದ್ಯಾರ್ಥಿಗಳಿಗೆ ಬಸ್
ನಿಲ್ಲಿಸುವುದಿಲ್ಲ, ನಿಲ್ಲಿಸಿದರೂ ಅದಾಗಲೇ ಬಸ್ ತುಂಬಿರುತ್ತದೆ. *ದಯಾನಂದ ಕಲ್ನಾರ್