ಬೈಲಹೊಂಗಲ : ಕರ್ನಾಟಕ ರಾಜ್ಯ ಸರ್ಕಾರದಿಂದ ದೇಶದಲ್ಲಿಯೇ ಎರಡನೇಯ ಅತಿ ದೊಡ್ಡ ಮಟ್ಟದಲ್ಲಿ 286 ಕೋಟಿ ರೂಪಾಯಿ ಅನುದಾನದಲ್ಲಿ 110 ಎಕರೆ ವಿಶಾಲವಾದ ಪ್ರದೇಶದಲ್ಲಿ ಬೈಲಹೊಂಗಲ ತಾಲೂಕಿನ ರಾಯಣ್ಣನ ಸಂಗೋಳ್ಳಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಸಂಗೊಳ್ಳಿ ರಾಯಣ್ಣ ಶೌರ್ಯ ಅಕಾಡೆಮಿ, ಸೈನಿಕ ಶಾಲೆಯ ರಾಕ್ ಗಾರ್ಡನ್ ಕಾಮಗಾರಿಯು ಕಳಪೆ ಗುಣಮಟ್ಟದಿಂದ ನಡೆಯುತ್ತಿದೆ ಎಂಬ ಸುದ್ದಿ ತಿಳಿದ ತಕ್ಷಣ ಕಾಡಾ ಪ್ರಾಧಿಕಾರದ ಅಧ್ಯಕ್ಷ, ಹಾಗೂ ಬೈಲಹೊಂಗಲದ ಮಾಜಿ ಶಾಸಕರಾದ ಡಾ.ವಿಶ್ವನಾಥ ಪಾಟೀಲ ಶನಿವಾರ ಸ್ಥಳಕ್ಕಾಗಮಿಸಿ ಪೂರ್ಣ ಪ್ರಮಾಣದ ಕಾಮಾಗಾರಿಯನ್ನು ವಿಕ್ಷಿಸಿದರು.
ಇದನ್ನೂ ಓದಿ : ಗಡಿ ಜಿಲ್ಲೆಗಳ ಡಿಸಿಗಳ ಜೊತೆ ಸಿಎಂ ಸಭೆ: ಕೋವಿಡ್ ಪರೀಕ್ಷೆ ಹೆಚ್ಚಿಸಲು ಸೂಚನೆ
ಅಲ್ಲಿದ್ದ ಇಂಜಿನಿಯರ್ ಹಾಗೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಯಾವುದೇ ಕಾರಣಕ್ಕೂ ಕ್ರಾಂತಿ ವೀರನ ಕಾರ್ಯ ಉತ್ತಮ ಗುಣಮಟ್ಟದದಿಂದ ಕೂಡಿರಲಿ ಎಂದು ಹೇಳಿ ರಾಜ್ಯ ಸರ್ಕಾರದ ಈ ಬಹು ದೊಡ್ಡ ಕಾರ್ಯ ಉತ್ತಮ ಗುಣಮಟ್ಟದದಿಂದ ಕೂಡಿರಲಿ ಎಂದು ಖಡಕ್ ಸಂದೇಶದೊಂದಿಗೆ ಸಂಪೂರ್ಣ ಕಾರ್ಯವನ್ನು ವಿಕ್ಷೀಸಿ ಈ ಕಾರ್ಯಕ್ಕೆ ನಮ್ಮ ರಾಜ್ಯ ಸರ್ಕಾರದ ಸಂಪೂರ್ಣ ಸಹಕಾರವಿದೆ ಎಂದರು.
ಈ ಸಂದರ್ಭದಲ್ಲಿ , ಬಿಜೆಪಿ ತಾಲೂಕ ಅಧ್ಯಕ್ಷರಾದ ಮಡಿವಾಳಪ್ಪ ಚಳಕೊಪ್ಪ, ಮಡಿವಾಳಪ್ಪ ಹೋಟಿ, ಪುರಸಭೆ ಸದಸ್ಯರಾದ ಸುಧಿರ ವಾಲಿ, ಶಿವಾನಂದ್ ಸಿರಸಂಗಿ, ಸಂಗೊಳ್ಳಿಗ್ರಾಮ ಪಂಚಾಯಿತಿ ಅಧ್ಯಕ್ಷರಾರ ಪಕ್ಕಿರಪ್ಪ ಕುರಿ, ಸದಸ್ಯರಾದ ಬಸವರಾಜ ಕೊಡ್ಲಿ, ಶಿವಕುಮಾರ್ ಪೂಜಾರ್, ಪಿಕೆಪಿಎಸ್ ಅಧ್ಯಕ್ಷ ಈರಣ್ಣ ಗೌಡ್ರು ಪಾಟೀಲ, ನ್ಯಾಯವಾದಿ ಉಮೇಶ್ ಲಾಳ, ಗ್ರಾಮಸ್ಥರಾದ ಮಲ್ಲಿಕಾರ್ಜುನ ಚನ್ನಕನವರ, ಬಸವರಾಜ ಕಮತ,ರವಿ ಕೊಡ್ಲಿ, ಮಡಿವಾಳಪ್ಪ ಹಕ್ಕಿ , ಶೇಖರ್ ಅಂಗಡಿ, ಭೋಜರಾಜ ಅರಳಿಕಟ್ಟಿ, ಬಸವರಾಜ ರುದ್ರಾಪೂರ, ಈರಣ್ಣ ಚಂದರಗಿ ಹಾಗೂ ರಾಯಣ್ಣನ ಅಭಿಮಾನಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ : ಮೊಗವೀರ ವ್ಯವಸ್ಥಾಪಕ ಮಂಡಳಿ ಮೀರಾ- ಭಾಯಂದರ್ ಶಾಖೆ: ಸಂತಾಪ ಸೂಚಕ ಸಭೆ