Advertisement

ಜೈಲುಗಳಂತಾದ ಕೆಎಸ್ಸಾರ್ಟಿಸಿ ಇಲಾಖೆ; ವಿಜಯ ಭಾಸ್ಕರ್‌

06:32 PM Aug 02, 2021 | Team Udayavani |

ಬಳ್ಳಾರಿ: ಕೇಂದ್ರ ಸರ್ಕಾರದ ಕಾರ್ಮಿಕ, ಸಂವಿಧಾನ ವಿರೋ ಧಿ ನೀತಿಗಳ ವಿರುದ್ಧ ಆಗಸ್ಟ್‌ 9ರಂದು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಆಲ್‌ ಇಂಡಿಯಾ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌ ನ ಪ್ರಧಾನ ಕಾರ್ಯದರ್ಶಿ ಡಿ.ಎ.ವಿಜಯ ಭಾಸ್ಕರ್‌ ಹೇಳಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಆಳುವ ವರ್ಗ ಸಾಮ್ರಾಜ್ಯಶಾಹಿ ಬ್ರಿಟೀಷರಿಗಿಂತಲೂ ಜನವಿರೋ ಧಿ, ಮೋಸದ ಆಡಳಿತ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ರೈತ, ಕಾರ್ಮಿಕ ವಿರೋ ಧಿ ನೀತಿಗಳನ್ನು ವಿರೋ ಧಿಸಿ ಇದೇ ಆ.9ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಎಐಟಿಯುಸಿ ಸೇರಿ ರಾಷ್ಟ್ರೀಯ ಕಾರ್ಮಿಕ ಸಂಘಟನೆಗಳು ನಿರ್ಣಯ ಕೈಗೊಂಡಿವೆ ಎಂದು ವಿವರಿಸಿದರು.

ರಕ್ಷಣಾ ಇಲಾಖೆಗಳನ್ನು ಸಹ ಖಾಸಗಿ; ಈಗಾಗಲೇ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀರಣ ಮಾಡಿರುವ ಕೇಂದ್ರ ಸರ್ಕಾರ ಇದೀಗ ದೇಶದ ರಕ್ಷಣೆಗೆ ಸಂಬಂಧಿ ಸಿದ ರಕ್ಷಣಾ ಇಲಾಖೆ, ವಿಮಾನ ತಯಾರಿಸುವ ಬಿಎಚ್‌ ಎಎಲ್‌ ಸಂಸ್ಥೆಗಳನ್ನು ಸಹ ರಿಲಾಯನ್ಸ್‌, ಬಹುರಾಷ್ಟ್ರೀಯ ಕಂಪನಿಗಳಿಗೆ ನೀಡುತ್ತಿದೆ ಎಂದು ಆಪಾದಿಸಿದರು.

ಕಾಪೊìರೇಟ್‌ ಉದ್ಯಮಪತಿಗಳ ಒತ್ತಡಕ್ಕೆ ಮಣಿದಿರುವ ಕೇಂದ್ರ ಸರ್ಕಾರ, ಹತ್ತಾರು ದಶಕಗಳ ಹೋರಾಟಗಳಿಂದ ಕಾರ್ಮಿಕ ವರ್ಗಗಳಿಸಿದ್ದ ಹಕ್ಕುಗಳನ್ನು ಮೊಟಕುಗೊಳಿಸಲು 44 ಕೇಂದ್ರ ಕಾರ್ಮಿಕ ಕಾನೂನುಗಳನ್ನು ನಾಲ್ಕು ಸಂಹಿತೆಗಳನ್ನಾಗಿ ಮಾರ್ಪಡಿಸಿದೆ. ಕಾರ್ಮಿಕ ವರ್ಗದ ಮೂಲಭೂತ ಹಕ್ಕಾದ ಮುಷ್ಕರ, ಕೆಲಸ ನಿರಾಕರಣೆಯ ಹಕ್ಕನ್ನು ಸಹ ಕಸಿದು ಮುಷ್ಕರವನ್ನು ಅಪರಾ  ಧೀಕರಣಗೊಳಿಸಲಾಗಿದೆ ಎಂದು ದೂರಿದರು. ಕೆಲಸಕ್ಕಾಗಿ ಲಂಚ ನೀಡಬೇಕು; ಕೆಎಸ್ಸಾರ್ಟಿಸಿ ಇಲಾಖೆಯು ಸದ್ಯ ನೌಕರರಿಗೆ ಕೇಂದ್ರ ಕಾರಾಗೃಹಗಳಂತಾಗಿವೆ. ಕೆಲಸ ಪಡೆಯಬೇಕಾದರೆ ಲಂಚ ನೀಡಲೇಬೇಕು.

ಇಲಾಖೆಯ ವ್ಯವಸ್ಥಾಪಕರಿಂದ ಹಿಡಿದು ಮೇಲಾಧಿಕಾರಿಗಳವರೆಗೆ ಈ ಪದ್ದತಿ ನಡೆಯುತ್ತಿದೆ. ಈ ಮೊದಲು ಪ್ರತಿದಿನ 150 ಶೆಡ್ನೂಲ್‌ ನಡೆಯುತ್ತಿದ್ದ ಡಿಪೋಗಳಲ್ಲಿ ಇದೀಗ ಕೇವಲ 90 ಶೆಡ್ನೂಲ್‌ಗ‌ಳಿಗೆ ಇಳಿಸಿ, ಕೆಲಸ ನೀಡದೆ ನೌಕರರನ್ನು ಖಾಲಿ ಉಳಿಸುವುವದರ ಜತೆಗೆ ಅವರಿಗೆ ಒತ್ತಾಯದ ರಜೆಗಳನ್ನು ನೀಡಲಾಗುತ್ತಿದೆ. ಬಳಿಕ ಮನೆಗಳಲ್ಲಿ ಯಾವುದೇ ಅನಿವಾರ್ಯ ಸಂದರ್ಭಗಳಲ್ಲಿ ರಜೆ ನೀಡದಂತೆ ಮಾಡಲಾಗುತ್ತಿದೆ. ವರ್ಷದಲ್ಲಿ ಲಭಿಸುವ 52 ರಜೆಗಳನ್ನು ಮೀರಿ ರಜೆ ಮಾಡಿದರೆ ವೇತನ ಕಡಿತಗೊಳಿಸಲಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

ನಾಲ್ಕು ನಿಗಮಗಳನ್ನು ತೆಗೆಯಬೇಕು: ರಾಜ್ಯದಲ್ಲಿ ಕೆಎಸ್ಸಾರ್ಟಿಸಿ ಇಲಾಖೆಯಲ್ಲಿ ರಚಿಸಲಾಗಿರುವ ನಾಲ್ಕು ನಿಗಮಗಳನ್ನು ತೆಗೆದರೆ ಪ್ರತಿವರ್ಷ ಕನಿಷ್ಠ 200 ಕೋಟಿ ರೂ. ಖರ್ಚು ಉಳಿತಾಯವಾಗಲಿದೆ. ನಾಲ್ಕು ನಿಗಮ್ಮೆ ಕಚೇರಿಗಳು, ನಾಲ್ವರು ಎಂಡಿ ಸೇರಿ ಇನ್ನಿತರೆ ಸಿಬ್ಬಂದಿಗಳನ್ನು ಪ್ರತ್ಯೇಕವಾಗಿ ನಿಯೋಜಿಸಬೇಕು.

ಈ ನಾಲ್ಕನ್ನು ಒಂದು ಮಾಡಿದರೆ ಈ ಎಲ್ಲ ಖರ್ಚುಗಳು ಉಳಿತಾಯವಾಗಲಿದೆ. ಇನ್ನು ನಾಲ್ಕು ನಿಗಮಗಳಿಂದ ಪ್ರತಿವರ್ಷ ಟೋಲ್‌ ಗಳಿಗೆ ಅಂದಾಜು 150 ಕೋಟಿ ರೂ.ಗಳನ್ನು ಪಾವತಿಸಲಾಗುತ್ತಿದೆ. ಸರ್ಕಾರ ಮುತುವರ್ಜಿ ವಹಿಸಿ ವಿನಾಯಿತಿ ನೀಡಿದಲ್ಲಿ 150 ಕೋಟಿ ರೂ. ಉಳಿತಾಯವಾಗಲಿದೆ.

ಇನ್ನು ಪ್ರತಿವರ್ಷ ಸರ್ಕಾರ ಇಲಾಖೆಗೆ 1000 ಕೋಟಿ ರೂ. ಅನುದಾನ ನೀಡಿದಲ್ಲಿ ಹೊಸ ಬಸ್‌ಗಳನ್ನು ಖರೀದಿಸಿ, ಜನರಿಗೆ ಉತ್ತಮ ಸೇವೆ ಒದಗಿಸಲು ನೆರವಾಗಲಿದೆ ಎಂದವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಾರಿಗೆ ನೌಕರರಾದ ಎಚ್‌.ಎ.ಆದಿಮೂರ್ತಿ, ಚನ್ನಪ್ಪ, ಕಾಂತಯ್ಯ ಗುತ್ತರಗಿಮಠ, ಬಸವರಾಜ್‌, ಹನುಮಂತರೆಡ್ಡಿ, ಶಿವಕುಮಾರ್‌ ಸೇರಿ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next