Advertisement

ಊಸರವಳ್ಳಿ ನೀರು!

09:02 AM May 17, 2019 | mahesh |

ಇದನ್ನು ನೀವು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರದರ್ಶಿಸಬಹುದು. ಒಂದು ಬೀಕರಿನಲ್ಲಿ (ಲೋಟ) ನೇರಳೆ ಬಣ್ಣದ ನೀರಿದೆ. ನೀವು ಮಂತ್ರ ದಂಡವನ್ನು ಅದರ ಮೇಲೆ ಆಡಿಸಿದರೆ ನೇರಳೆ ಬಣ್ಣ ಕೂಡಲೇ ಕೆಂಪು ಬಣ್ಣವಾಗಿ ಮಾರ್ಪಡುತ್ತದೆ. ಕೆಲ ನಿಮಿಷದ ನಂತರ ಕಿತ್ತಳೆ ಬಣ್ಣವಾಗುತ್ತದೆ. ನೋಡ ನೋಡುತ್ತಿದ್ದಂತೆ ಕಿತ್ತಳೆ ಬಣ್ಣವು ಮಾಯವಾಗಿ ಹಳದಿ ಬಣ್ಣವಾಗುತ್ತದೆ. ಕಟ್ಟ ಕಡೆಗೆ ಅದು ಬಣ್ಣ ಕಳೆದುಕೊಂಡು ಪಾರದರ್ಶಕವಾಗುತ್ತದೆ.

Advertisement

ರಹಸ್ಯ: ಬೀಕರಿನಲ್ಲಿರುವುದು ಪೊಟ್ಯಾಶಿಯಂ ಪರ್ಮಾಂಗನೇಟ್‌ನ ದುರ್ಬಲ ದ್ರಾವಣ (dilute solution). ನೀವು ಮಂತ್ರ ದಂಡವನ್ನು ಆಡಿಸಿದಾಗ ಪ್ರೇಕ್ಷಕರಿಗೆ ತಿಳಿಯದ ಹಾಗೆ ನಿಮ್ಮ ಕೈಯಲ್ಲಿ ಡಿದುಕೊಂಡಿರುವ “ಹೈಪೊ’ ತುಂಡನ್ನು ಬೀಕರಿನಲ್ಲಿ ಹಾಕಬೇಕು. ಆಗ ರಾಸಾಯನಿಕ ಕ್ರಿಯೆಯಿಂದ ದ್ರಾವಣದ ಬಣ್ಣ ಬದಲಾಗುತ್ತದೆ. “ಹೈಪೊ’ ಔಷಧದ ಅಂಗಡಿಗಳಲ್ಲಿ ಅಥವಾ ಕೆಮಿಕಲ್ಸ್‌ ಮಾರುವ ಅಂಗಡಿಗಳಲ್ಲಿ ದೊರೆಯುತ್ತದೆ.

ಸೂಚನೆ: ಹೈಪೊ ಹೆಚ್ಚು ಹಾಕಿದರೆ ಬಣ್ಣ ನೇರಳೆ ಇದ್ದದ್ದು ಕೂಡಲೇ ನೀರಾಗಿ ಬಿಡುತ್ತದೆ. ಕಡಿಮೆ ಹಾಕಿದರೆ ಬಣ್ಣ ಬದಲಾಗುವುದಕ್ಕೆ ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಎಷ್ಟು ಪ್ರಮಾಣ ಹಾಕಬೇಕೆಂದು ಮೊದಲು ಪ್ರಯೋಗಿಸಿ ನೋಡಬೇಕು.

ನಿರೂಪಣೆ: ಉದಯ್‌ ಜಾದೂಗಾರ್‌

Advertisement

Udayavani is now on Telegram. Click here to join our channel and stay updated with the latest news.

Next