Advertisement
ಮಂಗಳೂರಿನಿಂದ ಬೆಂಗಳೂರು ಕಡೆ ತೆರಳುತ್ತಿದ್ದ ಲಾರಿಯು ಉದನೆ ತಲುಪುತ್ತಿದ್ದಂತೆ ಹೊಗೆ ಕಾಣಿಸಿಕೊಂಡಿದೆ. ಅಪಾಯದ ಅರಿವಾಗುತ್ತಿದಂತೆ ಚಾಲಕ ಲಾರಿಯನ್ನು ನಿಲ್ಲಿಸಿ ಕೆಳಗಿಳಿದು ಪಾರಾಗಿದ್ದಾರೆ. ಹೆದ್ದಾರಿ ಚತುಷ್ಪಥ ರಸ್ತೆ ಕಾಮಗಾರಿಯ ಕಾರ್ಮಿಕರು ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ. ಬೆಂಕಿಗೆ ಶಾರ್ಟ್ ಸರ್ಕ್ನೂಟ್ ಕಾರಣ ಎಂದು ಹೇಳಲಾಗಿದೆ.
ಉಪ್ಪಿನಂಗಡಿ: ಇಲ್ಲಿನ ಪೆರಿಯಡ್ಕ ಸಮೀಪದ ಸರ್ವೋದಯ ಪ್ರೌಢಶಾಲೆಗೆ ಹೋಗುವ ದಾರಿ ಬಳಿಯ ಅರಣ್ಯ ಇಲಾಖೆಯ ನೆಡುತೋಪಿ ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿ ಕೊಂಡಿದ್ದು, ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದರು. ಫೆ.14ರಂದು ಸಂಜೆ ಸುಮಾರು 6.30ರ ಸುಮಾರಿಗೆ ಅಕೇಶಿಯಾ ನೆಡುತೋಪು ಇರುವ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿತು.