ನವದೆಹಲಿ: ಟೈಲರ್ ಕನ್ನಯ್ಯ ಲಾಲ್ ಶಿರಚ್ಛೇದನ ಪ್ರಕರಣದಲ್ಲಿ ಶಾಮೀಲಾಗಿದ್ದ ಎಲ್ಲಾ ನಾಲ್ವರು ಆರೋಪಿಗಳ ವಿರುದ್ಧ ಆಕ್ರೋಶಿತ ಜನರ ಗುಂಪು ದಾಳಿ ನಡೆಸಿದ ಘಟನೆ ಶನಿವಾರ (ಜುಲೈ 02) ರಾಜಸ್ಥಾನದ ಜೈಪುರ್ ನ ಕೋರ್ಟ್ ಹೊರಭಾಗದಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಈ ಹಾಡನ್ನು ನೀವೂ ಕೇಳಿ… ವಿಕ್ರಾಂತ್ ರೋಣ ಸಿನಿಮಾದ ಎರಡನೇ ಲಿರಿಕಲ್ ಹಾಡು ಬಿಡುಗಡೆ
ಬಹುತೇಕ ವಕೀಲರನ್ನೊಳಗೊಂಡ ಗುಂಪು ಆರೋಪಿಗಳಿಗೆ ಕಪಾಳಮೋಕ್ಷ ಮಾಡಿದ್ದು, ಹಿಡಿದು ಜಗ್ಗಾಡುತ್ತಿರುವ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು, ಪೊಲೀಸರು ಹರಸಾಹಸಪಟ್ಟು ಆರೋಪಿಗಳನ್ನು ಪೊಲೀಸ್ ವ್ಯಾನ್ ನೊಳಗೆ ಕುಳ್ಳಿರಿಸಿದ್ದು, ಈ ಸಂದರ್ಭದಲ್ಲಿ ಜನರ ಗುಂಪು ಹೊಡೆಯಿರಿ, ಹೊಡೆಯಿರಿ ಎಂದು ಕೂಗಿರುವುದಾಗಿ ವರದಿ ವಿವರಿಸಿದೆ.
ಇಂದು ಕನ್ನಯ್ಯಲಾಲ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಲ್ಲಾ ನಾಲ್ವರು ಆರೋಪಿಗಳನ್ನು ಜೈಪುರದ ಎನ್ ಐಎ ವಿಶೇಷ ಕೋರ್ಟ್ ಗೆ ಹಾಜರುಪಡಿಸಲು ಕರೆತಂದಿದ್ದರು. ಕೋರ್ಟ್ ನಾಲ್ವರು ಆರೋಪಿಗಳಿಗೆ ಹತ್ತು ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳಾದ ರಿಯಾಝ್ ಮತ್ತು ಗೌಸ್ ಮೊಹಮ್ಮದ್ ನನ್ನು ಅಜ್ಮೀರ್ ನಿಂದ ಜೈಪುರಕ್ಕೆ ಬಿಗಿ ಭದ್ರತೆಯಲ್ಲಿ ಕರೆತರಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಇನ್ನಿಬ್ಬರು ಆರೋಪಿಗಳಾದ ಮೊಹ್ಸಿನ್ ಮತ್ತು ಆಸೀಫ್ ನನ್ನು ಗುರುವಾರ ರಾತ್ರಿ ಬಂಧಿಸಿದ್ದು, ಎಟಿಎಸ್ ಕೇಂದ್ರ ಕಚೇರಿಯಲ್ಲಿ ಇರಿಸಿರುವುದಾಗಿ ವರದಿ ತಿಳಿಸಿದೆ.