Advertisement

Viral; ತಾಂತ್ರಿಕ ದೋಷ- ಐಶಾರಾಮಿ ಕಾರನ್ನು ಕತ್ತೆ ಮೂಲಕ ಶೋರೂಂಗೆ ಎಳೆದು ತಂದ ಮಾಲೀಕ

10:55 AM Apr 27, 2023 | Team Udayavani |

ರಾಜಸ್ಥಾನ್:‌ ದುಬಾರಿ ಹಣ ಕೊಟ್ಟು ಖರೀದಿಸಿದ ಕಾರು ಒಂದು ತಿಂಗಳಲ್ಲಿಯೇ ಬಹಳಷ್ಟು ತಾಂತ್ರಿಕ ದೋಷ ಕಂಡು ಬಂದಿದ್ದವು. ಕಾರು ಮಾಲೀಕ ಶೋರೂಂನವರ ಬಳಿ ವಿಷಯ ತಿಳಿಸಿ ತಾಂತ್ರಿಕ ದೋಷ ಸರಿಪಡಿಸುವಂತೆ ತಿಳಿಸಿದ್ದ, ಆದರೆ ಶೋರೂಂನವರು ಸಮರ್ಪಕವಾಗಿ ಸ್ಪಂದಿಸದ ಕಾರಣ ಆಕ್ರೋಶಗೊಂಡು ಎರಡು ಕತ್ತೆಯನ್ನು ಬಳಸಿ ಕಾರನ್ನು ಶೋರೂಂಗೆ ಎಳೆದು ತಂದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

Advertisement

ಇದನ್ನೂ ಓದಿ:ಮುಧೋಳ್‌ ಹುಡ್ಗ ವಿಕ್ರಂ! : ಹೊರಬಿತ್ತು ಟೈಟಲ್‌ ಮತ್ತು ಫ‌ಸ್ಟ್‌ಲುಕ್‌

ರಾಜಸ್ಥಾನದ ರಣಬಿಸಿಲು ಹಾಗೂ ಸಂಚಾರ ದಟ್ಟಣೆಯ ನಡುವೆಯೇ ಎರಡು ಕತ್ತೆಗಳನ್ನು ಬಳಸಿ ಐಶಾರಾಮಿ ಕಾರನ್ನು ಶೋರೂಂಗೆ ಎಳೆದು ತರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ವರದಿಯ ಪ್ರಕಾರ, ಕಾರು ಮಾಲೀಕನನ್ನು ಉದಯ್‌ ಪುರ್‌ ನಿವಾಸಿ ರಾಜ್‌ ಕುಮಾರ್‌ ಗಯಾರಿ ಎಂದು ಗುರುತಿಸಲಾಗಿದೆ. ಗಯಾರಿ ಮಂಗಳವಾರ ತನ್ನ ಐಶಾರಾಮಿ ಕಾರನ್ನು ಕತ್ತೆಯ ಮೂಲಕ ಡೋಲು ಬಾರಿಸುತ್ತಾ ಎಳೆದೊಯ್ದಿರುವುದಾಗಿ ವರದಿ ತಿಳಿಸಿದೆ.

Advertisement

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಆಗಿದ್ದು, ಇಂಟರ್ನೆಟ್‌ ಬಳಕೆದಾರರು, ಕಾರು ಮಾಲೀಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಾಣಿಯನ್ನು ಉಪಯೋಗಿಸಿ ಕಾರನ್ನು ಎಳೆದೊಯ್ದಿರುವುದು ಅಮಾನವೀಯ ಘಟನೆ ಎಂದು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next