Advertisement
ಬೆಂಗಳೂರಿನ ಓಂಕಾರ್ ಪ್ರಿಂಟಿಂಗ್ ಸಂಸ್ಥೆಯ ಸಿಬಂದಿ ಬೆಂಗಳೂರಿನಿಂದ ಎರಡು ಬಸ್‌ಗಳಲ್ಲಿ ಸೋಮೇಶ್ವರ ಉಚ್ಚಿಲ ಸಮೀಪದ ಬಟ್ಟಪ್ಪಾಡಿಯ ಗೆಸ್ಟ್‌ಹೌಸ್‌ಗೆ ಆಗಮಿಸಿದ್ದು, ರಾತ್ರಿ ಪಾರ್ಟಿ ಮಾಡಿ ಕುಡಿತದ ಮತ್ತಿನಲ್ಲಿ ರಸ್ತಗಿಳಿದು ದಾಂಧಲೆ ನಡೆಸಿದ್ದು, ಸ್ಥಳೀಯ ಮನೆಯೊಂದಕ್ಕೆ ಅಕ್ರಮ ಪ್ರವೇಶ ನಡೆಸಲು ಯತ್ನಿಸಿದಾಗ ಯುವತಿ ಬೊಬ್ಬೆ ಹಾಕಿದ್ದರು. ಈ ಸಂದರ್ಭದಲ್ಲಿ ಸ್ಥಳೀಯರು ಸೇರಿ ಪ್ರವಾಸಿಗರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಸ್ಥಳೀಯರು ಪ್ರತಿಭಟನೆ ನಡೆ ಸಿದ್ದು, ಸ್ಥಳಕ್ಕೆ ಪೊಲೀಸರು ಆಗ ಮಿಸಿದ್ದರು. ದಾಂಧಲೆಗೆ ಕಾರಣ ನಾದ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದರು. ಸ್ಥಳೀಯ ವಾಗಿ ಅನಧಿಕೃತ ಗೆಸ್ಟ್‌ಹೌಸ್‌ಗಳಿಂದ ತೊಂದರೆಯಾಗುತ್ತಿದ್ದು, ಗೆಸ್ಟ್‌ಹೌಸ್‌ಗಳಲ್ಲಿ ಕುಡಿತದ ಪಾರ್ಟಿಗಳಿಂದ ಸ್ಥಳೀಯರು ತೊಂದರೆ ಅನುಭವಿ ಸುತ್ತಿದ್ದಾರೆ. ಈ ಕುರಿತು ಪೊಲೀಸರು ಮತ್ತು ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.