ಕಾಪು: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಎರಡನೇ ವರ್ಷದ ದಸರಾ ಮಹೋತ್ಸವವು ಅ. 15ರಿಂದ ಅ. 24ರ ವರೆಗೆ ವೈಭವದಿಂದ ಜರಗಲಿದೆ.
ಪ್ರತೀ ದಿನ ಭಜನೆ, ಚಂಡಿಕಾಯಾಗ, ಸಹಸ್ರ ಕುಂಕುಮಾರ್ಚನೆ, ಸಾಂಸ್ಕೃತಿಕ ಕಾರ್ಯಕ್ರಮ, ಅನ್ನಸಂತರ್ಪಣೆ ಸಹಿತವಾಗಿ ನವರಾತ್ರಿ ಮತ್ತು ದಸರಾ ಉತ್ಸವ ಸಂಪನ್ನಗೊಳ್ಳಲಿದೆ ಎಂದು ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಡಾ| ಜಿ. ಶಂಕರ್ ಹೇಳಿದರು.
ಉಚ್ಚಿಲ ದೇಗುಲದಲ್ಲಿ ರವಿವಾರ ದಸರಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿ, ಪ್ರತೀ ದಿನ ನಡೆಯುವ ಅನ್ನಸಂತರ್ಪಣೆಯಲ್ಲಿ ಭುವನೇಂದ್ರ ಕಿದಿಯೂರು ಹಾಲು ಪಾಯಸ ಸೇವೆ ನೀಡಲಿದ್ದಾರೆ. ಉಚ್ಚಿಲ – ಎರ್ಮಾಳು – ಕಾಪು ನಡುವಿನ 14 ಕಿಮೀ. ದೂರದವರೆಗೆ ಕಾಲ್ನಡಿಗೆ ಶೋಭಾಯಾತ್ರೆ ಯಲ್ಲಿ ತೆರಳಿ ಅ. 24ರಂದು ಜಲಸ್ತಂಭನ ನೆರವೇರಿಸಲಾಗುವುದು. ಈ ಬಾರಿಯೂ ಜಲಸ್ತಂಭನವು ಗಂಗಾರತಿ ಸಹಿತ ವಿಶೇಷ ಆಕರ್ಷಣೆಯೊಂದಿಗೆ ನಡೆಯಲಿದೆ ಎಂದರು.
ಸಮಸ್ತ ಮೊಗವೀರ ಸಮಾಜ, ಸರ್ವಭಕ್ತರ ಶ್ರೇಯೋಭಿವೃದ್ಧಿ ಮತ್ತು ಲೋಕ ಕಲ್ಯಾಣದ ಉದ್ದೇಶದೊಂದಿಗೆ ನವರಾತ್ರಿ ಮತ್ತು ದಸರಾ ಉತ್ಸವವನ್ನು ಆಯೋಜಿಸಲಾಗುತ್ತಿದೆ ಎಂದರು.
ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ಅವರು ಧಾರ್ಮಿಕ ವಿಧಿ ನೇರವೇರಿಸಿದರು. ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜೀರ್ಣೋದ್ಧಾರಸಮಿತಿ ಅಧ್ಯಕ್ಷ ಗುಂಡು ಬಿ. ಅಮೀನ್, ಪ್ರಮುಖರಾದ ಭುವನೇಂದ್ರ ಕಿದಿಯೂರು, ಸುಭಾಸ್‌ಚಂದ್ರ ಕಾಂಚನ್ ಬೋಳಾರ್, ಹರಿಯಪ್ಪ ಕೋಟ್ಯಾನ್, ದಯಾನಂದ ಕೆ. ಸುವರ್ಣ ಮಲ್ಪೆ, ಸುಧಾಕರ ಕುಂದರ್ ಬಂಕೇರಕಟ್ಟ, ಸುಜಿತ್ ಎಸ್. ಸಾಲ್ಯಾನ್ ಮುಲ್ಕಿ, ನಾರಾಯಣ ಸಿ. ಕರ್ಕೆರ ಕಾಡಿಪಟ್ಣ, ಕೇಶವ ಎಂ. ಕೋಟ್ಯಾನ್ ಕುತ್ಪಾಡಿ, ಸಂಜೀವ ಮೆಂಡನ್ ಕೊಪ್ಪಲ, ರವೀಂದ್ರ ಶ್ರೀಯಾನ್ ಹಿರಿಯಡ್ಕ, ಶಂಕರ್ ಸಾಲ್ಯಾನ್ ಬಾರಕೂರು , ಬಡಾ ಗ್ರಾ.ಪಂ. ಅಧ್ಯಕ್ಷ ಶಿವಕುಮಾರ್ ಎರ್ಮಾಳು,ದಿನೇಶ್ ಕೋಟ್ಯಾನ್ ಮೂಳೂರು, ಮನೋಜ್ ಕಾಂಚನ್ ಎರ್ಮಾಳ್, ಉಷಾರಾಣಿ ಬೋಳೂರು, ಸುಗುಣ ಕರ್ಕೆರ ಮೂಳೂರು, ಮೋಹನ್ ಬಂಗೇರ ಕಾಪು, ಸುಕುಮಾರ್ ಶ್ರೀಯಾನ್, ಸದಾಶಿವ ಕೋಟ್ಯಾನ್, ರಾಜೇಂದ್ರ ಸುವರ್ಣ ಹಿರಿಯಡ್ಕ, ಶ್ರೀಪತಿ ಭಟ್ ಉಚ್ಚಿಲ, ಸಂತೋಷ್ ಸಾಲ್ಯಾನ್ ಕೋಳ, ದೇಗುಲದ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕೆರೆ ಉಪಸ್ಥಿತರಿದ್ದರು.