Advertisement

Uchila Dasara: ಉಚ್ಚಿಲ ದಸರಾ ಜನತೆಯ ಸಂಭ್ರಮದ ಹಬ್ಬವಾಗಲಿ

11:42 AM Oct 16, 2023 | Team Udayavani |

ಕಾಪು: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಶ್ರೀಮತಿ ಶಾಲಿನಿ ಡಾ| ಜಿ. ಶಂಕರ್‌ ತೆರೆದ ಸಭಾಂಗಣದಲ್ಲಿ ಜರಗುತ್ತಿರುವ ಅದ್ದೂರಿಯ ಉಚ್ಚಿಲ ದಸರಾ – 2023 ವೈಭವಕ್ಕೆ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾ ಕುಮಾರಿ ಚಾಲನೆ ನೀಡಿದರು.

Advertisement

ನವರಾತ್ರಿಯು ಇಂದು ದಸರಾ ಹಬ್ಬವಾಗಿ ಆಚರಿಸಲ್ಪಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಉಚ್ಚಿಲ ದಸರಾ ಕರಾವಳಿ ಮಾತ್ರವಲ್ಲದೇ ನಾಡಿನ ಜನತೆಯ ಸಂಭ್ರಮದ ಹಬ್ಬವಾಗಲಿ ಎಂದವರು ಶುಭ ಹಾರೈಸಿದರು.

ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಮಾತನಾಡಿ, ತುಳುನಾಡಿನ ಧಾರ್ಮಿಕ ಹಬ್ಬಗಳು, ಶ್ರದ್ಧಾ ಕೇಂದ್ರಗಳು ಜನರನ್ನು ಪರಸ್ಪರ ಬೆಸೆಯುತ್ತವೆ. ಉಚ್ಚಿಲ ದಸರಾ ಮುಂದಿನ ದಿನಗಳಲ್ಲಿ ನಾಡಿನ ಪರಂಪರೆ, ಸಂಸ್ಕೃತಿ ಮತ್ತು ಸಂಸ್ಕಾರವನ್ನು ಮೆರೆಯುವ ಹಬ್ಬವಾಗಿ ಮೂಡಿ ಬರಲಿ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರದ ಗೌರವ ಸಲಹೆಗಾರ ಡಾ| ಜಿ. ಶಂಕರ್‌ ಮಾತನಾಡಿ, ಉಚ್ಚಿಲ ದಸರಾ ಸಂಭ್ರಮವನ್ನು ಯುವ ದಸರಾ ಮತ್ತು ಮಹಿಳಾ ದಸರಾದ ರೂಪದಲ್ಲೂ ಆಯೋಜಿಸುವ ಅವಕಾಶ ದೊರಕಿದೆ. ಈ ಬಾರಿ ಫಲಪುಷ್ಪ ಪ್ರದರ್ಶನ, ಮೀನುಗಾರಿಕಾ ಪರಿಕರಗಳ ಪ್ರದರ್ಶನ, ಪುಸ್ತಕ ಮೇಳವನ್ನೂ ಆಯೋಜಿಸಲಾಗಿದೆ ಎಂದರು. ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು. ಶ್ರೀ ಶಾರದಾ ಮಾತೆಗೆ ಬೆಳ್ಳಿಯ ವೀಣೆ, ಬೆಳ್ಳಿ ಕಿರೀಟ ಮತ್ತು ಮಹಾಲಕ್ಷ್ಮೀ ದೇವಿಗೆ ಸ್ವರ್ಣ ಬೂತಾಯಿ ಸರ ಸಮರ್ಪಿಸಲಾಯಿತು.

ಅನ್ನಛತ್ರ, ಅತಿಥಿಗೃಹ ಉದ್ಘಾಟನೆ:

Advertisement

ನೂತನವಾಗಿ ನಿರ್ಮಾಣ ಗೊಂಡಿರುವ ಮಹಾಲಕ್ಷ್ಮೀ ಅನ್ನಛತ್ರ ಮತ್ತು ಅತಿಥಿಗೃಹ, ಯುವ ದಸರಾ, ವಸ್ತು ಪ್ರದರ್ಶನ, ಫಲಪುಷ್ಪ ಪ್ರದರ್ಶನ, ಮೀನುಗಾರಿಕಾ ಪರಿಕರಗಳ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ, ಪುಸ್ತಕ ಪ್ರದರ್ಶನವನ್ನು ಡಾ| ಜಿ. ಶಂಕರ್‌ ಉದ್ಘಾಟಿಸಿದರು. ಯುವ ದಸರಾ ಪ್ರಯುಕ್ತ ಯುವ ನೃತ್ಯೋತ್ಸವ ಸ್ಪರ್ಧೆ, ಭಜನ ಕಾರ್ಯಕ್ರಮ, ಸಾಮೂಹಿಕ ಕುಂಕುಮಾರ್ಚನೆ ನಡೆಯಿತು.

ಶಾಸಕ ಯಶ್‌ಪಾಲ್‌ ಸುವರ್ಣ, ಸಹಾಯಕ ಕಮೀಷನರ್‌ ರಶ್ಮಿ ಎಸ್‌. ಆರ್‌., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ತಹಶೀಲ್ದಾರ್‌ ನಾಗರಾಜ ವಿ. ನಾಯ್ಕಡ, ಪೊಲೀಸ್‌ ವೃತ್ತ ನಿರೀಕ್ಷಕಿ ಜಯಶ್ರೀ ಮಾಣೆ, ದ. ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್‌, ಉದ್ಯಮಿ ಭುವನೇಂದ್ರ ಕಿದಿಯೂರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಅಮೀನ್‌, ಸುಭಾಶ್ಚಂದ್ರ ಕಾಂಚನ್‌, ಸುಧಾಕರ ಕುಂದರ್‌, ಭರತ್‌ ಕುಮಾರ್‌ ಎರ್ಮಾಳ್‌, ಮಹಿಳಾ ಮಹಾಜನ ಸಂಘದ ಅಧ್ಯಕ್ಷೆ ಉಷಾರಾಣಿ, ನಾಲ್ಕು ಪಟ್ಣ ಮೊಗವೀರ ಮಹಾಸಭಾದ ಅಧ್ಯಕ್ಷೆ ಸುಗುಣ ಕರ್ಕೆರ ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರದ ವ್ಯವಸ್ಥಾಪಕ ಸತೀಶ್‌ ಅಮೀನ್‌ ಪಡುಕೆರೆ ವಂದಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next