Advertisement
ಎಂಟು ವರ್ಷದ ಹಿಂದೆ ಉಚ್ಚಿಲದಲ್ಲಿ ಕಡಲ್ಕೊರೆತ ಆರಂಭವಾಗಿತ್ತು. ಉಳ್ಳಾಲ ದಲ್ಲಿ ಶಾಶ್ವತ ಕಾಮಗಾರಿ ಮತ್ತು ತಾತ್ಕಾಲಿಕವಾಗಿ ಕಲ್ಲು ಹಾಕುವ ಕಾರ್ಯ ದೊಡ್ಡಮಟ್ಟದಲ್ಲಿ ನಡೆದಾಗ ಉಚ್ಚಿಲಕ್ಕೆ ಕೊರೆತದ ಬಿಸಿ ತಾಗಿತ್ತು. ಕಡಲ್ಕೊರೆತ ಆರಂಭವಾದ ಬಳಿಕ ಹಲ ವಾರು ಮನೆಗಳು, ಬೀಚ್ ಬದಿಯ ರೆಸಾರ್ಟ್‌ಗಳು ಸಮುದ್ರ ಪಾಲಾಗಿತ್ತು. ನಾಲ್ಕು ವರ್ಷಗಳಿಂದ ತಾತ್ಕಾಲಿಕ ಕಾಮಗಾರಿ ಕಲ್ಲು ಹಾಕುವ ಕಾಮಗಾರಿ ಆರಂಭಗೊಂಡಿದ್ದರೂ ಕಡಲ್ಕೊರೆತ ಸಮಸ್ಯೆ ಯಥಾಸ್ಥಿತಿಯಿತ್ತು. ಈ ಬಾರಿ ಉಚ್ಚಿಲ ಸಮುದ್ರ ತೀರದುದ್ದಕ್ಕೂ ಸೆಮಿ ಪರ್ಮನೆಂಟ್ ಕಲ್ಲಿನ ವಾಲ್ ನಿರ್ಮಾಣ ಕಾರ್ಯ ನಡೆದಿದ್ದರೂ ಈ ಬಾರಿಯ ಕಡಲ್ಕೊರೆತಕ್ಕೆ ಅದೂ ಕುಸಿದಿದೆ.
ಉಳ್ಳಾಲದಲ್ಲಿ ಕಾಮಗಾರಿ ನಡೆದಂತೆ ಇಲ್ಲಿಯೂ ಇನ್‌ಶೋರ್ ರೀಫ್ ಕಾಮ ಗಾರಿ ನಡೆಸದೆ ಬಮ್ಸ್ì ಕಾಮಗಾರಿ ಯಿಂದ ಸಮುದ್ರದ ಅಲೆಗಳು ಬಟ್ಟಪ್ಪಾಡಿ, ಫೆರಿಬೈಲು ಮತ್ತು ಸೋಮೇಶ್ವರ ರುದ್ರಪಾದೆಯವರೆಗಿನ ಮನೆಗಳ ಹಾನಿಗೆ ಕಾರಣವಾಗಿದೆ. ರೀಫ್ ಕಾಮಗಾರಿ ನಡೆಯುತ್ತಿದ್ದರೆ ಸಮುದ್ರದ ಅಲೆಗಳ ವೇಗ ದಡಕ್ಕೆ ಬರುವಾಗ ತಡೆಯಾಗುತ್ತಿತ್ತು. ಉಳ್ಳಾಲದಲ್ಲೂ ಕಾಮಗಾರಿ ಆರಂಭದ ಹಂತದಲ್ಲಿ ಸಮಸ್ಯೆ ಎದುರಾಗಿತ್ತು.
Related Articles
ಉಚ್ಚಿಲ ಕಡಲ್ಕೊರೆತ ಪ್ರದೇಶದಲ್ಲಿ ಸೆಮಿ ಪರ್ಮನೆಂಟ್ ಕಲ್ಲಿನ ಗೋಡೆ(ವಾಲ್) ಕುಸಿದಿದೆ. ಈ ಹಿಂದೆ ತಾತ್ಕಾಲಿಕ ಕಾಮಗಾರಿ ಸಂದರ್ಭದಲ್ಲಿ ಹಾಕಿದ್ದ ಕಲ್ಲುಗಳ ಮೇಲೆ ವಾಲ್ ನಿರ್ಮಾಣ ಮಾಡಿದ್ದರೆ ಕುಸಿಯುವ ಭೀತಿಯಿರಲಿಲ್ಲ. ಆದರೆ ಕಾಮಗಾರಿ ನಡೆಸುವ ಸಂದರ್ಭದಲ್ಲಿ ಮರಳಲ್ಲಿ ಹೂತು ಹೋಗಿದ್ದ ಕಲ್ಲುಗಳನ್ನು ತೆಗೆದು ಗೋಡೆ ನಿರ್ಮಾಣ ಮಾಡಿದ್ದರಿಂದ ವಾಲ್ ಕುಸಿಯುತ್ತಿದ್ದು, ಸಮುದ್ರ ಪಾಲಾಗುವ ಭೀತಿಯಲ್ಲಿದೆ.ಈ ವ್ಯಾಪ್ತಿಯಲ್ಲಿ ಸುಮಾರು 10ಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿದ್ದು, ಬೀಚ್ ರಸ್ತೆಯೂ ಸಮುದ್ರಪಾಲಾಗುವ ಭೀತಿಯಲ್ಲಿದೆ.
Advertisement
ನಷ್ಟವನ್ನು ಇಲಾಖೆ ಭರಿಸಲಿಶಾಶ್ವತ ಕಾಮಗಾರಿಯನ್ನು ಮಳೆಗಾಲ ಆರಂಭಕ್ಕೆ ಕೆಲವು ತಿಂಗಳುಗಳ ಮೊದಲು ಆರಂಭಿಸಿದ್ದೆ ಸಮಸ್ಯೆಗೆ ಕಾರಣವಾಗಿದೆ. ಇನ್‌ಶೋರ್ ರೀಫ್ ಕಾಮಗಾರಿ ನಡೆಸುತ್ತಿದ್ದರೆ ಈ ಬಾರಿ ಹಾನಿಯ ಪ್ರಮಾಣ ಕಡಿಮೆಯಾಗಿತ್ತು. ಬಟ್ಟಪ್ಪಾಡಿಯಿಂದ ಫೆರಿಬೈಲು ಪ್ರದೇಶದ ಬಮ್ಸ್ì ರಚನೆ ಮಾಡಿದ್ದರೆ ಈ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಸ್ಥಳೀಯರ ಆಸ್ತಪಾಸ್ತಿ ನಷ್ಟ ಸಂಬಂಧಿತ ಇಲಾಖೆ ಭರಿಸಬೇಕು.
– ರೂಪೇಶ್,ಉಚ್ಚಿಲ ಬೀಚ್ ರೋಡ್ ನಿವಾಸಿ ಪರಿಹಾರಕ್ಕೆ ಒತ್ತಾಯ
ನಿರಂತರ ಕಡಲ್ಕೊರೆತದಿಂದ ಹಾನಿಯಾದ ಪ್ರದೇಶಗಳ ಜನರ ರಕ್ಷಣೆಗೆ ಸೋಮೇಶ್ವರ ಗ್ರಾಮ ಪಂಚಾಯತ್‌ನಿಂದ ಬೇಕಾದ ಸಹಕಾರವನ್ನು ನೀಡಲಾಗುತ್ತಿದೆ. ಶಾಶ್ವತ ಕಾಮಗಾರಿ ಪ್ರಾರಂಭದ ಹಂತದಲ್ಲಿರುವುದರಿಂದ ಈ ಕೆಲವು ಕಡೆ ಸಮಸ್ಯೆ ಉದ್ಭವಿಸಿದ್ದು, ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸಂತ್ರಸ್ಥರಿಗೆ ಪರಿಹಾರ ನೀಡಲು ಸಚಿವರನ್ನು ಮತ್ತು ಸಂಸದರನ್ನು ಒತ್ತಾಯಿಸಲಾಗುವುದು.
- ರಾಜೇಶ್ ,ಉಚ್ಚಿಲ್,ಅಧ್ಯಕ್ಷರು,ಸೋಮೇಶ್ವರ ಗ್ರಾ.ಪಂ.