Advertisement

Uniform Civil Code: “ಧಾರ್ಮಿಕ ಸ್ವಾತಂತ್ರ್ಯಕ್ಕೆ ಯುಸಿಸಿ ಅಡ್ಡಿ’

08:11 PM Jun 19, 2023 | Team Udayavani |

ನವದೆಹಲಿ: ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಯು ಸಂವಿಧಾನದ ಅನ್ವಯ ನೀಡಿರುವ ಧಾರ್ಮಿಕ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ ಎಂದು ಪ್ರಮುಖ ಮುಸ್ಲಿಂ ಸಂಘಟನೆ ಜಮೀಯತ್‌-ಉಲೇಮಾ -ಇ ಹಿಂದ್‌ ಸೋಮವಾರ ಆರೋಪಿಸಿದೆ.

Advertisement

ಜತಗೆ ಇದರ ವಿರುದ್ಧ ಪ್ರತಿಭಟಿಸುತ್ತೇವೆ. ಆದರೆ, ಬೀದಿಗಿಳಿದು ಅಲ್ಲ, ಕಾನೂನು ಬದ್ಧವಾಗಿ ಎಂದೂ ಹೇಳಿದೆ. ಯುಸಿಸಿ ಜಾರಿ ಸಂಬಂಧಿಸಿದಂತೆ ಕಾನೂನು ಆಯೋಗವು ಸಾರ್ವಜನಿಕರು ಹಾಗೂ ಪ್ರಮುಖ ಧಾರ್ಮಿಕ ಸಂಸ್ಥೆಗಳಿಂದ ಅಭಿಪ್ರಾಯ ಸಂಗ್ರಹಣೆಗೆ ಮುಂದಾದ ಬೆನ್ನಲ್ಲೇ, ಜಮೀಯತ್‌ ಸಂಘಟನೆ ಈ ಹೇಳಿಕೆ ನೀಡಿದೆ. ಅಲ್ಲದೇ, ಯುಸಿಸಿ ಜಾರಿ ಬೇಡಿಕೆಯೂ ಸಂವಿಧಾನದ ವಿಧಿ 25, 26ರ ಅನ್ವಯ ನೀಡಿರುವ ನಾಗರಿಕನ ಧಾರ್ಮಿಕ ಮೂಲಭೂತ ಹಕ್ಕು ಕಸಿಯುವ ಅಸ್ತ್ರವಲ್ಲದೆ ಮತ್ತೇನೂ ಅಲ್ಲವೆಂದೂ ಟೀಕಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next