Advertisement

ಭಾರತದ ಶೈಕ್ಷಣಿಕ ಪದವಿಗಳಿಗೆ ಯುಎಇ ತತ್ಸಮಾನ ಮಾನ್ಯತೆ

11:33 PM Mar 31, 2019 | Sriram |

ದುಬೈ: ಭಾರತದಲ್ಲಿ ನಾನಾ ವಿದ್ಯಾರ್ಹತೆಗಳಿಗೆ ನೀಡಲಾಗುವ ಪ್ರಮಾಣ ಪತ್ರಗಳಿಗೆ ತತ್ಸಮಾನ ಮಾನ್ಯತೆಯನ್ನು ನೀಡುವ ಮಹತ್ವದ ನಿರ್ಧಾರವನ್ನು ಯುಎಇ ಸರಕಾರ ಕೈಗೊಂಡಿದೆ. ಇದರಿಂದಾಗಿ, ಯುಎಇನಲ್ಲಿ ಉದ್ಯೋಗ ಅರಸುವ ಅಭ್ಯರ್ಥಿಗಳಿಗೆ ವಿಶೇಷ ನೆರವು ಸಿಗಲಿದೆ.

Advertisement

ಭಾರತದಲ್ಲಿ ಅಂಗೀಕೃತ ವಿಶ್ವವಿದ್ಯಾಲಯದಿಂದ ನೀಡಲಾಗುವ ಕೆಲವು ಪದವಿ ಪ್ರಮಾಣ ಪತ್ರಗಳಲ್ಲಿ ಇಂಟರ್ನಲ್‌ ಹಾಗೂ ಎಕ್ಸ್‌ಟರ್ನಲ್‌ ಅಂಕಗಳ ವಿಧಾನಗಳ ಬಗ್ಗೆ ಗೊಂದಲ ಇದ್ದಿದ್ದರಿಂದ ಈ ಅಂಕಗಳುಳ್ಳ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿತ್ತು.

ಈ ಹಿನ್ನೆಲೆಯಲ್ಲಿ, ಯುಎಇನಲ್ಲಿರುವ ಭಾರತೀಯ ರಾಯಭಾರಿ ನವದೀಪ್‌ ಸಿಂಗ್‌ ಸೂರಿ ಮತ್ತು ಯುಎಇ ಶಿಕ್ಷಣ ಸಚಿವ ಹುಸೇನ್‌ ಬಿನ್‌ ಇಬ್ರಾಹಿಂ ನಡುವೆ ನಡೆದ ಮಾತುಕತೆ ಫ‌ಲಪ್ರದವಾಗಿದೆ. ಭಾರತದ ಮನವಿಯನ್ನು ಸ್ವೀಕರಿಸಿರುವ ಯುಎಇ, ಭಾರತದಲ್ಲಿ ಪಡೆದ ಎಲ್ಲಾ ಪದವಿಗಳಿಗೆ ತನ್ನ ದೇಶದ ತತ್ಸಮಾನ ಮಾನ್ಯತೆ ನೀಡಲು ಒಪ್ಪಿದೆ ಎಂದು ಸೂರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next