Advertisement

ಅಕ್ರಮ ವಲಸಿಗರಿಗೆ ಹೊಸ ನೀತಿ

06:00 AM Aug 02, 2018 | Team Udayavani |

ದುಬಾೖ: ಭಾರತ ಸೇರಿದಂತೆ ಸಾವಿರಾರು ವಿದೇಶಿ ಅಕ್ರಮ ವಲಸಿಗರಿಗೆ ನೆರವಾಗುವ ನಿಟ್ಟಿನಲ್ಲಿ 90 ದಿನಗಳ ವೀಸಾ ಅಮ್ನೆಸ್ಟಿ ಯೋಜನೆಯನ್ನು ಯುಎಇ ಘೋಷಿಸಿದೆ. ಈ ಯೋಜನೆ ಅಡಿಯಲ್ಲಿ ಯಾ ವುದೇ ದಂಡವಿಲ್ಲದ ಸ್ವದೇಶಕ್ಕೆ ವೀಸಾ ಪಡೆಯಬಹುದಾಗಿದೆ. ಇಲ್ಲವಾ ದಲ್ಲಿ ಉದ್ಯೋಗ ಹುಡುಕಿಕೊಳ್ಳಲು ಆರು ತಿಂಗಳ ಕಾಲಾವಕಾಶ ನೀಡಲಾಗುತ್ತದೆ. ಸದ್ಯ ಕೇವಲ ಒಬ್ಬ ಭಾರತೀಯ ಅಮ್ನೆಸ್ಟಿ ಯೋಜನೆ ಅಡಿಯಲ್ಲಿ ವೀಸಾಗೆ ಅರ್ಜಿ ಸಲ್ಲಿಸಿದ್ದಾರೆ. ಆಂಧ್ರ ಹಾಗೂ ತೆಲಂಗಾಣ ಮೂಲದ ಮನೆಗೆಲಸದವರು ಹಾಗೂ ಇತರ ಸಣ್ಣ ಪುಟ್ಟ ಕೆಲಸ ಮಾಡಿ ಕೊಂಡಿದ್ದವರು ರಾಯಭಾರ ಕಚೇರಿಗೆ ಆಗಮಿಸಿ, ಅರ್ಜಿ ಸಲ್ಲಿಸಲು ಯತ್ನಿಸಿದ್ದಾರೆ. ಅವರ ಔಟ್‌ಪಾಸ್‌ಗಳು ಅವಧಿ ಮೀರಿದ್ದರಿಂದ ಯೋಜನೆಯಡಿ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಈಗಾಗಲೇ ಹಲವು ದೇಶಗಳ ವೀಸಾ ಕಚೇರಿ ಎದುರು ನೂರಾರು ಜನರು ಸಾಲುಗಟ್ಟಿ ನಿಂತಿದ್ದಾರೆ. ಪಾಕಿಸ್ಥಾನ‌, ಶ್ರೀಲಂಕಾ, ಬಾಂಗ್ಲಾದೇಶ ಸಾವಿರಾರು ಜನರು ಮಾನ್ಯ ವೀಸಾ ಇಲ್ಲದೆ ಯುಎಇಯಲ್ಲಿ ನೆಲೆಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next