Advertisement
ಗುರುವಾರ ಭಾರೀ ಮಳೆ ಮತ್ತು ಗಾಳಿಯ ಹಿನ್ನಲೆಯಲ್ಲಿ ವಿಮಾನ ಸೇವೆಯನ್ನು ತಡೆಹಿಡಿಯಲಾಗಿತ್ತು. ಇದೀಗ ಮಳೆ ಕೊಂಚ ಶಾಂತವಾಗಿದ್ದು ವಿಮಾನಗಳ ಹಾರಾಟ ಸಾಧ್ಯವಾಗಲಿದೆ.
ಕೊಚ್ಚಿಯಿಂದ ಅಬುದಾಬಿಗೆ ಹೊರಡುವ ಏರ್ ಇಂಡಿಯಾ ಎಕ್ಸ್ ಪ್ರೆಸ್(ಎಐಇ) ವಿಮಾನ IX 429 ಮೊದಲ ವಿಮಾನವಾಗಿ ಸೇವೆಯನ್ನು ಸಂಜೆ 5.20ಕ್ಕೆ ಆರಂಭಿಸಲಿದೆ. ಇನ್ನು ಅಬುದಾಬಿ ಕೊಚ್ಚಿ ವಿಮಾನ EY 282 1.55ಕ್ಕೆ ಅಬುದಾಬಿಯಿಂದ ಹೊರಡಲಿದ್ದು, ಸಂಜೆ 7.30ಕ್ಕೆ ಕೊಚ್ಚಿ ವಿಮಾನ ನಿಲ್ದಾಣ ತಲುಪಲಿದೆ. ಮತ್ತೂಂದು ಸೇವೆ EY 283 ಕೊಚ್ಚಿ ವಿಮಾನ ನಿಲ್ದಾಣದಿಂದ ರಾತ್ರಿ 9.25ಕ್ಕೆ ಹೊರಟು 11.25ಕ್ಕೆ ಅಬುದಾಬಿಗೆ ತಲುಪಲಿದೆ. ಇನ್ನು ಏರ್ ಇಂಡಿಯನ್ ಎಕ್ಸ್ ಪ್ರೆಸ್ (IXE) ಐಗಿ 435 ತಿರುನಂತಪುರದಿಂದ ಮಧ್ಯಾಹ್ನ 1.30ಕ್ಕೆ ದುಬೈನತ್ತ ಪ್ರಯಾಣ ಬೆಳೆಸಲಿದ್ದು, ಇದರ ಟೇಕ್ ಅಫ್ ಗೆ ಬಹುತೇಕ ಸಿದ್ಧತೆ ಪೂರ್ಣಗೊಂಡಿದೆ. ಕೊಚ್ಚಿಯಿಂದ ಶಾರ್ಜಾಗೆ ತೆರಳುವ ವಿಮಾನ ರಾತ್ರಿ 10.45ಕ್ಕೆ ಹೊರಡಲಿದೆ. ಈ ಎರಡು ವಿಮಾನಯಾನ ಸಂಸ್ಥೆಗಳು ತಮ್ಮ ಸೇವೆಯ ಬಗ್ಗೆ ಖಚಿತಪಡಿಸಿದ್ದು, ಇನ್ನುಳಿದ ವಿಮಾನ ಸೇವೆ ಸಂಸ್ಥೆಗಳು ಯಾವುದೇ ಮಾಹಿತಿ ನೀಡಲಿಲ್ಲ.