Advertisement

UAE; ಗರ್ಭಪಾತಕ್ಕೆ ಶೀಘ್ರ ಕಾನೂನು ಮಾನ್ಯತೆ

12:54 AM Jun 23, 2024 | Team Udayavani |

ಅಬುಧಾಬಿ: ಇಸ್ಲಾಮಿಕ್‌ ರಾಷ್ಟ್ರವಾದ ಯುಎಇ ಈಗ ಅತ್ಯಾಚಾರದಂಥ ಸನ್ನಿ ವೇಶಗಳಲ್ಲಿ ಗರ್ಭಪಾತವನ್ನು ಕಾನೂನು ಬದ್ಧಗೊಳಿಸುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದೆ. ಈ ಕುರಿತ ನಿರ್ಣಯಕ್ಕೆ ಯುಎಇ ಸಂಪುಟ ಒಪ್ಪಿಗೆ ನೀಡಿದ್ದು, ಈ ಕಾನೂನು ಜಾರಿಯಾದರೆ, ಗರ್ಭಪಾತ ಕಾನೂನಿಗೆ ಸಂಬಂಧಿಸಿದಂತೆ ಯುಎಇ ಅಮೆರಿಕ ಕ್ಕಿಂತ ಹೆಚ್ಚು ಉದಾರವಾದಿ ರಾಷ್ಟ್ರವೆಂದು ಕರೆಸಿಕೊಳ್ಳಲಿದೆ. ಏಕೆಂದರೆ ಅಮೆರಿಕ ದಂಥ ಮುಂದುವರಿದ ರಾಷ್ಟ್ರಗಳಲ್ಲೇ ಇನ್ನೂ ಗರ್ಭಪಾತ ಕಾನೂನುಬದ್ಧ ಗೊಂಡಿಲ್ಲ. ಅಲ್ಲಿನ 14 ಪ್ರಾಂತಗಳಲ್ಲಿ ಈಗಲೂ ಗರ್ಭಪಾತಕ್ಕೆ ನಿಷೇಧವಿದೆ.

Advertisement

ಯುಎಇಯ ಪ್ರಸ್ತಾವಿತ ಕಾನೂನಿನ ಪ್ರಕಾರ, ಘಟನೆ ಬಗ್ಗೆ ತತ್‌ಕ್ಷಣವೇ ವರದಿ ನೀಡಿದರೆ, ಗರ್ಭ ಧರಿಸಿದ 120 ದಿನಗಳ ಒಳಗಾಗಿ ಗರ್ಭಪಾತ ಮಾಡಿಸಿ ಕೊಳ್ಳಲು ಅನುಮತಿ ಇರಲಿದೆ. ಹೆಣ್ಣಿನ ಇಚ್ಛೆಗೆ ವಿರುದ್ಧವಾಗಿ ಬಲವಂತದಿಂದ ಲೈಂಗಿಕ ಕ್ರಿಯೆ ನಡೆಸಿ ಆಕೆ ಗರ್ಭ ಧರಿಸಿದರೆ, ಕುಟುಂಬದ ಸದಸ್ಯರಿಂದ, ಹತ್ತಿರದ ಸಂಬಂಧಿಕರಿಂದ (ಮದುವೆಗೆ ಅರ್ಹ ರಲ್ಲದ ಸಂಬಂಧ) ಒಬ್ಬ ಹೆಣ್ಣುಮಗಳು ಗರ್ಭಿಣಿಯಾದರೆ ಅಂಥ ಪ್ರಕರಣಗಳಲ್ಲಿ ಆಕೆಗೆ ಗರ್ಭಪಾತ ಮಾಡಿಸಿಕೊಳ್ಳಲು ಹೊಸ ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next