Advertisement

ತೆಲಂಗಾಣ ಮಾದರಿ ಹೋರಾಟ…ಉಲ್ಟಾ ಹೊಡೆದ ಬಿ. ಶ್ರೀರಾಮುಲು!

03:18 PM Jul 30, 2018 | Team Udayavani |

ಬೆಂಗಳೂರು: ಪ್ರತ್ಯೇಕ ಕರ್ನಾಟಕ ವಿಚಾರ ತಾರಕಕ್ಕೇರಿದ ಬೆನ್ನಲ್ಲೇ ಅಖಂಡ ಕರ್ನಾಟಕವು ಯಾವುದೇ ಕಾರಣಕ್ಕೂ ವಿಭಜನೆಯಾಗಬಾರದು ಎಂಬುದಾಗಿ ಹೇಳುವ ಮೂಲಕ ಬಿಜೆಪಿ ಶಾಸಕ, ಮಾಜಿ ಸಚಿವ ಬಿ.ಶ್ರೀರಾಮುಲು ಉಲ್ಟಾ ಹೊಡೆದಿದ್ದಾರೆ.

Advertisement

ನಮ್ಮ ಪಕ್ಷದ ಯಾವ ಶಾಸಕರು ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಟ್ಟಿಲ್ಲ ಎಂಬುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿಕೆ ಕೊಟ್ಟ ಬಳಿಕ ಶ್ರೀರಾಮುಲು ತಮ್ಮ ಟ್ವೀಟರ್ ನಲ್ಲಿ ಈ ಪೋಸ್ಟ್ ಹಾಕಿದ್ದಾರೆ. (ಇದನ್ನೂ ಓದಿ: ಪ್ರತ್ಯೇಕ ಕರ್ನಾಟಕ ದೇವೇಗೌಡರ ಹುನ್ನಾರವೇ? ಬಿಎಸ್ ವೈ)

ಉತ್ತರ ಕರ್ನಾಟಕಕ್ಕೆ ಅನ್ಯಾಯವಾದರೆ ಸಹಿಸಲ್ಲ. ಒಂದು ವೇಳೆ ಉತ್ತರ ಕರ್ನಾಟಕ ಪ್ರತ್ಯೇಕವಾಗಬೇಕಾದರೆ ಅದಕ್ಕೆ ತೆಲಂಗಾಣ ಮಾದರಿಯಲ್ಲಿ ನನ್ನ ಮುಂದಾಳತ್ವದಲ್ಲಿ ಹೋರಾಟ ನಡೆಸುವುದಾಗಿ ಶ್ರೀರಾಮುಲು ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದರು.

ಉಲ್ಟಾ ಹೊಡೆದ ಶ್ರೀರಾಮುಲು!

ಅಖಂಡ ಕರ್ನಾಟಕವು ಯಾವುದೇ ಕಾರಣಕ್ಕೂ ವಿಭಜನೆಯಾಗಬಾರದು ಎನ್ನುವುದು ನನ್ನ ಸ್ಪಷ್ಟ ನಿಲುವು. ರಾಜ್ಯ ಒಡೆಯಲು ಕೆಲವು ಸಂಘಟನೆಗಳು ಕರೆ ನೀಡಿರುವ ಬಂದ್ ಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ. (ಇದನ್ನೂ ಓದಿ: ಪ್ರತ್ಯೇಕ ಕರ್ನಾಟಕ ಕೂಗಿಗೆ ಮಾಧ್ಯಮಗಳೇ ಕಾರಣ: ಸಿಎಂ)

Advertisement

ಸಿಎಂ ಕುಮಾರಸ್ವಾಮಿಯವರು ಉತ್ತರ ಕರ್ನಾಟಕಕ್ಕೆ ನಿರಂತರವಾಗಿ ಮಾಡುತ್ತಿರುವ ಅನ್ಯಾಯವೇ ಇಂದಿನ ಈ ಪರಿಸ್ಥಿತಿಗೆ ನೇರ ಕಾರಣ. ಮತ ನೀಡಲಿಲ್ಲವೆಂಬ ಕಾರಣಕ್ಕೆ ಉತ್ತರ ಕರ್ನಾಟಕವನ್ನು ಅವಹೇಳನ ಮಾಡುತ್ತಿರುವ ಮುಖ್ಯಮಂತ್ರಿಗಳು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಸಮ್ಮಿಶ್ರ ಸರಕಾರ ಬಗೆಯುತ್ತಿರುವ ಈ ದ್ರೋಹವನ್ನು ಮುಚ್ಚಿಡಲು ಕೆಲವು ದುಷ್ಟಶಕ್ತಿಗಳು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿವೆ ಎಂದು ಟ್ವೀಟ್ ಮಾಡುವ ಮೂಲಕ ಸಮಜಾಯಿಷಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next