ಲಕ್ನೋ: ಉತ್ತರ ಪ್ರದೇಶದ ಹಲವೆಡೆ ಮಳೆ, ಮಿಂಚು ಹಾಗೂ ಧೂಳಿನಿಂದ ಕೂಡಿದ ಮಾರುತಕ್ಕೆ ಸಿಕ್ಕು 26 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲ. 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಹಲವು ಮನೆಗಳು ಕುಸಿದಿದ್ದು, ಸಾವಿರಾರು ಮರಗಳು ಬುಡಮೇಲಾಗಿ ಬಿದ್ದಿವೆ. ಹೀಗಾಗಿ ಇಡೀ ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಮೈನ್‌ಪುರಿಯಲ್ಲಿ ಗುರುವಾರ ಹಠಾತ್ ಮಳೆ, ಮಿಂಚು ಹಾಗೂ ಗುಡುಗು ಕಾಣಿಸಿಕೊಂಡಿದ್ದು ವಿವಿಧ ಪ್ರಕರಣಗಳಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ.
ಮೈನ್‌ಪುರಿ ಜಿಲ್ಲೆಯಲ್ಲೇ 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಹೆದ್ದಾರಿಗಳಲ್ಲಿ ಮರಗಳು ಬಿದ್ದಿದ್ದು, ಇದರಿಂದ ಸಂಚಾರ ವ್ಯತ್ಯಯವಾಗಿದೆ. ರಾತ್ರಿ ಮನೆಗಳಲ್ಲಿ ಮಲಗಿ ದ್ದಾಗ ಬೀಸಿದ ಗಾಳಿ ಹಾಗೂ ಸುರಿದ ಮಳೆಯಿಂದ ಮನೆ ಕುಸಿದು ಹೆಚ್ಚಿನ ಜನ ಸಾವನ್ನಪ್ಪಿದ್ದಾರೆ. ಇನ್ನೂ ಕೆಲವರು ಭಿತ್ತಿಪತ್ರಗಳು ಹಾಗೂ ದೊಡ್ಡ ದೊಡ್ಡ ಫಲಕಗಳು ಕುಸಿದು ಬಿದ್ದು ಗಾಯ ಗೊಂಡ ಘಟನೆಯೂ ನಡೆದಿದೆ.
Advertisement