Advertisement

ಗುಜರಾತ್‌ ವಿರುದ್ಧ ಮುಂಬಾಗೆ ಜಯ

06:05 AM Dec 03, 2018 | Team Udayavani |

ನವದೆಹಲಿ: 6ನೇ ಆವೃತ್ತಿ ಪ್ರೊ ಕಬಡ್ಡಿ ದೆಹಲಿ ಚರಣದ ಪಂದ್ಯದಲ್ಲಿ ಯು ಮುಂಬಾ ತಂಡ 36-26 ಅಂಕಗಳಿಂದ ಗುಜರಾತ್‌ ಫಾರ್ಚೂನ್‌ ಜೈಂಟ್ಸ್‌ ತಂಡವನ್ನು ಸೋಲಿಸಿದೆ. 

Advertisement

ಗುಜರಾತ್‌ ತಂಡವನ್ನು ಎಲ್ಲ ವಿಭಾಗದಲ್ಲಿ ಮೀರಿನಿಂತ ಯು ಮುಂಬಾ ಅರ್ಹ ಜಯಗಳಿಸಿತು. ಅಷ್ಟು ಮಾತ್ರವಲ್ಲ ಎ ವಲಯದ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿತು. ಸೋತರೂ ಬಲಿಷ್ಠ ಸ್ಥಿತಿಯಲ್ಲೇ ಇರುವ ಗುಜರಾತ್‌ ದ್ವಿತೀಯ ಸ್ಥಾನ ಕಾಯ್ದುಕೊಂಡಿದೆ.

ಯು ಮುಂಬಾ ಪರ ಸಿದ್ಧಾರ್ಥ್ ದೇಸಾಯಿ ಉತ್ತಮ ದಾಳಿ ನಡೆಸಿದರು.14 ಬಾರಿ ಎದುರಾಳಿ ಅಂಕಣದೊಳಕ್ಕೆ ನುಗ್ಗಿದ ಸಿದ್ಧಾರ್ಥ್ 5 ಬಾರಿ ಯಶಸ್ವಿ ಸಾಧನೆ ಮಾಡಿದರು. ಇವರಿಗೆ ರೋಹಿತ್‌ ರಾಣಾ ರಕ್ಷಣೆಯಲ್ಲಿ ಬೆಂಗಾವಲಾಗಿ ನಿಂತರು. ಎದುರಾಳಿ ಆಟಗಾರರನ್ನು 8 ಬಾರಿ ಕೆಡವಿಕೊಳ್ಳಲು ರೋಹಿತ್‌ ಯತ್ನಿಸಿದರು. ಅದರಲ್ಲಿ 6 ಬಾರಿ ಯಶಸ್ವಿಯಾಗಿ 6 ಅಂಕ ಪಡೆದರು. ಗುಜರಾತ್‌ ಪರ ಸಚಿನ್‌ 8 ಅಂಕ ಗಳಿಸಿ ಯಶಸ್ವಿ ದಾಳಿಗಾರ ಎನಿಸಿದರು. ಇನ್ನು ರಕ್ಷಣೆಯಲ್ಲಿ ಪರವಾಗಿಲ್ಲ ಎನ್ನುವಂತಹ ಪ್ರದರ್ಶನ ನೀಡಿದ್ದು ಋತುರಾಜ್‌ ಕೊರವಿ. ಅವರು 3 ಬಾರಿ ಯಶಸ್ಸನ್ನು ಕಂಡರು. ಈ ಗೆಲುವಿನ ಮೂಲಕ ಮುಂಬೈ ಒಟ್ಟು 17 ಪಂದ್ಯಗಳಲ್ಲಿ 12 ಜಯ, 4 ಸೋಲು, 1 ಟೈ ಕಂಡಂತಾಗಿದೆ. ಎದುರಾಳಿ ಗುಜರಾತ್‌ 15 ಪಂದ್ಯಗಳಲ್ಲಿ 11 ಜಯ, 2 ಸೋಲು, 2 ಟೈ ಕಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next