Advertisement

ಪ್ರೊ ಕಬಡ್ಡಿ: ಯು ಮುಂಬಾ ಹ್ಯಾಟ್ರಿಕ್‌ ಜಯ

10:41 PM Nov 02, 2022 | Team Udayavani |

ಪುಣೆ: ತೆಲುಗು ಟೈಟಾನ್ಸ್‌ ವಿರುದ್ಧ 40-37 ಅಂತರದ ಮೇಲುಗೈ ಸಾಧಿಸಿದ ಯು ಮುಂಬಾ ಪ್ರೊ ಕಬಡ್ಡಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದೆ. ಆದರೆ ಬೆಂಗಾಲ್‌ ವಾರಿಯರ್-ತಮಿಳ್‌ ತಲೈವಾಸ್‌ ನಡುವಿನ ರೋಚಕ ಹಣಾಹಣಿ 41-41ರಿಂದ ಟೈ ಆಯಿತು.

Advertisement

ಮುಂಬಾದ ಈ ಗೆಲುವಿನಲ್ಲಿ ರೈಡರ್‌ ಆಶಿಷ್‌ ತಂದಿತ್ತ 12 ಅಂಕ, ಪ್ರಣಯ್‌ ರಾಯ್‌ ಅವರ 6 ಅಂಕಗಳು ನೆರವಿಗೆ ಬಂದವು. ತೆಲುಗು ಟೈಟಾನ್ಸ್‌ ಪರ ಸಿದ್ಧಾರ್ಥ ದೇಸಾಯಿ 18, ಪರ್ವೇಶ್‌ 8 ಅಂಕ ಗಳಿಸಿದರು.

ಪಂದ್ಯದ ಮೊದಲ 5 ನಿಮಿಷದಲ್ಲೇ ಮುಂಬಾ ಮುನ್ನಡೆ ಸಾಧಿಸಿತು. ಟೈಟಾನ್ಸ್‌ ಕಡೇ ಕ್ಷಣದಲ್ಲಿ ತಿರುಗಿ ಬಿತ್ತು. ಆದರೆ ಗೆಲುವು ದೂರವೇ ಉಳಿಯಿತು.

ಮಿಂಚಿದ ಮಣಿಂದರ್‌: ಬೆಂಗಾಲ್‌ ಪರ ರೈಡರ್‌ ಮಣಿಂದರ್‌ ಸಿಂಗ್‌ ಅತ್ಯಧಿಕ 19 ಅಂಕ, ಆಲ್‌ರೌಂಡರ್‌ ದೀಪಕ್‌ ಹೂಡಾ 11 ಅಂಕ ಗಳಿಸಿದರು. ತಮಿಳ್‌ ತಲೈವಾಸ್‌ ಎಂದಿನಂತೆ ರೈಡರ್‌ ನರೇಂದರ್‌ ಅವರನ್ನು ನೆಚ್ಚಿಕೊಂಡಿತು. ಅವರು 15 ಅಂಕ ಗಳಿಸಿ ಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next