Advertisement

ಮಲ್ಯಗೆ ಮೇಲ್ಮನವಿಯ ಅವಕಾಶ

01:18 AM Jul 03, 2019 | mahesh |

ಲಂಡನ್‌: ತಮ್ಮನ್ನು ಭಾರತಕ್ಕೆ ಹಸ್ತಾಂತರಗೊಳಿಸುವಂತೆ ಲಂಡನ್‌ನ ವೆಸ್ಟ್‌ಮಿನಿಸ್ಟರ್‌ ನ್ಯಾಯಾಲಯ ನೀಡಿರುವ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಬ್ಯಾಂಕ್‌ ವಂಚನೆ ಆರೋಪಿ ವಿಜಯ ಮಲ್ಯಗೆ ರಾಯಲ್ ಕೋರ್ಟ್‌ ಆಫ್ ಜಸ್ಟಿಸ್‌ ಅನುಮತಿ ನೀಡಿದ್ದು, ಅದಕ್ಕೆ ಯು.ಕೆ. ಸರ್ಕಾರದ ಗೃಹ ಸಚಿವ ಸಾಜಿದ್‌ ಜಾವಿದ್‌ ಅವರ ಮೊಹರೂ ಬಿದ್ದಿದೆ.

Advertisement

ಮೇಲ್ಮನವಿಗೆ ಅನುಮತಿ ಕೋರಿ ಮಲ್ಯ ಐದು ಕಾರಣಗಳನ್ನು ನ್ಯಾಯಾಲಯದ ಮುಂದಿಟ್ಟಿದ್ದರು. ಕೆಳ ನ್ಯಾಯಾಲಯವು ತಮ್ಮ ವಿರುದ್ಧದ ಸಾಕ್ಷ್ಯಾಧಾರಗಳನ್ನು ಪರಿಗಣಿಸಿದ ರೀತಿ ಹಾಗೂ ಅವನ್ನು ಅರ್ಥೈಸಿದ ಬಗೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಆ ಐದು ಕಾರಣಗಳಲ್ಲೊಂ ದಾಗಿತ್ತು. ತೀರಾ ವಿರಳವೆನಿಸುವ ಈ ಕಾರಣದ ಔಚಿತ್ಯವನ್ನು ಮಾನ್ಯ ಮಾಡಿದ ನ್ಯಾ. ಜಾರ್ಜ್‌ ಲೆಗೆಟ್ ಹಾಗೂ ನ್ಯಾ. ಆ್ಯಂಡ್ರ್ಯೂ ಪಾಪೆಲ್ವೆಲ್ ಅವರುಳ್ಳ ದ್ವಿಸದಸ್ಯ ಪೀಠ, ಪ್ರಕರಣದಲ್ಲಿ ಮಲ್ಯ ಅವರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಿತು. ಈಗ, ರಾಯಲ್ ಕೋರ್ಟ್‌ ನೀಡಿರುವ ತೀರ್ಪಿನಿಂದಾಗಿ, ಮಲ್ಯ ಪ್ರಕರಣದ ವಿಚಾರಣೆ ಪೂರ್ಣ ಪ್ರಮಾಣದ ವಿಚಾರಣೆಯಾಗಿ ಪುನಃ ಶುರುವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next