Advertisement

ಪೃಥ್ವಿ ಶಾಗೆ 25 ಲಕ್ಷ ರೂ. ಪ್ರಕಟಿಸಿದ ಮುಂಬೈ ಕ್ರಿಕೆಟ್‌ ಸಂಸ್ಥೆ

06:30 AM Feb 05, 2018 | Team Udayavani |

ಮುಂಬೈ: ಭಾರತಕ್ಕೆ ಕಿರಿಯರ ವಿಶ್ವಕಪ್‌ ಕ್ರಿಕೆಟ್‌ ಟ್ರೋಫಿ ಗೆಲ್ಲಿಸಿಕೊಟ್ಟ ಪೃಥ್ವಿ ಶಾಗೆ ಮುಂಬೈ ಕ್ರಿಕೆಟ್‌ ಸಂಸ್ಥೆ (ಎಂಸಿಎ) 25 ಲಕ್ಷ ರೂ. ನಗದು ಬಹುಮಾನ ಪ್ರಕಟಿಸಿದೆ.

Advertisement

ಮೊಹಮ್ಮದ್‌ ಕೈಫ್, ವಿರಾಟ್‌ ಕೊಹ್ಲಿ, ಉನ್ಮುಕ್‌¤ ಚಾಂದ್‌ ಬಳಿಕ ಭಾರತಕ್ಕೆ ಟ್ರೋಫಿ ಗೆಲ್ಲಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈಗಾಗಲೇ ಬಿಸಿಸಿಐ ಕೋಚ್‌ ರಾಹುಲ್‌ ದ್ರಾವಿಡ್‌ಗೆ 50 ಲಕ್ಷ ರೂ. ಆಟಗಾರರಿಗೆ 30 ಲಕ್ಷ ರೂ. ಹಾಗೂ ತಂಡದ ಸಹಾಯಕ ಸಿಬ್ಬಂದಿಗಳಿಗೆ 20 ಲಕ್ಷ ರೂ. ಪ್ರಕಟಿಸಿದೆ. ಪೃಥ್ವಿ ಶಾ ಮುಂಬೈ ಪರ ಹಲವು ಪಂದ್ಯವನ್ನು ಆಡಿದ್ದಾರೆ. ಕಿರಿಯರ ವಿಭಾಗದಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next