Advertisement

ಗೆದ್ದು ಅಭಿಯಾನಆರಂಭಿಸಿದ ಭಾರತ

11:46 AM Jan 11, 2018 | |

ಕ್ರೈಸ್ಟ್‌ಚರ್ಚ್‌ (ನ್ಯೂಜಿಲೆಂಡ್‌): ಅಮೋಘ ಪ್ರದರ್ಶನ ನೀಡಿದ ಭಾರತ ತಂಡ 19 ವರ್ಷದೊಳಗಿನ ಏಕದಿನ ವಿಶ್ವಕಪ್‌ನ ಅಭ್ಯಾಸ ಪಂದ್ಯದಲ್ಲಿ ದಕ್ಷಿಣ
ಆಫ್ರಿಕಾ ವಿರುದ್ಧ 189 ರನ್‌ಗಳಿಂದ ಭಾರೀ ಜಯ ದಾಖಲಿಸಿದೆ. ಈ ಮೂಲಕ ಭಾರತ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿದೆ.

Advertisement

ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 50 ಓವರ್‌ಗೆ 8 ವಿಕೆಟ್‌ ಕಳೆದುಕೊಂಡು 332 ರನ್‌ ಬಾರಿಸಿದೆ. ದೊಡ್ಡ ಮೊತ್ತದ
ಗುರಿ ಬೆನ್ನುಹತ್ತಿದ ದಕ್ಷಿಣ ಆಫ್ರಿಕಾ 38.3 ಓವರ್‌ಗೆ 143 ರನ್‌ ಬಾರಿಸಿ ಆಲೌಟ್‌ ಆಯಿತು. ಈ ಮೂಲಕ ದಕ್ಷಿಣ ಆಫ್ರಿಕಾ ಹೀನಾಯವಾಗಿ ಸೋಲುಂಡಿದೆ. 

ಇಶಾನ್‌ ಮಾರಕ ದಾಳಿ: ದೊಡ್ಡ ಮೊತ್ತವನ್ನು ಬೆನ್ನುಹತ್ತಿದ್ದ ದಕ್ಷಿಣ ಆಫ್ರಿಕಾಗೆ ಭಾರತೀಯ ಬೌಲರ್‌ಗಳು ಭರ್ಜರಿ ಆಘಾತ ನೀಡಿದರು. ಅದರಲ್ಲಿಯೂ
ಇಶಾನ್‌ ಪೋರೆಲ್‌ ದಾಳಿಗೆ ದ.ಆಫ್ರಿಕಾ ಬ್ಯಾಟ್ಸ್‌ಮನ್‌ ಗಳು ಕಕ್ಕಾಬಿಕ್ಕಿಯಾದರು. ಒಬ್ಬರ ಹಿಂದೆ ಒಬ್ಬರನ್ನು ಪೆವಿಲಿಯನ್‌ಗೆ ಕಳುಹಿಸುವಲ್ಲಿ ಇಶಾನ್‌
ಯಶಸ್ವಿಯಾದರು. ಕ್ಷೇತ್ರ ರಕ್ಷಣೆಯಲ್ಲಿಯೂ ಭಾರತೀಯರು ಮೇಲುಗೈ ಸಾಧಿಸಿದರು. ದ.ಆಫ್ರಿಕಾ ಪರ ಪ್ಲೆಸ್ಸಿಸ್‌ 82 ಎಸೆತದಲ್ಲಿ 50 ರನ್‌ ದಾಖಲಿಸಿದರು. ಇದು ದ.ಆಫ್ರಿಕಾ ಪರ ದಾಖಲಾದ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಜಿವೇಶಾನ್‌ ಪಿಲ್ಲೆ (29 ರನ್‌) ಅಲ್ಪ ಕಾಣಿಕೆ ನೀಡಿದರು. ಭಾರತದ ಪರ ಶಿವ ಸಿಂಗ್‌, ಕಮ್ಲೆಶ್‌ ನಾಗರಕೋಟಿ, ಅಭಿಷೇಕ್‌ ತಲಾ 2 ವಿಕೆಟ್‌ ಪಡೆದರು.

ಆರ್ಯನ್‌, ಹಿಮಾಂಶು ಅರ್ಧಶತಕ: ಭಾರತದ ಪರ ಆರಂಭಿಕರಾಗಿ ಪೃಥ್ವಿ ಶಾ ಮತ್ತು ಮನ್‌ಜೋತ್‌ ಕಲಾ ಕಣಕ್ಕೆ ಇಳಿದರು. ಆದರೆ ಈಗಾಗಲೇ ತಾರಾ ಆಟಗಾರನಾಗಿ ಬೆಳೆದಿರುವ ಪೃಥ್ವಿ 16 ರನ್‌ ಬಾರಿಸುತ್ತಿದ್ದಂತೆ ವಿಕೆಟ್‌ ಕಳೆದುಕೊಂಡರು. ಅದಾಗಲೇ ಆರಂಭಿಕ ಜೋಡಿ 54 ರನ್‌ ಬಾರಿಸಿ ಭದ್ರ ಅಡಿಪಾಯ ಹಾಕಿತ್ತು. ಪೃಥ್ವಿ ಔಟ್‌ ಆದ ಮೇಲೆ ಮನ್‌ಜೋತ್‌ (31 ರನ್‌) ಕೂಡ ಹೆಚ್ಚುಹೊತ್ತು ನಿಲ್ಲಲಿಲ್ಲ. 

ಮಧ್ಯಮ ಕ್ರಮಾಂಕದಲ್ಲಿ ಜತೆಯಾದ ಆರ್ಯನ್‌ ಮತ್ತು ಹಿಮಾಂಶು ರಾಣಾ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದರು. ದಕ್ಷಿಣ ಆಫ್ರಿಕಾ ಬೌಲರ್‌ಗಳನ್ನು
ದಂಡಿಸಿದ ಈ ಜೋಡಿ ಭಾರತದ ಮೊತ್ತ ತ್ರಿಶತಕದ ಗಡಿ ದಾಟುವಂತೆ ಮಾಡಿದರು. ಅಂತಿಮವಾಗಿ 86 ರನ್‌ ಬಾರಿಸಿದ ಆರ್ಯನ್‌ ಮತ್ತು 68 ರನ್‌ ಬಾರಿಸಿ ಹಿಮಾನುÏ ವಿಕೆಟ್‌ ಕಳೆದುಕೊಂಡರು. ಆದರೆ ಅದಾಗಲೇ ಭಾರತ ತಂಡ ಸುಸ್ಥಿತಿಯಲ್ಲಿತ್ತು. ದ.ಆಫ್ರಿಕಾ ಬೌಲರ್‌ಗಳು ಭಾರತೀಯರ ವಿಕೆಟ್‌ ಉರುಳಿಸುವಲ್ಲಿ ಯಶಸ್ವಿಯಾದರೂ ಕೂಡ ಸ್ಕೋರ್‌ ಏರಿಕೆಗೆ ಕಡಿವಾಣ ಹಾಕುವಲ್ಲಿ ಎಡವಿದರು.

Advertisement

ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರಾಳಿ: ಕನ್ನಡಿಗ ರಾಹುಲ್‌ ದ್ರಾವಿಡ್‌ ಮರ್ಗದರ್ಶನ ಹೊಂದಿರುವ ಭಾರತ ತಂಡ ಪ್ರಶಸ್ತಿ ಗೆಲ್ಲುವ ಫೇವರಿಟ್‌
ತಂಡದಲ್ಲಿ ಒಂದು. ಪೃಥ್ವಿ ಶಾ ನೇತೃತ್ವದ ತಂಡ ಜ.14 ರಂದು ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ. ಸಂಕ್ಷಿಪ್ತ ಸ್ಕೋರ್‌: ಭಾರತ 50 ಓವರ್‌ಗೆ 332/8 (ಆರ್ಯನ್‌ 86, ಹಿಮಾನುÏ ರಾಣಾ 68, ಅಖೋನಾ 40ಕ್ಕೆ3), ದಕ್ಷಿಣ ಆಫ್ರಿಕಾ 38.3 ಓವರ್‌ಗೆ 143/10 (ಪ್ಲೆಸ್ಸಿಸ್‌ 50, ಪಿಲ್ಲೆ 29, ಇಶಾನ್‌ ಪೋರೆಲ್‌ 23ಕ್ಕೆ 4).

Advertisement

Udayavani is now on Telegram. Click here to join our channel and stay updated with the latest news.

Next