Advertisement

ಎಂ.ಎಸ್‌. ಧೋನಿ ಶಾಟ್‌ ನೆನಪಿಸಿದ ದಿನೇಶ್‌ ಬಾನಾ ಸಿಕ್ಸ್‌!

10:26 PM Feb 07, 2022 | Team Udayavani |

ಹೊಸದಿಲ್ಲಿ: 2011ರ ವಿಶ್ವಕಪ್‌ ಫೈನಲ್‌ನಲ್ಲಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಶ್ರೀಲಂಕಾದ ನುವಾನ್‌ ಕುಲಶೇಖರ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟಿ ಭಾರತವನ್ನು ಗೆಲ್ಲಿಸಿದ ನೆನಪು ಇನ್ನೂ ಹಸಿರಸಿರು.

Advertisement

ಇದನ್ನೇ ಹೋಲುವ ರೀತಿಯಲ್ಲಿ ಕಿರಿಯರ ತಂಡದ ವಿಕೆಟ್‌ ಕೀಪರ್‌ ದಿನೇಶ್‌ ಬಾನಾ ಸಿಕ್ಸರ್‌ ಬಾರಿಸುವ ಮೂಲಕವೇ ಭಾರತಕ್ಕೆ ಅಂಡರ್‌-19 ವಿಶ್ವಕಪ್‌ ಗೆಲುವು ತಂದಿತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾಗಿದೆ.

ಧೋನಿ ಮತ್ತು ಬಾನಾ- ಇವರಿಬ್ಬರ ಸಿಕ್ಸರ್‌ಗಳನ್ನೂ ಹೋಲಿಕೆ ಮಾಡಲಾಗುತ್ತಿದೆ. ಇದೇ ವೇಳೆ ಮಹೇಂದ್ರ ಸಿಂಗ್‌ ಧೋನಿ ಕೂಡ ಬಾನಾ ಸಾಹಸವನ್ನು ಕೊಂಡಾಡಿರುವುದು ಸುದ್ದಿಯಾಗಿದೆ.

ಇಂಗ್ಲೆಂಡ್‌ ಎದುರಿನ ಫೈನಲ್‌ನಲ್ಲಿ 8ನೇ ಕ್ರಮಾಂಕದಲ್ಲಿ ಆಡಲಿಳಿದ ದಿನೇಶ್‌ ಬಾನಾ ಕೇವಲ 5 ಎಸೆತಗಳಿಂದ 13 ರನ್‌ ಮಾಡಿ ಅಜೇಯರಾಗಿ ಉಳಿದರು. ಇದರಲ್ಲಿ ಜೇಮ್ಸ್‌ ಸೇಲ್ಸ್‌ ಎಸೆತಗಳಿಗೆ ಬಾರಿಸಿದ ಸತತ ಎರಡು ಸಿಕ್ಸರ್‌ಗಳು ಸೇರಿವೆ.

ಇದನ್ನೂ ಓದಿ:ಪ್ರೊ ಕಬಡ್ಡಿ : ಜೈಪುರ್‌ ಪಿಂಕ್‌ ಪ್ಯಾಂಥರ್ ಎಂಟನೇ ಗೆಲುವು

Advertisement

48ನೇ ಓವರ್‌ನಲ್ಲಿ ನಿಶಾಂತ್‌ ಸಿಂಧು ಅರ್ಧ ಶತಕ ಪೂರೈಸಿದ ಬಳಿಕ ದಿನೇಶ್‌ ಬಾನಾಗೆ ಸ್ಟ್ರೈಕ್‌ ಲಭಿಸಿತು. ಅವರು ಬೆನ್ನು ಬೆನ್ನಿಗೆ ಎರಡು ಸಿಕ್ಸರ್‌ ಬಾರಿಸಿ ಭಾರತದ ಗೆಲುವನ್ನು ಸಾರಿದರು. ಮೊದಲ ಎಸೆತವನ್ನು ಲಾಂಗ್‌ ಲೆಗ್‌ ಮೂಲಕ ಬಡಿದಟ್ಟಿದರು. ಅಲ್ಲಿಗೆ ಸ್ಕೋರ್‌ ಸಮನಾಯಿತು.

ದಿನೇಶ್‌ ಬಾನಾ ಮುಂದಿನ ಎಸೆತದಲ್ಲಿ ಸಿಂಗಲ್‌ ತೆಗೆದರೆ ಸಾಕಿತ್ತು. ಆದರೆ ಆ ಫುಲ್‌ಟಾಸ್‌ ಎಸೆತವನ್ನು ಬಾನಾ ಲಾಫ್ಟ್‌ ಮಾಡಿ ಆಕಾಶಕ್ಕೆ ಎತ್ತಿದರು!

ಆಸ್ಟ್ರೇಲಿಯ ವಿರುದ್ಧದ ಮಹತ್ವದ ಸೆಮಿಫೈನಲ್‌ ಪಂದ್ಯದಲ್ಲೂ ದಿನೇಶ್‌ ಬಾನಾ ಅಬ್ಬರಿಸಿದ್ದರು. ಕೇವಲ 4 ಎಸೆತ ಗಳಲ್ಲಿ ಅಜೇಯ 20 ರನ್‌ ಬಾರಿಸಿದ್ದು ನೆನಪಿರಬಹುದು. ಅವರು ಈ ಅಬ್ಬರದ ಬ್ಯಾಟಿಂಗ್‌ ವೇಳೆ 2 ಸಿಕ್ಸರ್‌ ಹಾಗೂ 2 ಫೋರ್‌ ಸಿಡಿಸಿದ್ದರು!

 

Advertisement

Udayavani is now on Telegram. Click here to join our channel and stay updated with the latest news.

Next