Advertisement

ಇಂದು ಭಾರತ-ಜಿಂಬಾಬ್ವೆ ಹಣಾಹಣಿ

12:09 PM Jan 19, 2018 | |

ಮೌಂಟ್‌ ಮಾಂಗನಿ: ಶುಕ್ರವಾರದ ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌ ಪಂದ್ಯದಲ್ಲಿ ಭಾರತ ತಂಡ ಜಿಂಬಾಬ್ವೆಯನ್ನು ಎದುರಿಸಲಿದೆ. ಇದು ಲೀಗ್‌ ಹಂತದಲ್ಲಿ ಭಾರತದ ಕೊನೆಯ ಪಂದ್ಯವಾಗಿದೆ.

Advertisement

ಪೃಥ್ವಿ ಶಾ ನೇತೃತ್ವದ ಭಾರತ ಈಗಾಗಲೇ ಎರಡೂ ಪಂದ್ಯಗಳನ್ನು ಗೆದ್ದು ನಾಕೌಟ್‌ಗೆ ಲಗ್ಗೆ ಇರಿಸಿದೆ. ಜಿಂಬಾಬ್ವೆ ಕೂಡ ಎರಡು ಪಂದ್ಯವನ್ನು ಆಡಿದ್ದು, ಒಂದನ್ನು ಸೋತು ಇನ್ನೊಂದರಲ್ಲಿ ಜಯ ಸಾಧಿಸಿದೆ. ಜಿಂಬಾಬ್ವೆಯನ್ನು ಮಣಿಸಿ ಅಜೇಯವಾಗಿ ಉಳಿಯುವುದು ಭಾರತದ ಕಿರಿಯರ ಯೋಜನೆ.

ಇದೇ ಗುಂಪಿನಲ್ಲಿರುವ ಆಸ್ಟ್ರೇಲಿಯ ಒಂದನ್ನು ಗೆದ್ದು, ಇನ್ನೊಂದರಲ್ಲಿ ಎಡವಿದೆ. ರನ್‌ರೇಟ್‌ನಲ್ಲಿ ಜಿಂಬಾಬ್ವೆಯನ್ನು ಹಿಂದಿಕ್ಕಿರುವ ಆಸೀಸ್‌ ಎರಡನೇ ಸ್ಥಾನದಲ್ಲಿದೆ. ಪಪುವಾ ನ್ಯೂ ಗಿನಿ ಹೊರಬಿದ್ದಿದೆ.

Advertisement

Udayavani is now on Telegram. Click here to join our channel and stay updated with the latest news.

Next