Advertisement
ಮೊದಲು ಬ್ಯಾಟ್ ಮಾಡಿದ ಪಾಕಿಸ್ಥಾನ 47.4 ಓವರ್‌ಗಳಲ್ಲಿ 188ಕ್ಕೆ ಆಲೌಟಾದರೆ, ಅಫ್ಘಾನ್ 47.3 ಓವರ್‌ಗಳಲ್ಲಿ 5 ವಿಕೆಟಿಗೆ 194 ರನ್ ಬಾರಿಸಿ ವಿಜಯಿಯಾಯಿತು. ಅಜೇಯ 76 ರನ್ ಹೊಡೆದ ದಾರ್ವಿಶ್ ರಸೂಲಿ ಪಂದ್ಯಶ್ರೇಷ್ಠರೆನಿಸಿದರು.
ಲಿಂಕನ್: ಕೂಟದ ದ್ವಿತೀಯ ಪಂದ್ಯದಲ್ಲಿ ಜಿಂಬಾಬ್ವೆ 10 ವಿಕೆಟ್‌ಗಳ ಅಂತರದಿಂದ ಪಪುವಾ ನ್ಯೂ ಗಿನಿ ತಂಡವನ್ನು ಮಣಿಸಿದೆ. ನ್ಯೂ ಗಿನಿ 20 ಓವರ್‌ಗಳಲ್ಲಿ 95 ರನ್ನಿಗೆ ಕುಸಿದರೆ, ಜಿಂಬಾಬ್ವೆ 14 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 98 ರನ್ ಬಾರಿಸಿತು. ಜಿಂಬಾಬ್ವೆಯ ವೆಸ್ಲಿ ಮಧೆವೇರ್ 19 ರನ್ನಿಗೆ 3 ವಿಕೆಟ್ ಕಿತ್ತು, ಅಜೇಯ 53 ರನ್ ಬಾರಿಸಿ ಅಮೋಘ ಆಲ್‌ರೌಂಡ್ ಪ್ರದರ್ಶನ ನೀಡಿದರು. ಬಾಂಗ್ಲಾಕ್ಕೆ ಭರ್ಜರಿ ಗೆಲುವು
ಲಿಂಕನ್: ಮಳೆಯಿಂದಾಗಿ 20 ಓವರ್‌ಗಳಿಗೆ ಇಳಿಸಲ್ಪಟ್ಟ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ 87 ರನ್ನುಗಳಿಂದ ನಮೀಬಿಯಾವನ್ನು ಮಣಿಸಿದೆ. ಬಾಂಗ್ಲಾ 4 ವಿಕೆಟಿಗೆ 190 ರನ್ ಬಾರಿಸಿದರೆ, ನಮೀಬಿಯಾ 6 ವಿಕೆಟ್ ನಷ್ಟಕ್ಕೆ 103 ರನ್ ಮಾಡಿ ಶರಣಾಯಿತು.
Related Articles
ಮೌಂಟ್ ಮಾಂಗನೂಯಿ: ಅಹರ್ನಿಶಿಯಾಗಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸನ್ನು ಆತಿಥೇಯ ನ್ಯೂಜಿಲ್ಯಾಂಡ್ 8 ವಿಕೆಟ್‌ಗಳಿಂದ ಕೆಡವಿದೆ. ಮೊದಲು ಬ್ಯಾಟಿಂಗ್ ನಡೆಸಿದ ವಿಂಡೀಸ್ 8 ವಿಕೆಟ್ ನಷ್ಟಕ್ಕೆ 233 ರನ್ ಹೊಡೆದರೆ, ನ್ಯೂಜಿಲ್ಯಾಂಡ್ 39.3 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 234 ರನ್ ಬಾರಿಸಿತು. ನ್ಯೂಜಿಲ್ಯಾಂಡಿನ ಫಿನ್ ಅಲೆನ್ ಈ ಕೂಟದ ಮೊದಲ ಶತಕಕ್ಕೆ ಸಾಕ್ಷಿಯಾದರು (ಅಜೇಯ 115).
Advertisement