Advertisement

ಅಂಡರ್‌-19 ಟೆಸ್ಟ್‌: ಭಾರತ ಮುನ್ನಡೆ

06:00 AM Jul 19, 2018 | Team Udayavani |

ಕೊಲಂಬೊ: ಅಂಡರ್‌-19 ತಂಡಗಳ ಟೆಸ್ಟ್‌ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಪ್ರವಾಸಿ ಭಾರತ ಭರ್ಜರಿ ಮುನ್ನಡೆ ಸಾಧಿಸಿದೆ. ಶ್ರೀಲಂಕಾ “ಎ’ ತಂಡದ 244ಕ್ಕೆ ಉತ್ತರವಾಗಿ 2ನೇ ದಿನದಾಟದ ಅಂತ್ಯಕ್ಕೆ ಭಾರತ “ಎ’ 5 ವಿಕೆಟಿಗೆ 473 ರನ್‌ ಪೇರಿಸಿದೆ.

Advertisement

ಆರಂಭಕಾರ ಅಥರ್ವ ತಾಯ್ದೆ (113) ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಆಯುಷ್‌ ಬದೋನಿ (ಅಜೇಯ 107) ಅವರ ಶತಕ ಭಾರತದ ಸರದಿಯ ಆಕರ್ಷಣೆಯಾಗಿತ್ತು. ಈ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ ಅರ್ಜುನ್‌ ತೆಂಡುಲ್ಕರ್‌ ಆರಂಭಕಾರ ಕಮಿಲ್‌ ಮಿಶಾರ ಅವರನ್ನು ಲೆಗ್‌ ಬಿಫೋರ್‌ ಬಲೆಗೆ ಬೀಳಿಸಿ ವಿಕೆಟ್‌ ಖಾತೆ ತೆರೆದರು. ಹರ್ಷ ತ್ಯಾಗಿ ಮತ್ತು ಬದೋನಿ ತಲಾ 4 ವಿಕೆಟ್‌ ಉರುಳಿಸಿ ಮಿಂಚಿದರು.

Advertisement

Udayavani is now on Telegram. Click here to join our channel and stay updated with the latest news.

Next