Advertisement

U-15 ಏಷ್ಯಾ ಬ್ಯಾಡ್ಮಿಂಟನ್‌: ತನ್ವಿ ಪತ್ರಿ ಚಾಂಪಿಯನ್‌

12:44 AM Aug 26, 2024 | Team Udayavani |

ಹೊಸದಿಲ್ಲಿ: ಭಾರತದ ತನ್ವಿ ಪತ್ರಿ ಅಂಡರ್‌-15 ವನಿತೆಯರ ಏಷ್ಯಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ ಪ್ರಶಸ್ತಿ ಜಯಿಸಿ ಚಿನ್ನದ ಪದಕದೊಂದಿಗೆ ಸಿಂಗಾರ ಗೊಂಡಿದ್ದಾರೆ. ಫೈನಲ್‌ನಲ್ಲಿ ಅವರು ವಿಯೆಟ್ನಾಮ್‌ನ ತಿ ತು ಹುಯೆನ್‌ ಎನ್‌ಗುಯೆನ್‌ ವಿರುದ್ಧ 22-20, 21-11 ಅಂತರದ ಗೆಲುವು ಸಾಧಿಸಿದರು.

Advertisement

13 ವರ್ಷದ ತನ್ವಿ ಪತ್ರಿ ಈ ಪಂದ್ಯಾವಳಿಯಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದರು. ಫೈನಲ್‌ನ ಮೊದಲ ಗೇಮ್‌ ವೇಳೆ ಅವರು 11-17ರ ಹಿನ್ನಡೆಯಲ್ಲಿದ್ದರು. ಆದರೆ ಈ ಹಂತದಲ್ಲಿ ಅತ್ಯಂತ ತಾಳ್ಮೆಯ ಆಟವಾಡುವ ಮೂಲಕ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು.

ತನ್ವಿ ಪತ್ರಿ ಅಂಡರ್‌-15 ಏಷ್ಯಾ ಬ್ಯಾಡ್ಮಿಂಟನ್‌ ಪ್ರಶಸ್ತಿ ಜಯಿಸಿದ ಭಾರತದ 3ನೇ ಆಟಗಾರ್ತಿ. ಉಳಿದಿಬ್ಬರೆಂದರೆ ಸಮಿಯಾ ಇಮಾದ್‌ (2017) ಮತ್ತು ತಸ್ನಿಮ್‌ ಮಿರ್‌ (2019). ಬಾಲಕರ ಅಂಡರ್‌-17 ವಿಭಾಗದಲ್ಲಿ ಭಾರತದ ಜ್ಞಾನ್‌ ದತ್ತೂ ಕಂಚಿನ ಪದಕ ಜಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next