ತಿರುಚಿರಪಳ್ಳಿ: 60 ಗಂಟೆಗಳ ಸತತ ಕಾರ್ಯಾಚರಣೆಯ ನಂತರವೂ ಬೋರ್ ವೆಲ್ ಗೆ ಬಿದ್ದಿರುವ ತಮಿಳುನಾಡಿನ ತಿರುಚಿರಪಳ್ಳಿಯ ಎರಡು ವರ್ಷದ ಮಗು ಸುಜಿತ್ ವಿಲ್ಸನ್ ನನ್ನು ಮೇಲಕ್ಕೆತ್ತಲು ಸಾಧ್ಯವಾಗಿಲ್ಲ. ಕಾರ್ಯಾಚರಣೆ ಮುಂದುವರಿದಿದೆ.
ಮನೆಯ ಬಳಿ ಆಟವಾಡುತ್ತಿದ್ದ ಸುಜಿತ್ ಶುಕ್ರವಾರ ಸಂಜೆಯ ವೇಳೆ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ.
ಎನ್ ಡಿಆರ್ ಎಫ್ ಮತ್ತು ಎಸ್ ಡಿಆರ್ ಎಫ್ ತಂಡಗಲು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಸತತ ಕಾರ್ಯಾಚರಣೆ ನಡೆಸಲಾಗುತ್ತಿದೆ.
ತಮಿಳುನಾಡಿನ ಉಪಮುಖ್ಯಮಂತ್ರಿ ಪನ್ನೀರ್ ಸೆಲ್ವಮ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮಗುವಿನ ಹೆತ್ತವರನ್ನು ಭೇಟಿಯಾಗಿ ಸಾಂತ್ವಾನ ಹೇಳಿದ್ದು, ಕಾರ್ಯಾಚರಣೆಯ ಮಾಹಿತಿ ಪಡೆಯುತ್ತಿದ್ದಾರೆ.
ಕೊಳವೆ ಬಾವಿಯ 25 ಅಡಿ ಆಳದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಸುಜಿತ್ ಮತ್ತೆ ಮತ್ತೆ ಕೆಳ ಜಾರುತ್ತಿದ್ದಾನೆ. ಸದ್ಯ ಸುಜಿತ್ ವಿಲ್ಸನ್ ಕೊಳವೆ ಬಾವಿಯ 100 ಅಡಿ ಆಳದಲ್ಲಿ ಸಿಲುಕಿದ್ದಾನೆಂದು ತಿಳಿದುಬಂದಿದೆ.