Advertisement

ಭಾರೀ ಮಳೆ: ಚರಂಡಿಗೆ ಬಿದ್ದು 2ರ ಬಾಲಕಿ ಸಾವು

11:30 AM Sep 10, 2019 | Team Udayavani |

ಭೋಪಾಲ್:ಮಧ್ಯಪ್ರದೇಶದ ಬಹುತೇಕ ಭಾಗಗಳಲ್ಲಿ ರವಿವಾರ ಧಾರಾಕಾರ ಮಳೆಯಾಗಿದ್ದು, ಸೋಮವಾರ ಬೆಳಗ್ಗೆಯವರೆಗೂ ಇಲ್ಲಿನ 32 ಜಿಲ್ಲೆಗಳಲ್ಲಿ ಭಾರೀ ಪ್ರಮಾಣದ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭೋಪಾಲ್ನಲ್ಲಿ ಉಕ್ಕಿ ಹರಿದ ಚರಂಡಿಯೊಂದಕ್ಕೆ ಕಾಲು ಜಾರಿ ಬಿದ್ದು, ಎರಡು ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿ ದ್ದಾಳೆ. ಮಳೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಖಾಂಡ್ವಾದಲ್ಲಿನ ಇಂದಿರಾ ಸಾಗರ್‌ ಅಣೆಕಟ್ಟಿನ 20 ಕ್ರಸ್ಟ್‌ಗೇಟ್‌ಗಳ ಪೈಕಿ 12 ಅನ್ನು ತೆರೆಯಲಾಗಿದೆ. ಭೋಪಾಲ್ನಲ್ಲಿ ರವಿವಾರ ಬೆಳಗ್ಗೆ 8.30ರಿಂದ ಸಂಜೆ 5.30ರ ಅವಧಿಯಲ್ಲಿ 62.1 ಮಿ.ಮೀ. ಮಳೆಯಾಗಿದೆ ಎಂದು ಐಎಂಡಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಆಂಧ್ರದಲ್ಲಿ ಪ್ರವಾಹ: ಆಂಧ್ರಪ್ರದೇಶದಲ್ಲೂ ಪ್ರವಾಹ ಸ್ಥಿತಿ ಏರ್ಪಟ್ಟಿರುವ ಕಾರಣ, ಗೋದಾವರಿ ನದಿ ತಟದ ಅನೇಕ ಗ್ರಾಮಗಳ ರಸ್ತೆ ಮತ್ತು ಸಂವಹನ ಜಾಲಗಳೇ ಕಡಿತಗೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next