Advertisement

ಕೋವಿಡ್ 19 ಕಾನೂನು ಉಲ್ಲಂಘಿಸಿದ್ರೆ 2 ವರ್ಷ ಜೈಲು, ಭಾರೀ ಮೊತ್ತದ ದಂಡ ತೆರಬೇಕು; ಜಾರ್ಖಂಡ್

11:16 PM Jul 23, 2020 | Nagendra Trasi |

ನವದೆಹಲಿ: ದೇಶಾದ್ಯಂತ ಕೋವಿಡ್ 19 ಸೋಂಕಿನ ಹಾವಳಿ ಕ್ಷಿಪ್ರವಾಗಿ ಹರಡುತ್ತಿದ್ದು, ಒಂದು ವೇಳೆ ಲಾಕ್ ಡೌನ್ ಕಾನೂನುನನ್ನು ಉಲ್ಲಂಘಿಸಿದವರಿಗೆ ಭಾರೀ ಮೊತ್ತದ ದಂಡ ವಿಧಿಸುವುದಾಗಿ ಜಾರ್ಖಂಡ್ ಸರ್ಕಾರ ಘೋಷಿಸಿದೆ.

Advertisement

ಈ ನಿಟ್ಟಿನಲ್ಲಿ ಜಾರ್ಖಂಡ್ ಸಚಿವ ಸಂಪುಟದಲ್ಲಿ ಕೋವಿಡ್ 19 ಸೋಂಕು ಸುಗ್ರಿವಾಜ್ಞೆ 2020ಗೆ ಹಸಿರು ನಿಶಾನೆ ತೋರಿದ್ದು, ಯಾರು ಕೋವಿಡ್ 19 ಸೋಂಕು ಹರಡುವುದನ್ನು ತಡೆಯುವ ಕಾನೂನನ್ನು ಉಲ್ಲಂಘಿಸುತ್ತಾರೋ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ ಒಂದು ಲಕ್ಷ ರೂಪಾಯಿವರೆಗೆ ದಂಡ ವಿಧಿಸಲಾಗುವುದು ಎಂದು ತಿಳಿಸಿದೆ.

ಯಾರೇ ಆಗಲಿ ಸಾಮಾಜಿಕ ಅಂತರವನ್ನು ಉಲ್ಲಂಘಿಸಲಿ, ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದೇ ಇದ್ದರೆ ಅಂತಹವರಿಗೆ ದಂಡ, ಶಿಕ್ಷೆ ಖಚಿತ ಎಂದು ಹೇಳಿದೆ. ಕಚೇರಿ, ಅನಾವಶ್ಯಕವಾಗಿ ಗುಂಪುಗೂಡುವುದು, ಸಾರ್ವಜನಿಕ ಸ್ಥಳದಲ್ಲಿ ಉಗುಳುವುದು ಕಂಡು ಬಂದಲ್ಲಿ ಹೊಸ ಕಾಯ್ದೆ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವರದಿ ವಿವರಿಸಿದೆ.

ಈ ಸುಗ್ರಿವಾಜ್ಞೆ ತಂದಿರುವುದು ಯಾಕೆಂದರೆ ಕೆಲವೊಮ್ಮೆ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾದ ಅಗತ್ಯವಿದೆ. ಆ ನಿಟ್ಟಿನಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿರುವುದಾಗಿ ಮುಖ್ಯಮಂತ್ರಿ ಹೇಮಂತ್ ಸೋರೆನ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next