Advertisement

ಇವರೇ ಚಂದಿರನ ಹಿಂದಿನ ತಾರೆಯರು!

10:16 AM Sep 07, 2019 | mahesh |

ಬೆಂಗಳೂರು: ಮಹತ್ವಾಕಾಂಕ್ಷಿ ಚಂದ್ರಯಾನ-2ರ ಹಿಂದಿರುವುದು ಮಹಿಳೆಯರು, ಜತೆಗೆ ವಿಜ್ಞಾನಿಗಳ ದೊಡ್ಡ ತಂಡ ಇಬ್ಬರು ಮಹಿಳೆಯರು ಇಡೀ ಚಂದ್ರಯಾನದ ಯೋಜನೆಯನ್ನು ಮುನ್ನಡೆಸುತ್ತಿದ್ದಾರೆ. ವಿಜ್ಞಾನಿ ಮುತ್ತಯ್ಯ ವನಿತಾ ಅವರು ಚಂದ್ರಯಾನದ ಯೋಜನೆ ನಿರ್ದೇಶಕರಾದರೆ, ರಿತು ಕರಿದಲ್‌ ಅವರು ಚಂದ್ರಯಾನದ ಕಾರ್ಯಯೋಜನೆ ನಿರ್ದೇಶಕರು.

Advertisement

ವನಿತಾ ಅವರು ಇಸ್ರೋದ ಉಪಗ್ರಹ ವಿಭಾಗದ ಟೆಲಿಕಾಂ ಮತ್ತು ಡಿಜಿಟಲ್‌ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಇದರೊಂದಿಗೆ ಅವರು ಡಿಜಿಟಲ್‌ ವ್ಯವಸ್ಥೆಯ ಟೆಲಿಮೆಟ್ರಿ ಮತ್ತು ಟೆಲಿಕಾಂ ವಿಭಾಗದ ಮುಖ್ಯಸ್ಥರೂ ಆಗಿದ್ದಾರೆ. ಕಾಟೋಸ್ಯಾಟ-1ರ ಉಪನಿರ್ದೇಶಕರೂ ಆಗಿದ್ದರು. ಓಸೀನ್‌ಸ್ಯಾಟ್‌, ಇತರ ಉಪಗ್ರಹ ನಿಯೋಜನೆಗಳಿಗೂ ಕೆಲಸ ಮಾಡಿದ್ದರು. ಉಪಗ್ರಹ ತಯಾರಿಕೆ, ಅವುಗಳ ಪರಿಶೀಲನೆ, ಜೋಡಿಸುವಿಕೆ, ಯೋಜನೆ ಜಾರಿ ಇತ್ಯಾದಿ ಕೆಲಸಗಳನ್ನು ಅವರ ಇಸ್ರೋದಲ್ಲಿ ಯಶಸ್ವಿಯಾಗಿ ನಿರ್ವಃಇಸಿದ್ದಾರೆ. 2006ರಲ್ಲಿ ಅವರು ಅತ್ಯುತ್ತಮ ಮಹಿಳಾ ವಿಜ್ಞಾನಿ ಪ್ರಶಸ್ತಿ ಪಡೆದಿದ್ದರು. 1987ರಲ್ಲಿ ಅವರು ಇಸ್ರೋ ಸೇರಿದ್ದರು.

ರೀತು ಅವರು ಕಾರ್ಯಯೋಜನೆ ನಿರ್ದೇಶಕರಾಗಿದ್ದು, ಇದಕ್ಕೂ ಮೊದಲು ಮಂಗಳಯಾನದ ಕಾರ್ಯನಿರ್ವಹಣೆ ನಿರ್ದೇಶಕರಾಗಿದದ್ದರು. ಇದು ಇಸ್ರೋದ ಪ್ರಮುಖ ಯೋಜನೆ ಮತ್ತು ಅನ್ಯಗ್ರಹಕ್ಕೆ ಉಪಗ್ರಹ ಕಳಿಸಿದ ಮೊದಲ ಯೋಜನೆಯಾಗಿದೆ. ಬಾಹ್ಯಾಕಾಶ ನೌಕೆಯ ಸ್ವಯಂಚಾಲಿತ ವ್ಯವಸ್ಥೆಗಳು, ಉಪಗ್ರಹದ ಸ್ವಯಂಚಾಲಿತ ವ್ಯವಸ್ಥೆಗಳು ಮತ್ತು ಬಾಹ್ಯಾಕಾಶದಲ್ಲಿ ಅವುಗಳು ಹಾಳಾದರೆ ತನ್ನಿಂದತಾನಾಗಿಯೇ ಸರಿಪಡಿಸಿಕೊಳ್ಳುವ ವ್ಯವಸ್ಥೆಯನ್ನು ರೂಪಿಸುವುದರಲ್ಲಿ ರೀತು ಅವರು ಹೆಚ್ಚಿನ ಪರಿಣತಿ ಹೊಂದಿದ್ದಾರೆ. ಐಐಎಸ್‌ಸಿಯಲ್ಲಿ ಅವರು ಏರೋಸ್ಪೇಸ್‌ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, 1997ರಿಂದ ಇಸ್ರೋದಲ್ಲಿ ಕೆಲಸ ಮಾಡುತ್ತಿದ್ದಾರೆ. 2007ರಲ್ಲಿ ಅವರು ಮಾಜಿ ರಾಷ್ಟ್ರಪತಿ ಡಾ| ಎ.ಪಿ.ಜೆ. ಅಬ್ದುಲ್‌ ಕಲಾಂರಿಂದ ಯುವ ವಿಜ್ಞಾನಿ ಪ್ರಶಸ್ತಿ ಪಡೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next