Advertisement

ದೀಪಾವಳಿ ಬಳಿಕ ದ್ವಿಚಕ್ರ ವಾಹನಗಳ ಬೆಲೆ ಏರಿಕೆ ಸಾಧ್ಯತೆ

09:55 AM Oct 22, 2019 | Hari Prasad |

ಹೊಸದಿಲ್ಲಿ: ಸದ್ಯದ ಮಾರುಕಟ್ಟೆಯಲ್ಲಿರುವ ಬಿಎಸ್‌4 (ಭಾರತ್‌ ಸ್ಟೇಜ್‌) ವಾಹನಗಳು ಈ ಹಣಕಾಸು ವರ್ಷದಲ್ಲಿ ಮಾತ್ರ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಎಪ್ರಿಲ್‌ 1ರಿಂದ ಬಿಎಸ್‌ 6 ಮಾದರಿ ವಾಹನಗಳು ಮಾರುಕಟ್ಟೆಗೆ ಬರಲಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ವಾಹನಗಳು ಸೇರಿದಂತೆ ಬಿಎಸ್‌ 6 ಮಾದರಿ ದ್ವಿಚಕ್ರ ವಾಹನಗಳ ದರ ದೀಪಾವಳಿ ಬಳಿಕ ಏರಿಕೆಯಾಗಲಿದೆ.

Advertisement

2000ನೇ ಇಸವಿಯಲ್ಲಿ ಬಿಎಸ್‌ ಮಾಲಿನ್ಯ ನಿಯಮ ಪರಿಚಯಿಸಲಾಯಿತು. 2010ರಲ್ಲಿ ಬಿಎಸ್‌ 3 ವಾಹನಗಳು ಮಾರುಕಟ್ಟೆಗೆ ಬಂದವು. ಬಿಎಸ್‌ 4 ಮಾದರಿಯ ವಾಹನಗಳ ಮುಂದಿನ ಅವತರಣಿಕೆಯೇ ಬಿಎಸ್‌ 6. ಪರಿಸರ ಸ್ನೇಹಿ ಎಂಜಿನ್‌ಗಳನು ಈ ವಾಹನಗಳು ಹೊಂದಿರಲಿದೆ. ಬಿಎಸ್‌ 3, ಬಿಎಸ್‌4 ಬಳಿಕ ಬಿಎಸ್‌ 6 ಮುಂದಿನ ವರ್ಷ ಜಾರಿಗೆ ಬರಲಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಬಿಎಸ್‌6 ದ್ವಿಚಕ್ರ ವಾಹನಗಳು ಮಾತ್ರ ಇದೆ. ಕಾರು, ಅಟೋ ರಿಕ್ಷಾ ಮತ್ತು ಕಮರ್ಷಿಯಲ್‌ ವಾಹನಗಳು ಮಾರ್ಚ್‌ ತಿಂಗಳ ಬಳಿಕ ಮಾರುಕಟ್ಟೆಗೆ ಬರಲಿದೆ. ಇನ್ನು ಕೆಲವು ಐಷರಾಮಿ ವಿದೇಶಿ ಕಾರುಗಳು ಈಗಾಗಲೇ ಲಭ್ಯ ಇವೆ.

ಶೇ. 10-15 ಏರಿಕೆ
ಸದ್ಯ ಮಾರುಕಟ್ಟೆಯಲ್ಲಿರುವ ಬಿಎಸ್‌6 ಮಾದರಿಯ ದ್ವಿ ಚಕ್ರವಾಹನಗಳು ಸಾಮಾನ್ಯ ದರಕ್ಕೆ ಮಾರಾಟವಾಗುತ್ತಿದೆ. ಆದರೆ ಈ ತಿಂಗಳಾಂತ್ಯದಲ್ಲಿ ಬರುವ ದೀಪಾವಳಿ ಹಬ್ಬದ ಬಳಿಕ ಅವುಗಳ ದರ ಶೇ. 10 ರಿಂದ 15 ಹೆಚ್ಚಾಗಲಿದೆ. ದೀಪಾವಳಿ ಬಳಿಕ ಕನಿಷ್ಠ 4 ಸಾವಿರ ರೂ.ಗಳು ಹೆಚ್ಚಾಗುವ ಸಾಧ್ಯತೆ ಇದೆ. ಉದಾ: 100 ಸಿಸಿ ಸಾಮರ್ಥ್ಯದ ಬೈಕ್‌ನ ಎಕ್ಸ್‌ ಶೋರೂಂ ದರ 40,000 ರೂ. ಇದ್ದರೆ ಅವುಗಳಿಗೆ ಹೆಚ್ಚುವರಿಯಾಗಿ 4 ಸಾವಿರ ರೂ. ಹೆಚ್ಚಾಗಲಿದೆ. 1 ಲಕ್ಷದ ಬೈಕ್‌ನ ದರ 10 ಸಾವಿರದಿಂದ 15 ಸಾವಿರ ರೂ. ಹೆಚ್ಚಾಗುವ ಸಾಧ್ಯತೆ ಇದೆ.

ಬಿಎಸ್‌ 4 ಗಡುವು
ಈಗ ಮಾರುಕಟ್ಟೆಯಲ್ಲಿರುವ ಬಿಎಸ್‌4 ಮಾದರಿಯ ವಾಹನಗಳನ್ನು 2020ರ ಮಾರ್ಚ್‌ ಒಳಗೆ ಮಾರಾಟಗೊಳಿಸಬೇಕಾಗಿದೆ. ಎಪ್ರಿಲ್‌ 1ರ ಬಳಿಕ ಮಾರಾಟಗೊಳ್ಳುವ ಎಲ್ಲಾ ವಾಹನಗಳು ಬಿಎಸ್‌6 ಮಾದರಿರ ಎಂಜಿನ್‌ ಹೊಂದಿರಬೇಕು. ಬಿಎಸ್‌6ರಲ್ಲಿ ಬಿಎಸ್‌4 ವಾಹನಕ್ಕೆ ಹೋಲಿಸಿದರೆ ಮಾಲಿನ್ಯ ಪ್ರಮಾಣ ಕಡಿಮೆ. ಪೆಟ್ರೋಲ್‌ ವಾಹನಗಳಲ್ಲಿ ಶೇ. 25 ಮತ್ತು ಡಿಸೇಲ್‌ ವಾಹನಗಳಲ್ಲಿ ಶೇ. 75 ಮಾಲಿನ್ಯ ಕಡಿಮೆ.

Advertisement

ದರ ಹೆಚ್ಚಳ ಯಾಕೆ
ಈಗಾಲೇ ಆರ್ಥಿಕ ಸಂಕಷ್ಟದಿಂದ ಅಟೋಮೊಬೈಲ್‌ ವಲಯ ತತ್ತರಿಸಿದೆ. ಬಿಎಸ್‌ 4 ಮಾದರಿಯ ವಾಹನಗಳು ಈಗಾಗಲೇ ಮಾರುಕಟ್ಟೆಯಲ್ಲಿ ವ್ಯಾಪಾರಗೊಳ್ಳದೇ ಉಳಿದಿದ್ದು, ಅವುಗಳನ್ನು ಬಿಎಸ್‌6 ಎಂಜಿನ್‌ಗೆ ಬದಲಾಯಿಸಬೇಕಾಗಿದೆ. ಇದಕ್ಕೆ ಹೆಚ್ಚುವರಿಯಾಗಿ ತಗಲುವ ವೆಚ್ಚವನ್ನು ಗ್ರಾಹಕನ ಮೇಲೆ ಸಂಸ್ಥೆಗಳು ಹಾಕಬೇಕಾಗಿದೆ. ಅತೀ ಕಡಿಮೆ ಅವಧಿಯಲ್ಲಿ ದೊಡ್ಡ ಪ್ರಮಾಣದ ವಾಹನಗಳನ್ನು ಬದಲಾಯಿಸುವುದು ಕಷ್ಟವಾದ ಕಾರಣ ದರ ದುಬಾರಿಯಾಗಲಿದೆ.

ಜಿಎಸ್‌ಟಿ ಕಡಿಮೆಯಾದರೆ ಹೆಚ್ಚಳ ಇಲ್ಲ
ಈಗಿನ ಅಟೋ ಮಾರುಕಟ್ಟೆಯ ಹಿನ್ನಡೆಗೆ ಜಿಎಸ್‌ಟಿ ಹೆಚ್ಚಿರುವುದು ಒಂದು ಕಾರಣವಾಗಿದೆ. ಇದರಿಂದ ಗ್ರಾಹಕರಿಗೆ ಹೊರೆಯಾಗುತ್ತಿದೆ. ಮುಂಬರುವ ದಿನಗಳಲ್ಲಿ ಇಳಿಕೆಯಾದರೆ ಬಿಎಸ್‌6 ವಾಹನಗಳ ದರದಲ್ಲಿ ಕೊಂಚ ಇಳಿಕೆ ಕಾಣಬಹುದು.

ಹೋಂಡಾ ಪ್ರಥಮ
ಭಾರತದಲ್ಲಿ ಮೊದಲ ಬಿಎಸ್‌6 ದ್ವಿ ಚಕ್ರ ವಾಹನವನ್ನು ಹೋಂಡಾ ಸಂಸ್ಥೆ ಪರಿಚಯಿಸಿದೆ. ಸೆಪ್ಟಬರ್‌ನಲ್ಲಿ ಆಕ್ಟಿವಾ 125 ಸ್ಕೂಟರ್‌ ಮಾರುಕಟ್ಟೆಗೆ ಬಂದಿದ್ದು ಒಳ್ಳೆಯ ಬೇಡಿಕೆ ಇದೆ. ಇದರ ದರ ಬಿಎಸ್‌4 ನ ಇದೇ ಮಾಡೆಲ್‌ಗೆ ಹೋಲಿಸಿದರೆ ಶೇ. 10-15 ಹೆಚ್ಚು. ಟಿವಿಎಸ್‌ ಸಂಸ್ಥೆ ಈಗಾಗಲೇ ತನ್ನ 19 ಮಾದರಿಯ ವಾಹನಗಳ ಉತ್ಪನ್ನವನ್ನು ಆರಂಭಿಸಿದ್ದು, ನವೆಂಬರ್‌ನಲ್ಲಿ ಮಾರುಕಟ್ಟೆಗೆ ಬರಲಿದೆ. ಹೀರೋ ಈಗಾಗಲೇ ತನ್ನ ಐಸ್ಮಾರ್ಟ್‌ 110 ಸಿಸಿ ಬೈಕ್‌ ಅನ್ನು ತಯಾರಿಸಿದ್ದು, ಮುಂದಿನ ತಿಂಗಳು ಅದು ಮಾರುಕಟ್ಟೆಗೆ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next