Advertisement

ಉಡುಪಿ-ಮಣಿಪಾಲದಲ್ಲಿ ದ್ವಿಚಕ್ರ ವಾಹನ ಕ್ರೇಝ್

09:56 PM Nov 10, 2019 | Sriram |

ಉಡುಪಿ: ಸೈಕಲ್‌ ಬಾಡಿಗೆಗೆ ಕೊಡುವ ವ್ಯವಸ್ಥೆ ಅಸ್ತಿತ್ವ ಕಳೆದುಕೊಂಡಿದ್ದು, ಉಡುಪಿ, ಮಣಿಪಾಲದಲ್ಲಿ ಖಾಸಗಿ ಕಂಪೆನಿ ಗಳಿಂದ ಆನ್‌ಲೈನ್‌ ಬುಕ್ಕಿಂಗ್‌ ಮೂಲಕ ದ್ವಿಚಕ್ರ ವಾಹನ ಬಾಡಿಗೆಗೆ ಒದಗಿಸುವ ವ್ಯವಹಾರ ಚುರುಕು ಗೊಂಡಿದೆ.

Advertisement

ಸುತ್ತಾಡಲು, ಖಾಸಗಿ ಕೆಲಸ, ನೆಂಟರ ಮನೆಗೆ, ಬಸ್‌/ರೈಲು/ವಿಮಾನ ನಿಲ್ದಾಣಕ್ಕೆ ಬಿಟ್ಟು ಬರಲು ದ್ವಿಚಕ್ರ ವಾಹನ ಬಾಡಿಗೆ ವ್ಯವಸ್ಥೆ ಅನುಕೂಲಕರವಾಗಿದೆ.

ಖಾಸಗಿ ಕಂಪೆನಿಯ ಆ್ಯಪ್‌ ಡೌನ್‌ಲೋಡ್‌ ಮಾಡಿದರೆ ಪೋಟೋ ಹಾಗೂ ಚಾಲನಾ ಪತ್ರದ ಪ್ರತಿಯನ್ನು ಅಪ್‌ಲೋಡ್‌ ಮಾಡಬೇಕು. ಯಾವ ವಾಹನ ಬೇಕೆನ್ನುವ ಮಾಹಿತಿ ಲಭ್ಯವಾಗುತ್ತದೆ.

ಉಡುಪಿ, ಮಣಿಪಾಲದಲ್ಲಿ ನಿಗದಿತ ದ್ವಿಚಕ್ರ ವಾಹನ ಬಾಡಿಗೆಗೆ ಒದಗಿಸುವ ವಲಯಕ್ಕೆ ತೆರಳಿ ಪೆಟ್ರೋಲ್‌ ತುಂಬಿಸಿದ, ಹೆಲ್ಮೆಟ್‌ ಸಹಿತ ವಾಹನ ಒಯ್ದರೆ ಗಂಟೆಗೆ 30 ರೂ. ಜತೆಗೆ ಪ್ರತಿ ಕಿ.ಮಿ.ಗೆ 5 ರೂ. ಶುಲ್ಕವಿದ್ದು, ಸವಾರಿ ಮುಗಿದ ಬಳಿಕ ಬ್ಯಾಂಕ್‌ ಖಾತೆಯಿಂದ ಮೊತ್ತ ಕಡಿತವಾಗುತ್ತದೆ.

ಆ್ಯಪ್‌ ಡೌನ್‌ಲೋಡ್‌ ಮಾಡಿ ಮೊದಲ ಬಾರಿಯ ಸವಾರಿಯನ್ನು 100 ರೂ. ಮೌಲ್ಯದಲ್ಲಿ ಉಚಿತವಾಗಿ ಮಾಡಬಹುದು.

Advertisement

ಹೆಲ್ಮೆಟ್‌ ವಾಹನಕ್ಕೂ ಜಿಪಿಎಸ್‌ ವ್ಯವಸ್ಥೆಯಿದ್ದು ಏಕಾಂಗಿ, ಜೋಡಿ ಪಯಣಕ್ಕಿದು ಅನುಕೂಲಕರವಾಗಿದೆ. ಸವಾರರಿಗೆ ಅಪಘಾತ ವಿಮಾ ವ್ಯವಸ್ಥೆಯಿದ್ದು, ವಾಹನಕ್ಕೆ ಏನಾದರೂ ಹಾನಿಯಾದರೆ ಗ್ರಾಹಕನೇ ಹೊಣೆಗಾರನಾ ಗಬೇಕಾಗುತ್ತದೆ. ಒಂದು ವಲಯದಲ್ಲಿ ಬಾಡಿಗೆ ಪಡೆದ ವಾಹನವನ್ನು ಮತ್ತೂಂದು ವಲಯದಲ್ಲಿ ಬಿಟ್ಟು ಹೋಗುವ ಅವಕಾಶವಿದೆ. ಬೌನ್ಸ್‌ ಖಾಸಗಿ ಸಂಸ್ಥೆ ವತಿಯಿಂದ ಬೆಂಗಳೂರು, ಮೈಸೂರು, ಹಾಸನದಲ್ಲಿ ದ್ವಿಚಕ್ರ ವಾಹನ ಬಾಡಿಗೆಗೆ ನಿಡುವ ವ್ಯವಸ್ಥೆಯಿದ್ದು, ಉಡುಪಿ ಮಣಿಪಾಲದ 14 ವಲಯಗಳಲ್ಲಿ 162 ಸ್ಕೂಟಿಗಳನ್ನು ನಿಯೋಜಿಸಲಾಗಿದೆ.

ರಾಜ್ಯದ ಬಹುತೇಕ ಕಡೆ ಖಾಸಗಿ ಸಂಸ್ಥೆಗಳ ಮೂಲಕ ಸ್ಕೂಟಿ ವಾಹನಗಳನ್ನು ನೀಡಲಾಗುತ್ತದೆ. ಈಗಾಗಲೇ ಉಡುಪಿ-ಮಣಿಪಾಲದಲ್ಲಿ ಹಲವಾರು ಮಂದಿ ಇದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ಇದು ಇನ್ನಷ್ಟು ಜನಪ್ರಿಯವಾಗುವ ವಿಶ್ವಾಸವಿದೆ.
-ಶರತ್‌, ಮ್ಯಾನೇಜರ್‌,
ಮಣಿಪಾಲ ಬೌನ್ಸರ್‌ ಸಂಸ್ಥೆ

Advertisement

Udayavani is now on Telegram. Click here to join our channel and stay updated with the latest news.

Next