Advertisement

“ಆಯೋಗದ ದ್ವಿಮುಖ ನೀತಿ’

02:06 AM Apr 08, 2019 | Team Udayavani |

ಉಡುಪಿ: ಕೇಂದ್ರ ಸರಕಾರದ ಯೋಜನೆಗೆ ಅನುಮತಿ ನೀಡಿದ ಚುನಾವಣ ಆಯೋಗ ರಾಜ್ಯ ಸರಕಾರದ ಯೋಜನೆಗೆ ಅನುಮತಿ ಏಕೆ ನೀಡಿಲ್ಲ? ಆಯೋಗದ ದ್ವಿಮುಖ ನೀತಿಗೆ ನಮ್ಮ ಪ್ರತಿರೋಧವಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಎಂದರು.

Advertisement

ಉಡುಪಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2018-19ನೇ ಸಾಲಿನಲ್ಲಿ ರೈತರ ಸಾಲ ಮನ್ನಾ ಯೋಜನೆಯಂತೆ ಹಣ ವರ್ಗಾವಣೆಯಾಗಬೇಕಿತ್ತು. ಅದನ್ನು ಆಯೋಗ ತಡೆ ಹಿಡಿದಿದೆ.

ಆದರೆ ಕೇಂದ್ರದ ನೇರ ವರ್ಗಾವಣೆ (ಡಿಬಿಟಿ) ಯೋಜನೆಗೆ ಒಪ್ಪಿದೆ. ನಮ್ಮದೂ ಮುಂದುವರಿದ ಕಾರ್ಯಕ್ರಮವಾಗಿದೆ ಎಂದರು.

ದ.ಕ. ಜಿಲ್ಲೆಗೆ ಮೋದಿ  ಕೊಡುಗೆ ಏನು?
ಮಂಗಳೂರು: ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ಮೋದಿಯನ್ನು ನೋಡಿ ಮತ ಹಾಕಿ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ; ಆದರೆ ದ.ಕ. ಜಿಲ್ಲೆಗೆ ಮೋದಿ ಕೊಡುಗೆ ಏನು ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next