Advertisement

ಮಂಗಳೂರು: ATMಗೆ ಸ್ಕಿಮ್ಮಿಂಗ್ ಉಪಕರಣ ಅಳವಡಿಸಲು ಯತ್ನ, ಇಬ್ಬರು ವಂಚಕರ ಸೆರೆಹಿಡಿದ ಸ್ಥಳಿಯರು

09:22 AM Feb 23, 2021 | Team Udayavani |

ಮಂಗಳೂರು: ಎಟಿಎಂ ನಲ್ಲಿ ಸ್ಕಿಮ್ಮಿಂಗ್ ಉಪಕರಣ ಅಳವಡಿಸಲು ಯತ್ನಿಸುತ್ತಿದ್ದ ಇಬ್ಬರು ವಂಚಕರನ್ನು ಸ್ಥಳೀಯರು ಸೆರೆ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

Advertisement

ನಗರದ ಮಂಗಳಾದೇವಿಯಲ್ಲಿರುವ ಎಟಿಎಂನಲ್ಲಿ‌ ಈ ವಂಚಕರು ಸ್ಕಿಮ್ಮಿಂಗ್ ಉಪಕರಣ ಅಳವಡಿಸಲು ಯತ್ನಿಸುತ್ತಿದ್ದರು. ಇದನ್ನು ಗಮನಿಸಿದ ಸ್ಥಳಿಯರು ಇವರನ್ನು ಸೆರೆ ಹಿಡಿಯಲು ಹೋದಾಗ ವಂಚಕರು ತಪ್ಪಿಸಲು ಯತ್ನಸಿದ್ದಾರೆ. ಕೂಡಲೇ ಮೂವರು ಸೇರಿ ವಂಚಕರನ್ನು ಸೆರೆ ಹಿಡಿದಿದ್ದಾರೆ. ಈ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ:ಚಿಕ್ಕಬಳ್ಳಾಪುರ: ಜಿಲೆಟಿನ್ ಸ್ಫೋಟ ನಡೆದು ಐವರು ಸಾವು, ಓರ್ವನಿಗೆ ಗಾಯ!

ವಂಚಕರನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಸೈಬರ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

ಏನಿದು ಸ್ಕಿಮ್ಮಿಂಗ್?: ಎಟಿಎಂ ಯಂತ್ರಗಳಲ್ಲಿ ಸೂಕ್ಷ್ಮ ಉಪಕರಣ ಅಳವಡಿಸಿ ಎಟಿಎಂ ಕಾರ್ಡ್‌ಗಳ ಮಾಹಿತಿ ಕದ್ದು ಅನಂತರ ನಕಲಿ ಕಾರ್ಡ್‌ ತಯಾರಿಸಿ ಹಣ ವಿದ್‌ಡ್ರಾ ಮಾಡುವುದಕ್ಕೆ “ಸ್ಕಿಮ್ಮಿಂಗ್‌’ಎನ್ನಲಾಗುತ್ತದೆ. ಇದಕ್ಕಾಗಿ ವಂಚಕರು ಅಳವಡಿಸುವ ಉಪಕರಣವು ಬಳಕೆದಾರರು ಎಟಿಎಂ ಕಾರ್ಡ್‌ ಸ್ವೈಪ್‌ ಮಾಡಿದಾಗ ಅದರಲ್ಲಿರುವ 16 ಅಂಕಿಗಳ ಸಂಖ್ಯೆ ಮತ್ತು ಸಿವಿಸಿ ಸಂಖ್ಯೆಗಳನ್ನು ದಾಖಲಿಸಿಕೊಳ್ಳುತ್ತದೆ.

ಮಂಗಳೂರು ಭಾಗದಲ್ಲಿ ಇತ್ತೀಚೆಗೆ ಇಂತಹ ಕೆಲವು ಘಟನೆಗಳು ನಡೆದಿದೆ. ನಗರದ ಚಿಲಿಂಬಿ, ನಾಗುರಿ ಮತ್ತು ಕುಳಾçಯ ತಲಾ ಒಂದು ಎಟಿಎಂಗಳಲ್ಲಿ ಈ ರೀತಿ ಸ್ಕಿಮ್ಮಿಂಗ್‌ ನಡೆದಿದ್ದು, ವಂಚಕರು ನೂರಾರು ಗ್ರಾಹಕರ ಲಕ್ಷಾಂತರ ರೂಪಾಯಿಗಳನ್ನು ಎಗರಿಸಿದ್ದಾರೆ. ಕಳೆದ ಫೆ.10ರಂದು ಉದಯವಾಣಿ ಇದರ ಬಗ್ಗೆ ಜಾಗೃತಿ ಮೂಡಿಸಲು ವರದಿ ಮಾಡಿತ್ತು.

ಇದನ್ನೂ ಓದಿ: “ಸ್ಕಿಮ್ಮಿಂಗ್‌’: ಎಟಿಎಂ ಬಳಕೆದಾರರೇ ಎಚ್ಚರ! ಸೈಬರ್‌ ಅಪರಾಧ ಹೆಚ್ಚಳ

ಗ್ರಾಹಕರೇನು ಮಾಡಬೇಕು?
– ಎಟಿಎಂನಲ್ಲಿ ಅನುಮಾಸ್ಪಾದವಾದ ಉಪಕರಣ ಜೋಡಣೆಯಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು.
– ಅನುಮಾನ ಬಂದರೆ ಅಲ್ಲಿ ಕಾರ್ಡ್‌ ಬಳಕೆ ಮಾಡದೆ ಕೂಡಲೇ ಹತ್ತಿರದ ಬ್ಯಾಂಕ್‌ ಅಥವಾ ಪೊಲೀಸರಿಗೆ ಮಾಹಿತಿ ನೀಡಬೇಕು.
– ಸ್ಕಿಮ್ಮಿಂಗ್‌ ಅನುಮಾನ ಬಂದರೆ ಎಟಿಎಂ ಕಾರ್ಡ್‌ ಬ್ಲಾಕ್‌ ಮಾಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next