Advertisement

ಚಂದ್ರನ ನೆಲಕ್ಕೆ ಇಬ್ಬರು ಪ್ರವಾಸಿಗರು

03:50 AM Mar 01, 2017 | Team Udayavani |

ವಾಷಿಂಗ್ಟನ್‌: ಮಂಗಳನ ಮೇಲೆ 10 ಲಕ್ಷ ಮಂದಿಯ ಕಾಲೋನಿ ನಿರ್ಮಿಸುವ ಘೋಷಣೆ ಹೊರಡಿಸಿದ್ದ ಅಮೆರಿಕದ “ಸ್ಪೇಸ್‌ ಎಕ್ಸ್‌’ ರಾಕೆಟ್‌ ನಿರ್ಮಾಣ ಸಂಸ್ಥೆ ಮುಂದಿನ ವರ್ಷ ಇಬ್ಬರು ಪ್ರವಾಸಿಗರನ್ನು ಚಂದ್ರನಲ್ಲಿಗೆ ಕರೆದೊಯ್ಯಲು ಮುಂದಾಗಿದೆ. ಆದರೆ, ಆ ಇಬ್ಬರು ಪ್ರವಾಸಿಗರು ಚಂದ್ರನ ಮೇಲೆ ಕಾಲಿಡುಧಿವುದಿಲ್ಲ. ಚಂದ್ರನ ವಾತಾವರಣದಲ್ಲಿ ದೀರ್ಘ‌ ಸುತ್ತು ಹಾಕಲಿದ್ದಾರೆ!

Advertisement

ಸ್ಪೇಸ್‌ ಎಕ್ಸ್‌ ಮುಖ್ಯಸ್ಥ ಇಲೋನ್‌ ಮಸ್ಕ್ 2018ರ ಈ ಯೋಜನೆ ಕುರಿತು ಮಾಹಿತಿ ಬಿಚ್ಚಿಟ್ಟಿದ್ದು, ಅಂದುಕೊಂಡಂತೆ ಆದರೆ 46 ವರ್ಷದ ಬಳಿಕ ಚಂದ್ರನ ವಾತಾವರಣಕ್ಕೆ ಮಾನವನ ಪ್ರವೇಶ ಆದಂತಾಗುತ್ತದೆ. ಈ ಬಾಹ್ಯಾಕಾಶ ಯಾತ್ರೆಗೆ ಸಿದ್ಧವಾದ ಪ್ರವಾಸಿಗರ ಹೆಸರು, ಪ್ರಯಾಣದ ವೆಚ್ಚದ ಕುರಿತು ಮಸ್ಕ್ ಬಾಯಿಬಿಟ್ಟಿಲ್ಲ. ಆದರೆ, ಸ್ಪೇಸ್‌ ಎಕ್ಸ್‌ ಸಿದ್ಧಪಡಿಸಿದ ರಾಕೆಟ್‌ ಫಾಲ್ಕನ್‌ನ ನಿರ್ಮಾಣ ವೆಚ್ಚ 60 ಶತಕೋಟಿ ರೂಪಾಯಿ. ಇನ್ನು ಪ್ರಯಾಣದ ವೆಚ್ಚ ಊಹಿಸಲೂ ಅಸಾಧ್ಯ!

7 ದಿನಗಳ ಪ್ರವಾಸ ಇದಾಗಿದೆ. ನಾಸಾದ ಬಾಹ್ಯಾಕಾಶ ಯಾತ್ರಿಗಳಿಗಾಗಿ ಫಾಲ್ಕನ್‌ ರಾಕೆಟ್‌ ಮತ್ತು ಡ್ರಾಗನ್‌ 2 ಕ್ಯಾಪುÕಲ್ಸ್‌ ಸಿದ್ಧಪಡಿಸಲಾಗಿತ್ತು. ಆದರೆ, ಆ ಯೋಜನೆ ಮುಂದಕ್ಕೆ ಹೋಗಿದ್ದರಿಂದ ಸ್ಪೇಸ್‌ ಎಕ್ಸ್‌ ಅದೇ ರಾಕೆಟ್‌, ಉಪಕರಣಗಳನ್ನು ಈ ಯೋಜನೆಗೆ ಬಳಸುತ್ತಿದೆ. ಈ ಹಿಂದೆ ರಷ್ಯಾದ ಸುಯೇಜ್‌ ರಾಕೆಟ್‌ 7 ಪ್ರವಾಸಿಗರನ್ನು ಭೂಮಿಯಿಂದ 200 ಮೈಲುಗಳ ಮೇಲಕ್ಕೆ ಹೊತ್ತೂಯ್ದಿತ್ತು. ಆದರೆ, ಈ ಚಂದ್ರಯಾತ್ರೆ 3ರಿಂದ 4 ಲಕ್ಷ ಮೈಲುಗಳಷ್ಟು ಸುದೀರ್ಘ‌. 

Advertisement

Udayavani is now on Telegram. Click here to join our channel and stay updated with the latest news.

Next