Advertisement
ಪಿಎಫ್‌ಐ ಅಸ್ಸಾಂ ಘಟಕದ ಅಧ್ಯಕ್ಷರಾಗಿದ್ದ ಅಬು ಸಮಾ ಅಹ್ಮದ್ , ನಿಷೇಧಿತ ಗುಂಪಿನ ರಾಜ್ಯ ಕಾರ್ಯದರ್ಶಿಯಾಗಿದ್ದ ಜಾಕಿರ್ ಹುಸೇನ್ ಬಂಧಿತ ನಾಯಕರು. ಇವರೊಂದಿಗೆ ಪೊಲೀಸರು ಮತ್ತೊಂದು ನಿಷೇಧಿತ ಗುಂಪು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ (ಸಿಎಫ್‌ಐ) ನಾಯಕ ಸಾಹಿದುಲ್ ಇಸ್ಲಾಂನನ್ನು ಕೂಡ ಬಂಧಿಸಿದ್ದಾರೆ.
Related Articles
Advertisement
ಪಿಎಫ್ ಐ ಮತ್ತು ಅದರ ಅಂಗಸಂಸ್ಥೆಗಳು “ದೇಶದ ಸಮಗ್ರತೆ, ಸಾರ್ವಭೌಮತ್ವ ಮತ್ತು ಭದ್ರತೆಗೆ ಧಕ್ಕೆ ತಂದು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ. ಸಾರ್ವಜನಿಕ ಶಾಂತಿ ಮತ್ತು ಕೋಮು ಸೌಹಾರ್ದತೆಗೆ ಭಂಗ ತರುವ ಸಾಮರ್ಥ್ಯವನ್ನು ಹೊಂದಿವೆ ಎಂದು ಗೃಹ ಸಚಿವಾಲಯ ಹೇಳಿತ್ತು.
ಪಿಎಫ್‌ಐ ಜೊತೆ ರೆಹಬ್ ಇಂಡಿಯಾ ಫೌಂಡೇಶನ್ (RIF), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CF), ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (AIIC), ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್ (NCHRO), ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ರಿಹ್ಯಾಬ್ ಫೌಂಡೇಶನ್, ಕೇರಳ ಮುಂತಾದ ಸಂಘಟನೆಗಳನ್ನೂ ಕೇಂದ್ರ ನಿಷೇಧಿಸಿತ್ತು.