Advertisement
ಇಡೀ ಶೈಕ್ಷಣಿಕ ವರ್ಷವನ್ನು ಎರಡು ಅವಧಿಗಳಾಗಿ ವಿಭಜಿಸಲಾಗುತ್ತದೆ. ಪಠ್ಯ ಕ್ರಮವನ್ನು ಪ್ರತೀ ಅವಧಿಗೆ ಶೇ. 50ರಂತೆ ನಿಗದಿಪಡಿಸಲಾಗುತ್ತದೆ. ವರ್ಗೀಕರಿಸಿದ ಪಠ್ಯಕ್ರಮದ ಆಧಾರದಲ್ಲಿ ಪ್ರತೀ ಅವಧಿಯ ಕೊನೆಗೆ ಮಂಡಳಿ ಪರೀಕ್ಷೆ ನಡೆಸಲಿದೆ. ಅಂದರೆ ವರ್ಷದ ಕೊನೆಗೆ ಪರೀಕ್ಷೆ ನಡೆಸುವ ಬದಲು ವರ್ಷಕ್ಕೆ ಎರಡು ಬಾರಿ ಪರೀಕ್ಷೆ ನಡೆಸಿ ಮೌಲ್ಯಮಾಪನ ಮಾಡಲಾಗುತ್ತದೆ.ಅಂದಾಜು ನವೆಂಬರ್-ಡಿಸೆಂಬರ್ 2021ರಲ್ಲಿ 1ನೇ ಅವಧಿಯ ಪರೀಕ್ಷೆ ನಡೆಯುತ್ತದೆ. ಪ್ರಶ್ನೆ ಪತ್ರಿಕೆಯು ಬಹು ಆಯ್ಕೆಯ ಪ್ರಶ್ನೆ (ಶೇ.50ರಷ್ಟು ಸಿಲೆಬಸ್‌ಗೆ ಸಂಬಂಧಿಸಿದ್ದು ಮಾತ್ರ)ಗಳನ್ನು ಒಳಗೊಂಡಿದ್ದು, 90 ನಿಮಿಷಗಳ ಪರೀಕ್ಷೆ ನಡೆಸಲಾಗುತ್ತದೆ.