Advertisement

2 ಸಾವಿರ ದಾಟಿದ ಸೋಂಕಿತರ ಸಾವು: ದಾಖಲೆ 2,819 ಗುಣಮುಖ; 5,536 ಮಂದಿಗೆ ಸೋಂಕು

03:06 AM Jul 29, 2020 | Hari Prasad |

ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ 102 ಕೋವಿಡ್ 19 ವೈರಸ್‌ ಸೋಂಕಿತರು ಚಿಕಿತ್ಸೆ ಫ‌ಲಕಾರಿಯಾಗದೆ ಸಾವಿಗೀಡಾಗಿದ್ದಾರೆ.

Advertisement

ಈ ಮೂಲಕ ಒಟ್ಟಾರೆ ಕೋವಿಡ್ 19 ಸೋಂಕಿಗೆ ಬಲಿಯಾದವರ ಸಂಖ್ಯೆ ಎರಡು ಸಾವಿರ ಗಡಿ ದಾಟಿದೆ.

ಇದರೊಂದಿಗೆ ಸೋಂಕು ಪ್ರಕರಣಗಳು ಏರಿಕೆ ಹಾದಿಯಲ್ಲಿಯೇ ಸಾಗಿದ್ದು, ಹೊಸದಾಗಿ 5,536 ಮಂದಿಗೆ ಕೋವಿಡ್ 19 ಸೋಂಕು ತಗಲಿದೆ.

ರಾಜ್ಯದಲ್ಲಿ ಒಟ್ಟಾರೆ 1,07,002 ಸೋಂಕು ಪ್ರಕರಣಗಳಿದ್ದರೆ ಸೋಂಕಿನಿಂದ ಜೀವ ಕಳೆದುಕೊಂಡವರ ಸಂಖ್ಯೆ 2,055ಕ್ಕೆ ತಲುಪಿದೆ.

ಮಂಗಳವಾರ ದಾಖಲೆಯ 2,819 ಸೋಂಕಿತರು ಗುಣಮುಖರಾಗಿದ್ದು, ಒಟ್ಟಾರೆ 40,504 ಮಂದಿ ಸೋಂಕಿನಿಂದ ಮುಕ್ತರಾಗಿದ್ದಾರೆ.

Advertisement

ಸದ್ಯ 64,434 ಸೋಂಕಿತರು ಆಸ್ಪತ್ರೆ, ಕೋವಿಡ್ ಕೇರ್‌ ಸೆಂಟರ್‌ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.

ಸೋಂಕಿತರ ಸಾವು ಹೆಚ್ಚಳ
ಜುಲೈ ಆರಂಭದಿಂದ ಸೋಂಕಿತರ ಸಾವು ಹೆಚ್ಚಳವಾಗಿದ್ದು, ಜು. 1ರಿಂದ 28ರ ವರೆಗೆ 1,809 ಮಂದಿ ಮೃತಪಟ್ಟಿದ್ದಾರೆ. ಅಂದರೆ ನಿತ್ಯ ಸರಾಸರಿ 64 ಮಂದಿ ಮೃತಪಟ್ಟಿದ್ದಾರೆ. ಜು. 16ರಂದು 1,000 ಗಡಿ ದಾಟಿತ್ತು. 12 ದಿನಗಳಲ್ಲಿಯೇ ಮತ್ತೆ 1,023 ಸೋಂಕಿತರ ಸಾವಿನೊಂದಿಗೆ 2,000 ಗಡಿ ದಾಟಿದೆ.

ಬೆಂಗಳೂರಿನಲ್ಲಿಯೇ ಶೇ.45ರಷ್ಟು (957 ಮಂದಿ), ಮೈಸೂರು, ದಕ್ಷಿಣ ಕನ್ನಡ, ಧಾರವಾಡದಲ್ಲಿ ತಲಾ ನೂರಕ್ಕೂ ಹೆಚ್ಚು ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ರಾಜ್ಯದ ಮರಣ ದರ ಶೇ. 2ರಷ್ಟಿದೆ. ಅಂದರೆ ಸೋಂಕು ದೃಢಪಟ್ಟ 100 ಮಂದಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ದೇಶದಲ್ಲಿಯೇ ಸೋಂಕಿತರ ಮೃತರ ಪಟ್ಟಿಯಲ್ಲಿ ರಾಜ್ಯ 5ನೇ ಸ್ಥಾನದಲ್ಲಿದೆ. ಇನ್ನು ಮಂಗಳವಾರ ಮೃತಪಟ್ಟ 102 ಮಂದಿಯಲ್ಲಿ 40 ಬೆಂಗಳೂರಿವರು.


4 ಜಿಲ್ಲೆ ದ್ವಿಶತಕ, 11 ಜಿಲ್ಲೆ ಶತಕ
ಮಂಗಳವಾರ 16,340 ರ್ಯಾಪಿಡ್‌ ಆ್ಯಂಟಿಜೆನ್‌ ಮತ್ತು 21,380 ಆರ್‌ಟಿಪಿಸಿಆರ್‌ ಸೇರಿ ಒಟ್ಟು 37,720 ಮಂದಿಯ ಪರೀಕ್ಷೆ ನಡೆಸಲಾಗಿದ್ದು ಅತ್ಯಧಿಕ 5,536 ಪಾಸಿಟಿವ್‌ ವರದಿಯಾಗಿವೆ. ಈ ಪೈಕಿ 1,898 ಮಂದಿ ಬೆಂಗಳೂರಿನವರು.

ಉಳಿದಂತೆ ಬಳ್ಳಾರಿಯಲ್ಲಿ 452, ಕಲಬುರಗಿ, ಬೆಳಗಾವಿ, ಮೈಸೂರು, ತುಮಕೂರಿನಲ್ಲಿ ತಲಾ 200ಕ್ಕೂ ಹೆಚ್ಚು, ಕೋಲಾರ, ದಕ್ಷಿಣ ಕನ್ನಡ, ಧಾರವಾಡ, ವಿಜಯಪುರ, ಕೊಪ್ಪಳ, ದಾವಣಗೆರೆ, ಬಾಗಲಕೋಟೆ, ಉಡುಪಿ, ಹಾಸನ, ಬೆಂಗಳೂರು ಗ್ರಾಮಾಂತರ, ರಾಮನಗರದಲ್ಲಿ ತಲಾ ನೂರಕ್ಕೂ ಹೆಚ್ಚು ಮಂದಿ ಸೋಂಕಿತರಾಗಿದ್ದಾರೆ.

ಸಚಿವ ಸುಧಾಕರ್‌ ಕೊಠಡಿ ಸೀಲ್‌ ಡೌನ್‌
ವೈದ್ಯಕೀಯ ಶಿಕ್ಷಣ ಸಚಿವ ಡಾ| ಸುಧಕಾರ್‌ ಅವರ ಆಪ್ತ ಸಿಬಂದಿಗೆ ಪಾಸಿಟಿವ್‌ ಬಂದಿರುವುದರಿಂದ ವಿಧಾನ ಸೌಧದ ಮೂರನೇ ಮಹಡಿಯಲ್ಲಿರುವ ಅವರ ಕಚೇರಿಯನ್ನು ಸೀಲ್‌ ಡೌನ್‌ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next